Thursday, November 19, 2026

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ – ಟ್ಯಾಬ್ ವಿತರಿಸಿ ; AIDSO ಒತ್ತಾಯ

ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಸೇರುವ ಬಡ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕ್ರಮೇಣ ಇಳಿಕೆ ಕಂಡುಬಂದಿರುವುದರಿಂದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ – ಟ್ಯಾಬ್ ವಿತರಣೆಯಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರೆಸಬೇಕೆಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದತ್ತ ಪ್ರೋತ್ಸಾಹಿಸಲು ಹಾಗೂ ವಿದ್ಯಾರ್ಥಿ ಹೋರಾಟಗಳ ಪರಿಣಾಮದಿಂದಾಗಿ ರಾಜ್ಯದ ಪದವಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಲ್ಯಾಪಟಾಪ್, ಟ್ಯಾಬ್ ವಿತರಿಸುವ ಯೋಜನೆ ಪ್ರಾರಂಭವಾಗಿತ್ತು. ಆದರೆ ನಂತರದ ರಾಜ್ಯ ಸರ್ಕಾರಗಳು ಯೋಜನೆಗಳಿಗೆ ಹಣ ಮಂಜೂರು ಮಾಡುವುದನ್ನು ನಿಲ್ಲಿಸಿದೆ. ಕಳೆದ ಕೆಲವು ಶೈಕ್ಷಣಿಕ ವರ್ಷಗಳಿಂದ ಅವುಗಳ ವಿತರಣೆಯನ್ನು ನಿಲ್ಲಿಸಲಾಗಿದೆ. ಈಗಿನ ಸರ್ಕಾರವೂ ಸಹ ವಿದ್ಯಾರ್ಥಿ ಸಮುದಾಯದಿಂದ ಹೆಚ್ಚುತ್ತಿರುವ ಬೇಡಿಕೆಯ ಹೊರತಾಗಿಯೂ, ಲ್ಯಾಪಟಾಪ್, ಟ್ಯಾಬ್ ಹಂಚಿಕೆ ಮಾಡಿಲ್ಲ. ಹಣಕಾಸಿನ ಕೊರತೆಯ ನೆಪವೊಡ್ಡಿ ಯಾವುದೇ ವಿದ್ಯಾರ್ಥಿ ಕಲ್ಯಾಣ ಕ್ರಮಗಳನ್ನು ನಿಲ್ಲಿಸಬಾರದು ಎಂದು AIDSO ಮಂಡ್ಯ ಜಿಲ್ಲಾ ಸಂಚಾಲಕಿ ಚಂದ್ರಕಲಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಜಾಹೀರಾತು

ಈಗಾಗಲೇ ಎಂಜಿನಿಯರಿಂಗ್ ಮತ್ತು ಪದವಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ರಾಜ್ಯದಲ್ಲಿ ಕಲ್ಯಾಣ ಕ್ರಮಗಳು ಅವರಿಗೆ ಉತ್ತೇಜನ ನೀಡುತ್ತಿದ್ದವು. ಒಂದೆಡೆ ಕಾಲೇಜು ಶುಲ್ಕಗಳು ಹೆಚ್ಚಾಗುತ್ತಿವೆ, ಇನ್ನೊಂದೆಡೆ ವಿದ್ಯಾರ್ಥಿ ವೇತನಗಳು ಸಹ ಸರಿಯಾದ ಸಮಯದಲ್ಲಿ ವಿತರಿಸಲಾಗುತ್ತಿಲ್ಲ. ಬಡವರನ್ನು ಪ್ರೋತ್ಸಾಹಿಸಲು ಅಗತ್ಯವಿರುವ ಲ್ಯಾಪ್‌ಟಾಪ್‌ಗಳು, ಟ್ಯಾಬ್‌ಗಳು ಮತ್ತು ಇತರ ಕಲ್ಯಾಣ ಕ್ರಮಗಳ ವಿತರಣೆಯನ್ನು ರಾಜ್ಯ ಸರ್ಕಾರ ಕೂಡಲೇ ಮರುಪ್ರಾರಂಭಿಸಬೇಕೆಂದು ಅವರು ಕೋರಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ