ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆಯ ರಾಜ್ಯದ ವಿವಿಧ ಭಾಗಗಳ ಮುಸ್ಲಿಂ ಬಾಂಧವರು ಇಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಸ್ವಾಮೀಜಿ ರವರನ್ನು ಭೇಟಿಯಾಗಿ, ಅವರನ್ನು ಗೌರವಿಸಿ ಸೌಹಾರ್ದಯುತ ಮಾತುಕತೆ ನಡೆಸಿದರು
ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆಯ ರಾಜ್ಯದ ವಿವಿಧ ಭಾಗಗಳ ಲೇಖಕರು, ಸಾಹಿತಿಗಳು, ಚಿಂತಕರು ಮತ್ತು ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ಗಣ್ಯರಿಂದ ಕರ್ನಾಟಕದಲ್ಲಿ ವಿವಿಧ ಸಮುದಾಯಗಳ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಿಸುವ ಉದ್ದೇಶದಿಂದ ರಾಜ್ಯದ ಹಲವಾರು ಮಠ ಮಾನ್ಯಗಳ ಸ್ವಾಮೀಜಿಗಳನ್ನು ಭೇಟಿ ಮಾಡಿ ಶಾಂತಿಯ ಸಮನ್ವಯತೆಯ ವೇದಿಕೆಯನ್ನು ಸೃಷ್ಟಿ ಮಾಡಿದ್ದವೆ ಎಂದು ಸಂಘದ ಅಧ್ಯಕ್ಷರಾದ ಅನಿಸ್ ಪಾಷಾರವರು ನಿರ್ಮಲಾನಂದನಾಥ ಸ್ವಾಮೀಜಿ ರವರಿಗೆ ಮುಸ್ಲಿಂ ಬಾಂಧವ್ಯ ವೇದಿಕೆಯ ಬಗ್ಗೆ ವಿವರಣೆ ನೀಡಿದರು.
ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಶ್ರೀ ನಿರ್ಮಲಾನಂದ ಸ್ವಾಮೀಜಿ ರವರು ಒಂದು ಗಂಟೆಗೂ ಹೆಚ್ಚು ಕಾಲ ಶಾಂತಿ ಸಮನ್ವಯತೆಯ ಬಗ್ಗೆ ಚರ್ಚೆ ನಡೆಸಿ ವೇದಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
ಇದೇ ಸಂದರ್ಭದಲ್ಲಿ ಮಾತನಾಡಿ ಶ್ರೀಗಳು. ಈ ಭೂಮಿ ಮೇಲೆ ಜೀವಿಸುವ ಪ್ರತಿಯೊಬ್ಬ ವ್ಯಕ್ತಿಗೂ ಸರ್ವ ಧರ್ಮ ಸಮನ್ವಯತೆ ಇರಬೇಕು. ಒಂದು ಸಮುದಾಯದ ಬಗ್ಗೆ ಯಾರಾದರೂ ಅತಿಯಾದ ಪ್ರೀತಿ ತೋರಿಸಿದರೆ ನಾವು ಎಚ್ಚರಿಕೆಯಿಂದ ನಮ್ಮ ನಡೆಯನ್ನು ನಡೆಯಬೇಕು, ಏಕೆಂದರೆ ಅವರ ಅತಿಯಾದ ಪ್ರೀತಿ ನಮ್ಮ ನೆಮ್ಮದಿಯನ್ನು ಹಾಳು ಮಾಡುವ ಸಂಭವವಿರುತ್ತದೆ ಎಂದರು.
ಶ್ರೀ ಮಠದಲ್ಲಿ ಎಲ್ಲರನ್ನು ಸಮನ್ವಯತೆಯಿಂದ ಕಾಣುವ ಮನೋಭಾವನೆ ಇದೆ ಸರ್ವಧರ್ಮದ ಮಕ್ಕಳು ಕೂಡ ನಮ್ಮ ಮಠದಲ್ಲಿ ಅತ್ಯುತ್ತಮ ಶಿಕ್ಷಣ ಪಡೆಯುತ್ತಿದ್ದಾರೆ, ಶಾಂತಿಯ ಸಂದೇಶ ಈ ವೇದಿಕೆ ಉತ್ತಮ ದಾರಿಯಲ್ಲಿ ನಡೆಯಲಿ ಎಂದು ತಿಳಿಸಿದರು. ವೇದಿಕೆಯಲ್ಲಿ ನಡೆಯುವ ಉತ್ತಮ ಕಾರ್ಯಗಳಿಗೆ ನಮ್ಮ ಸಹಕಾರವಿರುತ್ತದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ನಾವು ದ್ರಾವಿಡ ಕನ್ನಡಿಗರು ಚಳವಳಿಯ ಅಭಿಗೌಡ, ವಿನಯ್, ಶಿವಣ್ಣ, ನವೀನ್ ಗೌಡ
ಮುಷ್ತಾಕ್ ಹೆನ್ನಾಬೈಲ್, ಇಬ್ರಾಹಿಮ್ ಸಾಹೇಬ್ ಕೋಟಾ, ಉಸ್ಮಾನ್ ಹೈಕಾಡಿ, ನಜೀರ್ ಬೆಳವಾಯಿ, ಮುಬಾರಕ್ ಗುಲ್ವಾಡಿ, ಅಶ್ರಫ್ ಕುಂದಾಪುರ, ಹಕೀಮ್ ತೀರ್ಥಹಳ್ಳಿ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.




