Thursday, November 19, 2026

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಬಿದರಹಳ್ಳಿಯಲ್ಲಿ ನೇತ್ರದಾನ ಅರಿವು ಕಾರ್ಯಕ್ರಮ

ಗಂಡು-ಹೆಣ್ಣು, ರೋಗಿ-ಆರೋಗ್ಯವಂತ, ಚಿಕ್ಕವರು–ದೊಡ್ಡವರು ಎಂಬ ಭೇದ ಭಾವವಿಲ್ಲದೇ ಎಲ್ಲಾ ವಯೋಮಾನದ ಜನರು ತಮ್ಮ ನೇತ್ರಗಳನ್ನು ದಾನ ಮಾಡಬಹುದೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಶಾಲಾ ಬೀದಿಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಮಹದೇವಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸಾರ್ವಜನಿಕರಿಗಾಗಿ ಆಯೋಜಿಸಿದ್ದ “38 ನೆಯ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ”ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ನಮ್ಮ ದೇಶದಲ್ಲಿ ಲಕ್ಷಾನುಗಟ್ಟಲೆ ಪುರುಷರು, ಮಹಿಳೆಯರು ಮತ್ತು ಮಕ್ಕಳು ಅಂದರಾಗಿ ಜೀವನ ನಡೆಸುತ್ತಿದ್ದಾರೆ ಇವರೆಲ್ಲರೂ ಯಾವತ್ತು ಸೂರ್ಯನ ಕಿರಣಗಳನ್ನು ಕಂಡಿಲ್ಲ, ಪೂರ್ಣ ಹುಣ್ಣಿಮೆಯ ಚಂದ್ರನ ಸವಿ ಸವಿದಿಲ್ಲ ಇಂತವರಿಗೆ ಸಹಾಯ ಮಾಡುವ ಮನಸ್ಸು ನಾವೆಲ್ಲ ಮಾಡಬೇಕು. ನೇತ್ರ ದಾನ ಕತ್ತಲಿನಿಂದ ಬೆಳಕಿನಡೆಗೆ ಕೊಂಡೋಯ್ಯುವ ಏಕೈಕ ಮಾರ್ಗವಾಗಿದ್ದು ಜೀವನದಲ್ಲಿ ನಾವೆಲ್ಲರೂ ನೇತ್ರ ದಾನ ಮಾಡಿ ಅಂಧತ್ವದಿಂದ ಬಳಲುವ ಜೀವಿಗಳಿಗೆ ದೃಷ್ಠಿ ನೀಡೋಣ, ಅಂಧರ ಬಾಳಿಗೆ ಬೆಳಕಾಗೋಣ ಬನ್ನಿ ಕೈಜೋಡಿಸಿ ಪ್ರತಿಯೊಬ್ಬರೂ ನೇತ್ರ ದಾನ ಮಾಡುವ ಸಂಕಲ್ಪ ಮಾಡೋಣವೆಂದು ಸಲಹೆ ನೀಡಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ನೇತ್ರದಾನ ಮಾಡುವವರು ಆನ್ ಲೈನ್ ನಲ್ಲಿ ಜೀವ ಸಾರ್ಥಕತೆ ಎಂಬ ವೆಬ್ ಸೈಟ್ ಮೂಲಕ 18 ವರ್ಷ ಮೇಲ್ಪಟ್ಟ ನಾಗರೀಕರು ನೇತ್ರ ದಾನ ಮಾಡಲು ನೋಂದಣಿ ಮಾಡಿಸಬುದೆಂದರು.

ಈ ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ನಾಗರಾಜು, ಕುಮಾರ, ನಂಜುಂಡೇಗೌಡ, ಮಾದೇಗೌಡ, ಮಹದೇವು, ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ಣೇಗೌಡ, ಅಂಗನವಾಡಿ ಕಾರ್ಯಕರ್ತೆ ಸುವರ್ಣ, ಆಶಾ ಕಾರ್ಯಕರ್ತೆಯರಾದ ಸವಿತ, ರತ್ನಮ್ಮ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ