Friday, September 20, 2024

ಪ್ರಾಯೋಗಿಕ ಆವೃತ್ತಿ

ಹಲವು ಕಾನೂನು ಬದಲಾವಣೆ ಮಾಡುತ್ತೇವೆ : ಗೋ. ಮಧುಸೂಧನ್

ಬಿಜೆಪಿ ಪಕ್ಷಕ್ಕೆ ಈ ಬಾರಿ ರಾಜ್ಯಸಭೆಯಲ್ಲೂ ಸಂಪೂರ್ಣ ಬಹುಮತ ಸಿಗಲಿದ್ದು, ದೇಶದ ಎಲ್ಲಾ ಧರ್ಮ, ಜಾತಿಯ ಜನರಿಗೂ ಅನ್ವಯವಾಗುವಂತೆ ಒಂದೇ ಕಾನೂನು ಜಾರಿಗೆ ತರುತ್ತೇವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಹಲವು ಕಾನೂನುಗಳನ್ನು ಬದಲಾವಣೆ ಮಾಡಲು ಸಾಧ್ಯವಾಗಲಿಲ್ಲ.ಈ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಸಿಗಲಿದೆ. ದೇಶದ ಎಲ್ಲಾ ಜನರಿಗೂ ಒಂದೇ ಕಾನೂನು ಜಾರಿಗೆ ತಂದೇ ತರುತ್ತೇವೆ. ನಾಲ್ಕು ಮದುವೆಯಾಗುವವರು ಒಂದೇ ಮದುವೆಯಾಗಬೇಕು, ಒಂದು ಮಗು ಬೇಕು ಎರಡು ಸಾಕು ಎಂದು ಸೀಮಿತವಾಗಬೇಕು,1991 ರಲ್ಲಿ ಜಾರಿಗೆ ಬಂದಿರುವ ಪೂಜಾ ಸ್ಥಳಗಳ ಕಾಯ್ದೆಯನ್ನು ಕೂಡ ಬದಲಾವಣೆ ಮಾಡಲಾಗುವುದು ಎಂದರು.

ಜಾಮೀಯ ಮಸೀದಿ ಮಂದಿರವಾಗಬೇಕು.

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೆ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯವಾಗಿತ್ತು. ಟಿಪ್ಪುಸುಲ್ತಾನ್ ಅದನ್ನು ಮಸೀದಿಯಾಗಿ ಪರಿವರ್ತಿಸಿದ್ದು,ಅದನ್ನು ನಮ್ಮ ಹಿಂದೂಗಳ ದೇವಸ್ಥಾನವಾಗಿ ಪರಿವರ್ತನೆಯಾಗಬೇಕು ಎಂದು ಪ್ರತಿಪಾದಿಸಿದರು.

ಹಾಗೆಯೇ ಟಿಪ್ಪು ಅರಮನೆ ಹಿಂಭಾಗ ಪ್ರಾಚೀನ ಕಾಲದ ಈಶ್ವರನ ದೇವಸ್ಥಾನವಿತ್ತು. ಅದರ ಗೋಪುರದಿಂದ ಅರಮನೆ ಒಳಭಾಗ ಕಾಣುತ್ತದೆ ಎಂಬ ಕಾರಣಕ್ಕೆ ಆ ಗೋಪುರವನ್ನು ಒಡೆದು ಹಾಕಲಾಯಿತು. ಅದೇ ರೀತಿ ನಿಮಿಷಾಂಬ ದೇವಾಲಯದ ಹಿಂದೆ ಗೋಸೇಗೌಡರ ಗಲ್ಲಿಯಲ್ಲಿದ್ದ ಪುರಾತನ ಕಾಲದ ದೇವಸ್ಥಾನವನ್ನು ಕೆಡವಿ ಉರ್ದು ಶಾಲೆಯನ್ನಾಗಿ ಮಾಡಿಕೊಳ್ಳಲಾಗಿದೆ. ಇಂತಹ ಇತಿಹಾಸದ ಅನೇಕ ಸತ್ಯಗಳನ್ನು ಮರೆಮಾಚಲಾಗುತ್ತಿದೆ ಎಂದರು.

ಸಾವಿರಾರು ವರ್ಷಗಳ ಹಿಂದೆ ಮುಸ್ಲಿಂ ದಾಳಿಕೋರರು ಹಿಂದೂಗಳು ಮತ್ತು ದೇವಾಲಯಗಳ ಮೇಲೆ ದಾಳಿ ಮಾಡಿದ್ದಾರೆ.

ದಾಳಿಕೋರ ಮುಸ್ಲಿಂ ದೊರೆಗಳ ಮನಸ್ಥಿತಿಗಳು ಈ ಮಣ್ಣಿನ ಮಕ್ಕಳ ಸ್ವಾಭಿಮಾನವನ್ನು ತುಳಿಯುವುದಾಗಿತ್ತು ಅದಕ್ಕಾಗಿ ಹಿಂದೂ ಸ್ತ್ರೀಯರ ಮೇಲೆ ಅತ್ಯಾಚಾರವೆಸಗಿದರು. ದೇಗುಲಗಳನ್ನು ನಾಶಪಡಿಸಿ ಮಸೀದಿ ನಿರ್ಮಿಸಿದರು. ಈ ಇತಿಹಾಸವನ್ನು ಇತಿಹಾಸವಾಗಿಯೇ ಜನರ ಮುಂದಿಡಬೇಕು ಎಂದು ತಿಳಿಸಿದರು.

ರವಿಶಂಕರ್ ಬೆಂಬಲಿಸಿ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ರವಿಶಂಕರ್ ಅವರನ್ನು ಬೆಂಬಲಿಸುವಂತೆ ಗೋ. ಮಧುಸೂದನ್ ಮನವಿ ಮಾಡಿದರು.

2016ರ ಚುನಾವಣೆಯಲ್ಲಿ ಮೈ.ವಿ. ರವಿಶಂಕರ್ ಅಲ್ಪಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ಈ ಚುನಾವಣೆ ಬುದ್ಧಿವಂತರ ಚುನಾವಣೆಯಾಗಿದ್ದು, ಬಿಜೆಪಿ ಅಭ್ಯರ್ಥಿಗೆ ಮೊದಲ ಅಥವಾ ಯಾವುದಾದರೂ ಪ್ರಾಶಸ್ತ್ಯದ ಮತ ನೀಡುವ ಮೂಲಕ ಗೆಲ್ಲಿಸಬೇಕೆಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳು ಎಲ್ಲಾ ಸಮುದಾಯಗಳ ಜನರಿಗೆ ಆದ್ಯತೆ ನೀಡಿವೆ. ಕೋವಿಡ್-19 ನಡುವೆ ಮತ್ತು ಪ್ರಾಕೃತಿಕ ವಿಕೋಪಗಳ ನಡುವೆಯೂ ಉತ್ತಮ ಆಡಳಿತ ನೀಡಿದ್ದಾರೆ.ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಬಿಜೆಪಿಗೆ ಮತ ನೀಡಬೇಕು ಎಂದರು.

ಗೋಷ್ಠಿಯಲ್ಲಿ ಅನುರಾಧ ರಘು, ಬಿಜೆಪಿ ನಗರಾಧ್ಯಕ್ಷ ವಿವೇಕ್, ಮಲ್ಲಿಕಾರ್ಜುನ್, ಸುರೇಶ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!