Friday, November 20, 2026

ಪ್ರಾಯೋಗಿಕ ಆವೃತ್ತಿ

ಫಸಲ್ ಬಿಮಾ ಯೋಜನೆ ಅನುಷ್ಟಾನ| ಕೇಂದ್ರದ ಪ್ರಶಂಸೆ ಪಡೆದ ಮಂಡ್ಯ ಜಿಲ್ಲೆ; ಸಚಿವರಿಂದ ಅಭಿನಂದನೆ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ತೋರಿದ ಅತ್ಯುತ್ತಮ ಸಾಧನೆಗೆ ಮಂಡ್ಯ ಜಿಲ್ಲೆಯು ಕೇಂದ್ರ ಕೃಷಿ ಸಚಿವಾಲಯದ ಪ್ರಶಂಸೆಗೆ ಪಾತ್ರವಾಗಿದ್ದು, ರಾಜ್ಯ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಇದಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳನ್ನು‌ ಸಲ್ಲಿಸಿದ್ದಾರೆ.

‌ಮಂಡ್ಯ ಜಿಲ್ಲೆಯ ಸಾಧನೆ ಕುರಿತು ಕೇಂದ್ರ ಕೃಷಿ ಹಾಗೂ ರೈತ ಕ್ಷೇಮಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಗೂ ಫಿ.ಎಂ ಎಫ್ ಬಿ ವೈ ನ ಸಿ.ಇ.ಓ ರಿತೇಶ್ ಚೌಹಾಣ್, ಕರ್ನಾಟಕ‌ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವುದನ್ನು ಉಲ್ಲೇಖಿಸಿ ಸಚಿವ ಚಲುವರಾಯಸ್ವಾಮಿ ಜಿಲ್ಲೆಯ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ ರೀತಿ ಮುಂದೆಯೂ ಸಾಧನೆ ತೋರುವಂತೆ ಕರೆ ನೀಡಿದ್ದಾರೆ.

2022 ರ ಖಾರಿಫ್ ಹಾಗೂ 2022-2023ರ ರಬ್ಬಿ ಬೆಳೆಗಳಲ್ಲಿ ಜಿಲ್ಲೆ ಬೆಳೆ ಕಟಾವು ಪರೀಕ್ಷೆ, ವಿಮೆ ಕ್ಲೈಮ್, ಬೆಳೆ ಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದ ರೈತರ ವಿಮೆ ನೊಂದಣೆ ಸರಾಸರಿಯಲ್ಲಿ ಏರಿಕೆ. ವಿಮಾ ಪ್ರದೇಶ ವಿಸ್ತರಣೆ ಮತ್ತಿತರ ಮಾನದಂಡಗಳನ್ನು ಪರಿಗಣಿಸಿ ಸಾಧನೆಯ ಮೌಲ್ಯಮಾಪನ ಮಾಡಲಾಗಿದೆ ಎಂದು ಕೆಂದ್ರ ಕೃಷಿ ಸಚಿವಾಲಯ ತಿಳಿಸಿದೆ.

ಮಂಡ್ಯ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ತಂಡ ಅಚಲವಾಗಿ ಬದ್ದತೆಯಿಂದ ಜಿಲ್ಲೆಯ ಅಧಿಕಾರಿಗಳು, ರೈತರ ಕ್ಷೇಮಾಭಿವೃದ್ಧಿಗೆ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದು ಕೇಂದ್ರ ಕೃಷಿ ಸಚಿವಾಲಯ ಪ್ರಶಂಸೆ ವ್ಯಕ್ತಪಡಿಸಿದೆ.

ಈ ಗಮನಾರ್ಹ ಸಾಧನೆಗಾಗಿ ಕೇಂದ್ರ ಕೃಷಿ ಸಚಿವಾಲಯ ಆಗಸ್ಟ್ 26-27ರಂದು ಉತ್ತರಖಾಂಡ್ ನಲ್ಲಿ ನಡೆಯುವ ಕೃಷಿ ಪರಿಶೀಲನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಂಡ್ಯ ಜಿಲ್ಲಾಧಿಕಾರಿಯವರನ್ನು ನಾಮ ನಿರ್ದೇಶನ ಮಾಡುವಂತೆ ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ರಿತೇಶ್ ಚೌಹಾಣ್ ಪತ್ರದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಯವರನ್ನು ಕೋರಿದ್ದಾರೆ .

ಈ ಸಮಾವೇಶದಲ್ಲಿ ಮಂಡ್ಯ ಜಿಲ್ಲಾಧಿಕಾರಿಯವರಿಗೆ ಸಾಧನೆಗೆ ಕಾರಣವಾದ ಉತ್ತಮ ಪ್ರಯತ್ನ ಹಾಗೂ ತೀರ್ಮಾನಗಳ ಬಗ್ಗೆ ಅಭಿಪ್ರಾಯ ಹಂಚಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ