Thursday, June 13, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ವರ್ಗಾವಣೆಗೆ ತಡೆ ಆಜ್ಞೆ ತಂದ ಬಿ ಇ ಓ ಕಾಳೀರಯ್ಯ

ವರದಿ : ನ.ಲಿ.ಕೃಷ್ಣ

ಮದ್ದೂರು ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಯಿಂದ ವರ್ಗಾವಣೆಗೊಂಡಿದ್ದ  ಬಿ ಇ ಓ ಕಾಳೀರಯ್ಯ ಅವರು ತಮ್ಮ ವರ್ಗಾವಣೆ ಕುರಿತು ಕೆ ಇ ಟಿ ಯಲ್ಲಿ ಅರ್ಜಿ ಸಲ್ಲಿಸಿ ವರ್ಗಾವಣೆಗೆ ತಡೆ ಅಜ್ಞೆ ತಂದಿದ್ದಾರೆ‌.

ದಿ 2-8-2023 ರಂದು ಸಿ. ಎಚ್. ಕಾಳೀರಯ್ಯ ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಯಿಂದ ಸಿ ಟಿ ಐ ಮೈಸೂರು ಜಿಲ್ಲೆ ಇವರ ಜಾಗಕ್ಕೆ ವರ್ಗಾವಣೆ ಮಾಡಿ ಸಿ ಐ ಟಿ ಮೈಸೂರು ಜಿಲ್ಲೆ ಇಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದ ವೈ ಕೆ ತಿಮ್ಮೇಗೌಡ ಇವರನ್ನು ಮದ್ದೂರು ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಸರ್ಕಾರ ವರ್ಗಾವಣೆ ಮಾಡಿತ್ತು

ಈ ವರ್ಗಾವಣೆ ಪ್ರಶ್ನಿಸಿ ಸಿ. ಎಚ್ .ಕಾಳೀರಯ್ಯ ಇವರು ಕರ್ನಾಟಕ ಆಡಳಿತ ನ್ಯಾಯಮಂಡಳಿ ಬೆಂಗಳೂರು ಪೀಠ ಇಲ್ಲಿ ಅರ್ಜಿ ಸಲ್ಲಿಸಿದ್ದರ ಮೇರೆಗೆ ( ಅರ್ಜಿ ಸಂಖ್ಯೆ :3538/2023) ದಿ 7-8-2023 ರಂದು ಮಧ್ಯಂತರ ತೀರ್ಪು ನೀಡಿರುವ ಕರ್ನಾಟಕ ಆಡಳಿತ ನ್ಯಾಯಮಂಡಳಿ ಈ ವರ್ಗಾವಣೆಗೆ ತಡೆ ಅಜ್ಞೆ ನೀಡಿದೆ.

ಇದರಂತೆ ಕಾಳೀರಯ್ಯ ಅವರು ಮದ್ದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಮುಂದವರೆದಿದ್ದಾರೆ.

ಅದರಂತೆ ವೈ ಕೆ ತಿಮ್ಮೇಗೌಡ ಅವರ ಸಿಟಿಇ ಮೈಸೂರು ಜಿಲ್ಲೆಗೆ ಮರಳಿದ್ದಾರೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!