Saturday, November 21, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಆಡಳಿತದಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಳ್ಳಿ : ನಿರ್ಮಲಾನಂದಶ್ರೀ

ವರದಿ : ನ.ಲಿ.ಕೃಷ್ಣ

ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಅಳವಡಿಸಿಕೊಂಡು ಉತ್ತಮ ಆಡಳಿತ ನೀಡುವಂತೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಸ್ವಾಮಿಜೀ ತಿಳಿಸಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘವು ಮದ್ದೂರಿನಲ್ಲಿ ನೂತನವಾಗಿ ಆಯ್ಕೆ ಆಗಿರುವ ಒಕ್ಕಲಿಗ ಸಮಾಜದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಅಶೀರ್ವಚನ ನೀಡಿದರು.

ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ಮಾಡಲು ಸಿಕ್ಕಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕ್ಕೊಳ್ಳಬೇಕು ಮತ್ತು ಸ್ವಯಂ ಆಡಳಿತ ಮಾಡುವುದನ್ನು ರೂಡಿಸಿಕ್ಕೊಳ್ಳಬೇಕು. ಆಡಳಿತದಲ್ಲಿ ಶುದ್ದತೆ ಇದ್ದಲಿ, ಅದು ನಡೆ ನುಡಿಯಲ್ಲಿ ಪ್ರತಿಫಲನಗೊಳ್ಳಲಿದೆ ಮತ್ತು ಸಮಾಜದಲ್ಲಿ ಮನ್ನಣೆ ಸಿಗಲಿದೆ ಎಂದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘವು ನೂತನ ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಸನ್ಮಾನ ಏರ್ಪಡಿಸಿರುವುದು ಶ್ಲಾಘನೀಯ. ಇವರಿಗೆ ಮುಂದೆ ತಜ್ಞರುಗಳ ಮೂಲಕ ಉತ್ತಮ ಆಡಳಿತ ಕುರಿತು ತರಬೇತಿ ಕೊಡಿಸಲು ಸಂಘವು ಉದ್ದೇಶಿಸಿರುವುದು ಒಳ್ಳೆಯದು ಎಂದು ಮೆಚ್ಚುಗೆ ಸೂಚಿಸಿ, ಅಖಿಲ ಕರ್ನಾಟ ಒಕ್ಕಲಿಗರ ಸಂಘವು ವಿವಿಧ ಆಯಾಮಗಳಲ್ಲಿ ಕರ್ತವ್ಯ ನಿರ್ವಹಿಸಲಿ ಎಂದರು.

ನಿವೃತ್ತ ಎಸಿಪಿ ಅಧಿಕಾರಿ ಜಿ.ಸಿ.ಮೋಹನ್ ಮಾತನಾಡಿ, ಒಕ್ಕಲಿಗರ ಸಂಘದ ಅಗತ್ಯತೆ ಸಮಾಜದ ಕಲ್ಯಾಣದ ದೃಷ್ಟಿಯಿಂದ ತುಂಬಾ ಇದೆ. ಇದಕ್ಕಾಗಿ ಆದಿಚುಂಚನಗಿರಿ ಶ್ರೀಗಳು ಹೆಚ್ಚಿನ ಆಸ್ಥೆ ವಹಿಸಬೇಕು ಎಂದರು. ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಅಭಿವೃದ್ಧಿಗಾಗಿ ತಮ್ಮ ಅಧಿಕಾರ ಬಳಸಿಕ್ಕೊಳ್ಳಬೇಕು ಎಂದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಮಾತನಾಡಿ, ನಾಗಣ್ಣ ಬಾಣಸವಾಡಿಯವರ ಶ್ರಮ ತ್ಯಾಗದ ಫಲವಾಗಿ ರಾಜ್ಯದ್ಯಾಂತ ರಚನೆಗೊಂಡಿರುವ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಬಲವರ್ಧನೆಗೆ ಸಮಾಜದ ಬೆಂಬಲ ಅಗತ್ಯ ಎಂದರು.

ಮದ್ದೂರು ತಾಲೂಕು ಅಧ್ಯಕ್ಷ ಶಿವಲಿಂಗೇಗೌಡ  ಮಾತನಾಡಿ,  ಸಂಘದ ಬೆಳವಣಿಗೆ ಕುಟುಂಬದ ಪರ ಕಾಳಜಿ, ವ್ಯಾಜ್ಯ ಮುಕ್ತ ತ್ಯಾಜ್ಯ ಮುಕ್ತ, ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಸಂಘ ಶ್ರಮಿಸಲಿದೆ ಎಂದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಜತಾ ಕೃಷ್ಣ, ತಾಲೂಕು ಘಟಕದ ಮಾರ್ಗದರ್ಶಕ ಬಿ. ವಿ. ಶಂಕರೇಗೌಡ, ಪ್ರಣಾಮ್, ಸತೀಶ್ ಉಮಾಶಂಕರ್ ಡಾ. ಪ್ರಶಾಂತ್ ಮಾತನಾಡಿದರು.

ವೇದಿಕೆಯಲ್ಲಿ ಕದಲೂರು ರವಿ, ನಿವೃತ್ತ ಅಭಿಯಂತರ ಹಾಗಲಹಳ್ಳಿ ಬಸವರಾಜ್, ಕ್ಯಾತೇಗೌಡ, ತಾ ಘಟಕದ ಅಧ್ಯಕ್ಷೆ ವಸಂತ, ಕರಡಕೆರೆ ಸ್ತ್ರೀ ಸಂಘದ ಅಧ್ಯಕ್ಷೆ ಪದ್ಮ, ಶ್ರೀನಿವಾಸ್, ಕಾರ್ಯದರ್ಶಿ ಅವಿನಾಶ್, ಪ್ರಧಾನ ಕಾರ್ಯದರ್ಶಿ ಬಸವರಾಜ್ ,ಯುವ ಘಟಕದ ಅಧ್ಯಕ್ಷ ತಿಪ್ಪೂರು ಮನು, ಕ್ರಾಂತಿಸಿಂಹ ,ಜನಾರ್ದನ್, ಚನ್ನಸಂದ್ರ, ವಿವೇಕ್, ನಗರಕೆರೆ ರವಿ, ಗೋಪಾಲ್ ,ತಗ್ಗಹಳ್ಳಿ ತಿಮ್ಮಯ್ಯ, ಸಾಗರ್ ಅಜ್ಜಹಳ್ಳಿ ಬಸವರಾಜ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ