ಕಾವೇರಿ ವಿಚಾರದಲ್ಲಿ ಸರ್ಕಾರ ಹುಡುಗಾಟಿಕೆ ಬಿಡಬೇಕು. ನಿಮ್ಮ ಗ್ಯಾರಂಟಿ ಜೊತೆಗೆ ರೈತರಿಗೆ 6ನೇ ಗ್ಯಾರಂಟಿಯನ್ನು ರೈತರಿಗೆ ಕೊಡಿ, ರೈತರಿಗೆ ಬೆಳೆ ಬೆಳೆಯ ಬೇಡಿ ಪರಿಹಾರ ಕೊಡ್ತೇವೆ ಅಂತ ಘೋಷಣೆ ಮಾಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಡ್ಯದ ಕಲ್ಲಹಳ್ಳಿಯಲ್ಲಿ ಆಪ್ತರ ಮನೆಗೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ವಾಟರ್ ಮ್ಯಾನೆಜ್‌ಮೆಂಟ್ ಬೋರ್ಡ್ ನವರು ಬೀಡಿ ಅಂತ ತಕ್ಷಣ ಸರ್ಕಾರ ಬಿಡುಗಡೆ ಮಾಡಿದ್ದಾರೆ. ಪ್ರತಿಭಟನೆ ಮಾಡಬೇಕಿತ್ತು, ನೀರು ಬಿಡಬಾರದಿತ್ತು. ತಮಿಳುನಾಡಿನವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಅರ್ಜಿ ವಿರುದ್ಧ ನಾವು ಸುಪ್ರೀ ಕೋರ್ಟ್ ಮುಂದೆ ಹೋಗಬೇಕಿತ್ತು.
ನಂತರ ಸುಪ್ರೀಂ ಕೋರ್ಟ್ ತಿರ್ಮಾನಕ್ಕೆ ನಾವು ಬದ್ದರಾಗಬೇಕಿತ್ತು ಎಂದು ಹೇಳಿದರು.
ಜನ ಹಿತರಕ್ಷಣೆಗೆ ಒಳ್ಳೆಯ ಕೆಲಸ ಮಾಡಿ ನಾವು ಬೆಂಬಲ ಕೊಡ್ತಿವಿ ಅಂತ ಹೇಳಿದ್ದಿನಿ.
ಸರ್ಕಾರ ಹುಡುಗಾಟಿಕೆ ಬಿಡಬೇಕು. ಮಂಡ್ಯ ಜಿಲ್ಲೆಯ ರೈತರು ಪ್ರತಿಭಟನೆ ಮಾಡಿದ್ರು. ರೈತರನ್ನು ಸುಪ್ರೀಂ ಕೋರ್ಟ್ ಗೆ ಹೋಗಿ ಅಂದ್ರು. ಇವರಿಗೆ ಪೇಪರ್ ಪೆನ್ ಕೊಟ್ಟಿದ್ದೇಕೆ? ಅಧಿಕಾರ ಕೊಟ್ಟಿರೋದು ರಕ್ಷಣೆ ಮಾಡಿ ಅಂತ. ನೀರಾವರಿ ಮಂತ್ರಿ ಹೇಳಿಕೆಯನ್ನು ಕೊಡುವುದು ಬಿಟ್ಟು ಸರಿಯಾದ ಕೆಲಸ ಮಾಡಲಿ ಎಂದು ಹೇಳಿದರು.
ಕಾನೂನು ತತ್ವಗಳ ಪಾಲನೆ. ಸಂಕಷ್ಟದ ಪರಿಹಾರದ ಸೂತ್ರ ಇಲ್ಲ. ಸುಪ್ರೀಂಕೋರ್ಟ್ ಹೇಳಿಲ್ಲ, ಟ್ರಿಬಿನಲ್ ಕೂಡ ಹೇಳಿಲ್ಲ. ಬೆಳೆ ಹಾಕಬೇಡಿ ನೀರು ಕೊಡಲ್ಲ ಅಂತ ಸರ್ಕಾರ ಹೇಳ್ತಿದೆ. ರೈತರಿಗೆ ಬೆಳೆ ಬೆಳೆಯ ಬೇಡಿ ಪರಿಹಾರ ಕೊಡ್ತೇವೆ ಅಂತ ಘೋಷಣೆ ಮಾಡಿ, ಸಾಲ ಸೋಲ ಮಾಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳೋದು ತಪ್ಪುತ್ತೆ. ರಾಜಕೀಯವಾಗಿ ಮಾತನಾಡ್ತಾರೆ ತಮಿಳುನಾಡಿಗೆ ಹಲವಾರು ಸಂದರ್ಭದಲ್ಲಿ ನೀರು ಕೊಟ್ಟಿದ್ದೇವೆ.
ಇಂತಹ ಪರಿಸ್ಥಿತಿ ಇದ್ದಾಗ ಯೋಚನೆ ಮಾಡಿ ತಿರ್ಮಾನ ತೆಗೆದುಕೊಳ್ಳಬೇಕು. ನುರಿತ ತಜ್ಞರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.




