Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಅನಾರೋಗ್ಯದಿಂದ ಸಾವಿಗೀಡಾದ ಯೋಧನ ಅಂತ್ಯಕ್ರಿಯೆ

ಅನಾರೋಗ್ಯದ ಹಿನ್ನೆಲೆಯಲ್ಲಿ ರಜೆಯ ಮೇಲೆ ಬಂದಿದ್ದ ಯೋಧನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಮೆಣಸಗೆರೆ ಗ್ರಾಮದಲ್ಲಿ ನಡೆದಿದೆ.

ಮೆಣಸಗೆರೆ ಗ್ರಾಮದ ಎಂ.ಟಿ.ಪ್ರಸನ್ನ ಕುಮಾರ್ ಅವರು ಪಂಜಾಬ್ ನಲ್ಲಿ ಬಿಎಸ್ಎಫ್ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಗೌರವ ಸಮರ್ಪಣೆ

ಬಿಎಸ್ಎಫ್ ಮತ್ತು ಜಿಲ್ಲಾಡಳಿತದಿಂದ ಮೃತ ಯೋಧನಿಗೆ ಗೌರವ ಸಮರ್ಪಣೆ ಮಾಡಲಾಯಿತು. ಮೂರು ಸುತ್ತು ಗುಂಡು ಸಿಡಿಸಿ ಮೃತ ಯೋಧನಿಗೆ ರಾಷ್ಟ್ರಧ್ವಜ ಹೊದಿಸಿ ಗೌರವಿಸಿ, ನಂತರ ಮೃತನ ಪತ್ನಿ ರಾಧಾ ಅವರಿಗೆ ರಾಷ್ಟ್ರಧ್ವಜವನ್ನು ನೀಡಲಾಯಿತು.

ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರು ಮೃತನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು, ಹೂ ಗುಚ್ಛವಿಟ್ಟು ಗೌರವ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅವರು, ದೇಶ ಕಾಯುವ ಯೋಧರಿಂದ ನಾವು ಸುರಕ್ಷಿತವಾಗಿದ್ದೇವೆ. ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಯೋಧರಿಲ್ಲದೆ ನಾವಿಲ್ಲ ಎಂದರು.

ನನ್ನ ಶಾಸಕತ್ವದ ಅಧಿಕಾರದ ಅವಧಿಯಲ್ಲಿ ಹುತ್ಮಾತ್ಮ ವೀರ ಯೋಧ ಎಚ್.ಗುರು ಅವರ ಸ್ಮಾರಕವನ್ನು ನಿರ್ಮಿಸಿ ಉದ್ಘಾಟನೆ ಮಾಡಲಾಗಿತ್ತು. ಹುತ್ಮಾತ್ಮ ಯೋಧರಿಗಾಗಿ 5 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿ ತಾಲ್ಲೂಕಿನಲ್ಲಿ ಯಾವುದೇ ಯೋಧರು ಹುತ್ಮಾತ್ಮಗೊಂಡರೂ ಆ ಜಮೀನಿನಲ್ಲಿ ಯೋಧರ ಪುತ್ಥಳಿಯನ್ನು ನಿರ್ಮಿಸಬೇಕೆಂಬುವುದು ನನ್ನ ಮಹತ್ವಾಂಕಾಂಕ್ಷೆಯಾಗಿತ್ತು ಎಂದರು.

ಮೃತ ಯೋಧನ ಪಾರ್ಥಿವ ಶರೀರವನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿದಾಗ ಜ್ಞಾನ ಮುದ್ರ ಶಾಲೆಯ ವಿದ್ಯಾರ್ಥಿ  ಬ್ಯಾಂಡ್ಸೆಟ್ ವಾದ್ಯಗಳನ್ನು ನುಡಿಸಿ ಗೌರವ ಸಲ್ಲಿಸಿದರು.

ಮೃತ ಯೋಧನಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮದ ಜಮೀನಿನಲ್ಲಿ ಗುರುವಾರ ನಡೆಯಿತು. ಅಂತ್ಯಕ್ರಿಯೆಯಲ್ಲಿ ತಹಸಿಲ್ದಾರ್ ಟಿ.ಎನ್. ನರಸಿಂಹಮೂರ್ತಿ, ಬಿಎಸ್ಎಫ್ ಅಧಿಕಾರಿಗಳು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ