ಮಂಡ್ಯ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಎಂಸಿಎ ವಿಭಾಗದ 2023-24ನೇ ಸಾಲಿನ ಪಿ.ಜಿ.ಸಿ.ಇ.ಟಿ ವಿಭಾಗದ ಉಚಿತ ತರಬೇತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ ಮಾತನಾಡಿ, ‘2014ರಲ್ಲಿ ಮೊಟ್ಟ ಮೊದಲಿಗೆ ಸಿಎಸ್, ಇ ಅಂಡ್ ಸಿ, ಸಿವಿಲ್ ಮತ್ತು ಮೆಕಾನಿಕಲ್ ಕೋರ್ಸ್ ಸೇರಿದಂತೆ ಇಂಜಿನಿಯರಿಂಗ್ ತರಗತಿಗಳನ್ನು ಪ್ರಾರಂಭಿಸಿದೆವು. ನಂತರ ಮೆಕ್ಯಾನಿಕಲ್ ವಿಭಾಗದಲ್ಲಿ ರಿಸರ್ಚ್ ಸೆಂಟರ್ ಅನ್ನು ಪ್ರಾರಂಭಿಸಿದೆವು. ನಮ್ಮ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡುವ ಉದ್ದೇಶದಿಂದ ಡಾಟಾ ಸೈನ್ಸ್ ನಲ್ಲಿ ಒಂದು ‘ಸೆಂಟರ್ ಆಫ್ ಎಕ್ಸಲೆನ್ಸ್’ ಅನ್ನು ಕೂಡ ಪ್ರಾರಂಭಿಸಿದವು ಎಂದರು.
ಅಂತರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳೊಂದಿಗೆ ನಾವು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇವೆ. ಕಾವೇರಿ ಡಿಗ್ರಿ ಕಾಲೇಜನ್ನು ಪ್ರಾರಂಭಿಸಿ, ಅದರಲ್ಲಿ ಬಿಕಾಂ ಮತ್ತು ಬಿಸಿಎ ಅನ್ನು ಕಳೆದ ವರ್ಷ ಪ್ರಾರಂಭಿಸಿದ್ದೇವೆ. ಈ ಸಾಲಿನಲ್ಲಿ ಡೆಲ್ಲಿಯಿಂದ ಮಾನ್ಯತೆ ಪಡೆದು ಎಂಸಿಎ ಅನ್ನು ಪ್ರಾರಂಭಿಸಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಇರುವವರೆಲ್ಲರೂ ಈ ಹಿಂದೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನಿವೃತ್ತಿ ಹೊಂದಿರುವವರು ಆಗಿದ್ದಾರೆ. ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಜಯಶೀಲರನ್ನಾಗಿಸುವುದೇ ನಮ್ಮ ಸದುದ್ದೇಶವಾಗಿದೆ’ ಎಂದರು.
ಕೇವಲ ಮೈಸೂರು-ಬೆಂಗಳೂರಿನಲ್ಲಿ ದೊರಕುವ ಇಂತಹ ಕೋಚಿಂಗ್ ಕ್ಲಾಸ್ ಗಳನ್ನು, ನಮ್ಮ ಹಳ್ಳಿಗಾಡಿನ ಮಕ್ಕಳಿಗೂ ದೊರಕಬೇಕೆಂಬ ಉದ್ದೇಶದಲ್ಲಿ ಇದನ್ನು ಆಯೋಜಿಸಿದ್ದು, ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಟಿ. ನಾಗೇಂದ್ರ ಸೇರಿದಂತೆ, ಸಂಸ್ಥೆಯ ಅಧ್ಯಕ್ಷ ಡಾ. ಹೆಚ್.ಪಿ. ರಾಜು, ಪ್ರಾಂಶುಪಾಲರಾದ ಪ್ರೊ. ಎ.ಎಸ್. ಶ್ರೀಕಂಠಪ್ಪ, ಉಪಪ್ರಾಂಶುಪಾಶಪಾಲರಾದ ಪ್ರೊ. ಆರ್. ಮಂಜುನಾಥ್ ಇನ್ನಿತರರಿದ್ದರು.




