Wednesday, November 18, 2026

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಚಲನಚಿತ್ರದ ತಂಡದ ಕಾರ್ಮಿಕ ನಾಪತ್ತೆ

ಚಲನಚಿತ್ರದ ಚಿತ್ರೀಕರಣಕ್ಕೆ ಆಗಮಿಸಿದ್ದ ಕಾರ್ಮಿಕನೊಬ್ಬ ನಾಪತ್ತೆಯಾಗಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ಜರುಗಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸತ್ಯಸಾಯಿನಗರದ ಬಾಲಾಜಿ (23) ಕಾಣೆಯಾದವರು.

ಮೈಸೂರು ಸುತ್ತಮುತ್ತ ನಡೆಯುತ್ತಿದ್ದ ಚಿತ್ರೀಕರಣದ ಯೂನಿಟ್’ನಲ್ಲಿ ಜನರೇಟರ್ ಹಾಗೂ ಲೈಟಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ ರಾತ್ರಿ ವೇಳೆ ಶ್ರೀರಂಗಪಟ್ಟಣದ ಲಾಡ್ಜ್’ವೊಂದರಲ್ಲಿ ವಾಸ್ತವ್ಯವಿದ್ದರು. ರಾತ್ರಿ ಮಲಗಿದ್ದ ಬೆಳಿಗ್ಗೆ ಲಗ್ಗೇಜಿನೊಂದಿಗೆ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಾಪತ್ತೆಯಾದ ಯುವಕ 5 ಅಡಿ ಎತ್ತರ, ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಗಡ್ಡ ಮೀಸೆ ಬಿಟ್ಟಿರುತ್ತಾನೆ. ಬಲಗೈ ತೋಳಿನ ಮೇಲೆ ಹೆಚ್ ಮತ್ತು ಎಂ ಎಂಬ ಇಂಗ್ಲೀಷ್ ಅಕ್ಷರದ ಹಚ್ಚೆ ಹಾಕಿಸಿಕೊಂಡಿರುತ್ತಾನೆ. ನಾಪತ್ತೆಯಾದಾಗ ಹಳದಿ ಬಣ್ಣದ ಟೀ ಶಟ್೯, ನೀಲಿ ಕಲರ್ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ, ತೆಲಗು, ಇಂಗ್ಲಿಷ್ ಬಾಷೆ ಮಾತನಾಡುತ್ತಾನೆ.

ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಮಂಡ್ಯ ಪೊಲೀಸ್ ಕಂಟ್ರೋಲ್ ರೂಂನ ಮೊ: 9480804800 ಅಥವಾ ಶ್ರೀರಂಗಪಟ್ಟಣ ಟೌನ್ ಠಾಣೆಯ ಮೊ: 9480804855 ಅನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ