ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸುನಿತಾ ಜಯರಾಮೇಗೌಡ ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಸುನಿತಾ ಜಯರಾಮೇಗೌಡ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕೆಂಪಾಚಾರಿ ಆಯ್ಕೆಯಾದರು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಜೆಡಿಎಸ್ ಮುಖಂಡ,ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರು ಪುಷ್ಪ ಹಾರ ಹಾಕಿ ಅಭಿನಂದಿಸಿದರು.
ಗೋಪಾಲಪುರ ಗ್ರಾಮ ಪಂಚಾಯಿತಿಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದು, ನೂತನ ಅಧ್ಯಕ್ಷರಾದ ಸುನೀತ ಜಯರಾಮೇಗೌಡ, ಉಪಾಧ್ಯಕ್ಷ ಕೆಂಪಾಚಾರಿ ಅವರು ಎಲ್ಲಾ ಸದಸ್ಯರನ್ನು ವಿಶ್ವಾಸ ತೆಗೆದುಕೊಂಡು ತಮ್ಮ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಅಭಿವೃದ್ಧಿಗೆ ಮುಂದಾಗುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಸುಧಾ ಸಿದ್ದೇಗೌಡ, ನಾಗರಾಜು, ಜ್ಯೋತಿ ಶಶಿಕುಮಾರ್, ಪುಟ್ಟಮ್ಮ ಕೃಷ್ಣ, ಕವಿತಾ ರಮೇಶ್, ಮುಖಂಡರಾದ ಭಾನುಪ್ರಕಾಶ್, ಬೋರಪ್ಪ, ರಾಘು, ಮುರುಳಿ, ವೆಂಕಟೇಶ್, ಸೂಗಪ್ಪ, ರೂಪೇಶ್, ಪ್ರಸನ್ನ ಉಪಸ್ಥಿತರಿದ್ದರು.
ಮದಗಂದೂರು ಗ್ರಾ.ಪಂ.ಗೆ ಆಯ್ಕೆ

ಮುದಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸುಜಾತ ರವಿ, ಉಪಾಧ್ಯಕ್ಷರಾಗಿ ಶಂಕರೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ. ಈ ಇಬ್ಬರು ಜೆಡಿಎಸ್ ಬೆಂಬಲಿತರಾಗಿದ್ದು, ಇವರನ್ನು ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ನಾಗೇಶ, ಚನ್ನಮರೀಗೌಡ, ರವಿ, ಸತೀಶ, ಲಕ್ಷ್ಮಣ, ಸವಿತ,ರಮ್ಯ, ದಾಕ್ಷಾಯಿಣಿ, ಅನಿತಾ, ಭಾಗ್ಯ, ಮಮತಾ ಉಪಸ್ಥಿತರಿದ್ದರು.




