Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ಮೃತಿ ಇರಾನಿಗೆ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಕೆರಳಿಸಲಿಲ್ಲ, ರಾಹುಲ್ ‘ಫ್ಲೈಯಿಂಗ್ ಕಿಸ್’ ಕೆರಳಿಸಿದೆ: ಸ್ವಾತಿ ಮಾಲಿವಾಲ್

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಪ್ರಕರಣವು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಗೆ ಕೆರಳಿಸಲಿಲ್ಲ, ರಾಹುಲ್ ಗಾಂಧಿ ಅವರ ಫ್ಲೈಯಿಂಗ್ ಕಿಸ್ ಕೆರಳಿಸಿತೇ?ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ (ಡಿಸಿಡಬ್ಲ್ಯು ) ಸ್ವಾತಿ ಮಾಲಿವಾಲ್ ಅವರು ಕಿಡಿಕಾರಿದ್ದಾರೆ.

ಗುರುವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸದನದಲ್ಲಿ ಆಡಳಿತ ಪಕ್ಷದವರ ಕಡೆಗೆ ‘ಫೈಯಿಂಗ್ ಕಿಸ್’ ನೀಡಿದ್ದನ್ನು, ಸ್ಮೃತಿ ಇರಾನಿ ಅವರು ಮಹಿಳೆಯರಿಗೆ ‘ಫ್ಲೈಯಿಂಗ್ ಕಿಸ್’ ನೀಡಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಸ್ಮೃತಿ ಇರಾನಿ ಅವರ ಆರೋಪದ ಬೆನ್ನಲ್ಲೇ ಸ್ವಾತಿ ಅವರು ಟ್ವೀಟ್ ಮಾಡಿದ್ದು, ಎರಡು ನಿಮಿಷದ ವಿಡಿಯೊ ಹಂಚಿಕೊಂಡು, ಮಹಿಳೆಯರ ವಿರುದ್ಧ ದೇಶದಲ್ಲಿ ನಡೆದ ಹಲವು ಘಟನೆಗಳ ಕುರಿತು ಸ್ಮೃತಿ ಅವರ ಮೌನದ ಕುರಿತು ಅವರು ಪ್ರಶ್ನಿಸಿದ್ದಾರೆ.

”ಕೇಂದ್ರ ಸಚಿವೆಯು ಆಕ್ರೋಶಕ್ಕೊಳಗಾಗಿದ್ದಾರೆ. ಸಂಸತ್ತಿನಲ್ಲಿ ಅವರ ಹಿಂದಿನ ಆಸನದಲ್ಲಿ ಬಿ‍ಭೂಷಣ್ ಎಂಬ ವ್ಯಕ್ತಿ ಕೂರುವಾಗ ಈ ಆಕ್ರೋಶ ಎಲ್ಲಿ ಹೋಗುತ್ತದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಮಹಿಳಾ ಕುಸ್ತಿಪಟುಗಳನ್ನು ಕೋಣೆಗೆ ಕರೆದು ಮತ್ತು ಅವರನ್ನು ಅನುಚಿತವಾಗಿ ಸ್ಪರ್ಶಿಸಿದ ಆರೋಪವನ್ನು ಬ್ರಿಜ್‌ ಭೂಷಣ್‌ ಹೊಂದಿದ್ದಾರೆ” ಎಂದು ಹೇಳಿದ್ದಾರೆ.

”ಗುಜರಾತ್‌ನ ಬಿಲಿಸ್ ಬಾನು ಅತ್ಯಾಚಾರಿಗಳನ್ನು ಸ್ವಾತಂತ್ರ್ಯ ದಿನದಂದೇ ಬಿಡುಗಡೆಗೊಳಿಸಿದ್ದಾಗಲೀ ಅಥವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರವು ಮೇಲಿಂದ ಮೇಲೆ ಪರೋಲ್ ನೀಡಿ ಬಿಡುಗಡೆ ಮಾಡುತ್ತಿರುವುದಾಗಲೇ ಸ್ಮೃತಿ ಇರಾನಿ ಅವರನ್ನು ಕೆರಳಿಸುವುದಿಲ್ಲ” ಎಂದು ಆರೋಪಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!