Friday, September 20, 2024

ಪ್ರಾಯೋಗಿಕ ಆವೃತ್ತಿ

ಸಂಸ್ಕೃತಿ ಪರಿಚಯಿಸಲು ಶ್ರೀಕೃಷ್ಣವೇಷ ಸ್ಪರ್ಧೆ ಅವಶ್ಯಕ- ನಂಜುಂಡಯ್ಯ

ಮಕ್ಕಳಗೆ ಸಂಸ್ಕೃತಿ ಪರಿಚಯಿಸಿ, ಶ್ರೀಕೃಷ್ಣನ ಜನ್ಮ ವೃತ್ತಾಂತ ತಿಳಿಸಲು ಮಕ್ಕಳಿಗೆ ಶ್ರೀಕೃಷ್ಣವೇಷ ಸ್ಪರ್ಧೆ ಅವಶ್ಯಕ ಎಂದು ಅಕೃತಿ ಅಕ್ಷರ ಎಜುಕೇಷನ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ವಿ.ನಂಜುಂಡಯ್ಯ ತಿಳಿಸಿದರು.

ಮಂಡ್ಯದ ಗಾಂಧಿಭವನದಲ್ಲಿ ಆಕೃತಿ ಮಾಂಟೆಸ್ಸರಿ ಶಾಲೆಯಿಂದ ನಡೆದ ಶ್ರೀಕೃಷ್ಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಲಿಸಲು, ಅದಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನವನ್ನು ಮಕ್ಕಳಿಂದಲೇ ಅಯೋಜಿಸಿರುವ ಗಮನಾರ್ಹ ಎಂದರು.

ಈ ಸ್ಪರ್ಧೆಯಲ್ಲಿ ಮಕ್ಕಳು, ಪರಿಸರ, ಋತುಮಾತಗಳು, ಪ್ರಾಣಿಗಳ ಬಗ್ಗೆ, ರಸ್ತೆ, ಸುರಕ್ಷತೆ, ಗಾಳಿ, ಮಳೆ, ಬಿಸಿಲು, ಕಾರ್ಖಾನೆಗಳಿಂದಾಗುವ ಅನುಕೂಲ, ಅನನುಕೂಲ ತೀವ್ರತೆಗಳ ಬಗ್ಗೆ ಮಕ್ಕಳು ತಿಳಿದುಕೊಂಡು ಪರಿಚಯಿಸುತ್ತಿರುವುದು, ಅವರ ಮುಂದಿನ ವಿದ್ಯಾರ್ಜನೆಗೆ, ಅಭಿರುಚಿ ಮತ್ತು ಕಲಿಕಾ ಯತ್ನಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ನಂತರ ಮಕ್ಕಳು ಶ್ರೀಕೃಷ್ಣನ ರಾಧೆ, ರುಕ್ಮುಣಿ, ವೀರ ಪುರುಷರ, ವೀರ ವನಿತೆಯರ ವೇಷ ಭೂಷಣ ತೊಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿ, ಆಕೃತಿ ‘ಕಲಾಕಾರ್’ ಆಕೃತಿ ಎಕ್ಸೋ ಸ್ಪರ್ಧೆ ನಡೆದು ವಿಜೇತ ಮಕ್ಕಳಿಗೆ ಸಂಸ್ಥೆ ಕಾರ್ಯದರ್ಶಿ ಅನಿತಾ ಹರೀಶ್ ಮತ್ತು ರಕ್ಷಿತ್, ರಕ್ಷಿತ್ ರಾಜ್ ಟಿ.ಎಮ್ ಹಾಗೂ ಪ್ರಮೋದಮಣಿ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಅನ್ನಪೂರ್ಣ, ಯೋಗೀತಾ, ಹೊನುಶ್ರೀ, ಪ್ರೇಮ, ಅಶ್ವಿನಿ, ಧ್ವನಿ, ಚಂದನ್, ಮೋನಿಕಾ, ಭಾಗ್ಯಮ್ಮ ಹಾಗೂ ನೆಲದನಿ ಬಳಗದ ನವೀನ ಕುಮಾರಿ ಲೋಕೇಶ್, ಸುನೀತಾ, ವಿಭಾನಿಧಿ ಶಿವ, ಸುಬ್ರಮಣ್ಯ ಹಾಗೂ ಲಂಕೇಶ್ ಮಂಗಲ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!