Wednesday, October 23, 2024

ಪ್ರಾಯೋಗಿಕ ಆವೃತ್ತಿ

ಭಗವಾನ್ ಬುದ್ಧರ 2566ನೇ ಜಯಂತಿ

ಮಂಡ್ಯ ಜಿಲ್ಲಾ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಇದೇ ತಿಂಗಳ 16ರಂದು ಸಂಜೆ 4 ಗಂಟೆಗೆ ಅಂಬೇಡ್ಕರ್ ಭವನದ ಧ್ಯಾನ ಕೇಂದ್ರದಲ್ಲಿ ಭಗವಾನ್ ಬುದ್ದರ 2566ನೇ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಭಾರತೀಯ ಬೌದ್ದ ಮಹಾಸಭಾದ ಆದ್ಯಕ್ಷರಾದ ಬಿ. ಅನ್ನದಾನಿಯವರು ಮಂಡ್ಯದ ಸುದ್ಧಿ ಗೋಷ್ಠಿಯಲ್ಲಿ ತಿಳಸಿದರು.

ಪ್ರಸ್ತುತ ಈ ಜಗತ್ತಿಗೆ ಬುದ್ಧನ ಸಂದೇಶಗಳು ಅತ್ಯಂತ ಅವಶ್ಯಕವಾಗಿವೆ. ಇಂದು ಜಗತ್ತಿಗೆ ಅದ್ಭುತವಾದದನ್ನು ಕೊಟ್ಟಂತಹ ಕರುಣೆ, ಮೈತ್ರಿ, ಪ್ರೀತಿ ಇವತ್ತು ಎಲ್ಲಾ ಕಾಲಕ್ಕಿಂತಲೂ ಪ್ರಸ್ತುತವಾಗಿದೆ. ಜಗತ್ತಿನಾದ್ಯಂತ ನಡೆಯುತ್ತಿರುವ ಕ್ರೌರ್ಯವನ್ನು ಒಂದು ತಹಬದಿಗೆ ತರಬೇಕೆಂದರೆ ಶಾಂತಿ ಮಂತ್ರದಿಂದ ಮಾತ್ರ ಸಾಧ್ಯ ಎಂಬುದನ್ನು ಜಗತ್ತಿಗೆ ಗೌತಮ ಬುದ್ಧರವರು ಈ ಹಿಂದೆಯೇ ತಿಳಿಸಿಕೊಟ್ಟಿದ್ದಾರೆ. ಆದ್ದರಿಂದ ನಾವು ಈ ಮಹಾನ್ ಐತಿಹಾಸಿಕ ಪುರಷನ ಜಯಂತಿಯನ್ನು ಆಚರಿಸುತ್ತಿದ್ದೇವೆ.

ಅಂಬೇಡ್ಕರ್, ಬೌದ್ಧರ ಅನುಯಾಯಿಗಳು ಮತ್ತು ಬುದ್ಧನ ಸಂದೇಶವನ್ನು ಸಾರುವಂತಹ ಎಲ್ಲಾ ಮಾನವತಾವಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಭಂತೇಜಿಯವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ಅಂಬೇಡ್ಕರ್ ವಾದಿಗಳಾದ ಎಸ್. ಸಿದ್ದಯ್ಯನವರು ಮಾತನಾಡುತ್ತ, ಭಗವಾನ್ ಬುದ್ಧರ ಸಂದೇಶ ಮೈತ್ರಿ, ಶಾಂತಿ ಮತ್ತು ಅನುಕಂಪವನ್ನು ಕೊಡುವಂತಹದ್ದು, ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ಘೋಷಣೆಯನ್ನು ಪ್ರಪಥಮ ಬಾರಿಗೆ ಇಡೀ ಜಗತ್ತಿನನಲ್ಲಿ ಸಾರಬಹುದಾದ ಪ್ರೀತಿ, ಪ್ರೇಮ ಸಂದೇಶಗಳನ್ನು ಬಯಸಿದಂತಹ ಭಗವಾನ್ ಬುದ್ಧರ 2556ನೇ ಜಯಂತಿಯನ್ನು ನಾವು ಆಚರಿಸುತ್ತಿದ್ದೇವೆ.

ಈ ಮಾನವೀಯ ಧರ್ಮ ಅನೇಕ ಕಾರಣಗಳಿಂದ ಭಾರತದಲ್ಲಿ ನಶಿಸಿ ಹೋಗಿದೆ. ಈ ನಶಿಸಿ ಹೋಗಿದಂತಹ ಧರ್ಮವನ್ನು ಬಾಬಾ ಸಾಹೇಬ್ ಆಂಬೇಡ್ಕರ್ ರವರು ಪುನಶ:ಚೇತನಗೊಳಿಸಿ ತಮ್ಮ ಲಕ್ಷಾಂತಹ ಅನುಯಾಯಿಗಳ ಜೊತೆಯಲ್ಲಿ ಬೌದ್ಧಧರ್ಮವನ್ನು ಸ್ವೀಕರಿಸುವ ಮುಖಾಂತರ ಪುನರ್ ಜನ್ಮವನ್ನು ಕೊಟ್ಟಿದ್ದಾರೆ.

ನಾವು ಸಹ ಇಡೀ ದೇಶದಲ್ಲಿ ಎಲ್ಲಾ ಕಡೆಯೂ ಈ ಭಾರತದ ನೆಲಮೂಲದ ಧರ್ಮವಾದ್ದಂತಹ ಬೌದ್ಧಧರ್ಮವನ್ನು ಪಸರಿಸಿ, ಶಾಂತಿ ನೆಮ್ಮದಿ ಬದುಕನ್ನು ಬದುಕುವ ಕಾರಣ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ, ಅದೇ ರೀತಿ ಮಂಡ್ಯದಲ್ಲೂ ಕೂಡ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಉಪಾಧ್ಯಕ್ಷರಾದ ಹೆಚ್.ಕೆ. ಚಂದ್ರಹಾಸ್ ಗೋಷ್ಠಿಯಲ್ಲಿ ಮಾತನಾಡುತ್ತಾ ಕಿ.ಪೂ 544ರಲ್ಲಿ ಈ ಜಗತ್ತಿನಲ್ಲಿ ಜನ್ಮತಾಳಿದ ಭಗವಾನ್ ಬುದ್ಧರ ಜಯಂತಿಯನ್ನು ವಿಶ್ವದ್ಯಾಂತ ಆಚರಿಸುತ್ತಿದ್ದಾರೆ. ಶಾಂತಿ, ಸಹನೆ, ಸಮಾನತೆ, ಭ್ರಾತೃತ್ವ ವಿಚಾರಗಳನ್ನು ಆಳವಡಿಸಿದ ಬೌದ್ಧಧರ್ಮದ ಸಾರವನ್ನು ಜಗತ್ತಿನ ಬಹುತೇಕ ರಾ‍ಷ್ಟ್ರಗಳು ಅನುಸರಿಸಿಕೊಂಡು ಬಹಳ ಆಭಿವೃದ್ಧಿ ಶೀಲ ಮತ್ತು ಅಭಿವೃದ್ಧಿ ಪಥದ ಕಡೆಗೆ ಸಾಗುತ್ತಿರವುದನ್ನು ನಾವು ನೋಡುತ್ತಿದ್ದೇವೆ.

ನಮ್ಮ ದೇಶದಲ್ಲಿ ಹುಟ್ಟಿದಂತಹ, ಬೆಳವಣಿಗೆ ಕಂಡಂತಹ ಬೌದ್ಧಧರ್ಮ ಇಡೀ ವಿಶ್ವವ್ಯಾಪಿ ಅವರಿಸಿಕೊಂಡಿರುವುದಕ್ಕೆ ಕಾರಣ, ಆ ಧರ್ಮದ ಸಾರವನ್ನು ಪ್ರತಿಯೊಬ್ಬರು ಅನುಸರಣೆ ಮಾಡುತ್ತಿರುವುದು ಅದಕ್ಕೆ ಒಂದು ಶಕ್ತಿ ತುಂಬಿರುವಂತಹದ್ದು. ಈ ಸಂಧರ್ಭದಲ್ಲಿ ನಮ್ಮ ಮಂಡ್ಯದಲ್ಲೂ ಸಹ ಮಂಡ್ಯ ಜಿಲ್ಲಾ ಭಾರತೀಯ ಬೌದ್ಧ ಮಹಾಸಭಾ ಶಾಖೆಯಿಂದ ಬುದ್ದ ಜಯಂತಿಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಎಲ್ಲಾ ವರ್ಗದ ಜನರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸುದ್ಧಿಗೋಷ್ಠಿಯಲ್ಲಿ ಕಾರ್ಯದರ್ಶಿಯಾದ ಎಸ್.ಪಿ. ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!