ಭಾರತೀಯರ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಗರ್ಭಾಶಯ ಹಾಗೂ ಸ್ತನ ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಗಳ ಉಚಿತ ತಪಾಸಣಾ ಶಿಬಿರವನ್ನು ಸೆ.11ರಿಂದ 14ರವರೆಗೆ ಪ್ರತಿ ದಿನ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರಗೆ ಮಂಡ್ಯನಗರದ ಆರ್.ವಿ.ಎಸ್ ಆಸ್ಪತ್ರೆ ( ಶ್ರೀನಿವಾಸಪುರ ಸ್ಯಾಂಜೋ ಆಸ್ಪತ್ರೆ ಎದುರು) ಇಲ್ಲಿ ಆಯೋಜಿಸಲಾಗಿದೆ ಎಂದು ಪ್ರಗತಿ ನರ್ಸಿಂಗ್ ಹೋಂ ನ ವೈದ್ಯೆ ಡಾ.ಪ್ರಭಾವತಿ ತಿಳಿಸಿದರು.
ಪ್ರಿವೆನ್ಷನ್ ಇಂಟರ್ನ್ಯಾಷನಲ್: ನೋ ಸರ್ವಿಕಲ್ ಕ್ಯಾನ್ಸರ್(PINCC), ಪೂರ್ಣ ಸುಧಾ ಕ್ಯಾನ್ಸರ್ ಫೌಂಡೇಶನ್ (USA PSCF) ಬೆಂಗಳೂರು, ಮಂಡ್ಯ ಜಿಲ್ಲಾ ಪಂಚಾಯತಿ, ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಒಕ್ಕಲಿಗರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶಿಬಿರ ಆಯೋಜಿಸಿದ್ದು ಆಮೆರಿಕಾ ತಜ್ಞ ವೈದ್ಯರ ತಂಡ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ ನೀಡಲಿದೆ, ಆದ್ದರಿಂದ ಮಂಡ್ಯ ಜಿಲ್ಲೆಯ ಮಹಿಳೆಯರು ಈ ಶಿಬಿರದ ಪ್ರಯೋಜನ ಪಡೆಯಬಹುದು, ಯಾರೋ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ನೇರವಾಗಿ ಸ್ಥಳಕ್ಕೆ ಬಂದು, ತಪಾಸಣೆ ಒಳಗಾಗಬಹುದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಗರ್ಭಾಶಯ ಕ್ಯಾನ್ಸರ್, ಸ್ತನ ಕ್ಯಾನ್ಸರ್ಗಳು ಮಾರಣಾಂತಿಕ ಖಾಯಿಲೆಗಳಾಗಿವೆ, ವೈದ್ಯಕೀಯ ತಂತ್ರಜ್ಞಾನದಿಂದ ಇವೆರಡೂ ಖಾಯಿಲೆಗಳನ್ನು ಆರಂಭಿಕಹಂತದಲ್ಲಿ ಪತ್ತೆ ಮಾಡಿ ಸೂಕ್ತ ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.
ಇದೇ ಉದ್ದೇಶದಿಂದ ಆಯೋಜಿಸಿರುವ ಈ ಉಚಿತ ತಪಾಸಣಾ ಶಿಬಿರದಲ್ಲಿ, ಪರಿಣಿತ ಮಹಿಳಾ ತಜ್ಞರಿಂದ ಪರೀಕ್ಷಿಸಿಕೊಂಡು, ಅವಶ್ಯವಿದ್ದಲ್ಲಿ ಸುಲಭ ವಿಧಾನದಲ್ಲಿ ಚಿಕಿತ್ಸೆ ಪಡೆದು, ರೋಗ ಮುಕ್ತರಾಗಬಹುದಾಗಿದೆ ಎಂದ ಅವರು, ಶಿಬಿರದಲ್ಲಿ ಉಚಿತ ಗರ್ಭಾಶಯ ಪರೀಕ್ಷೆ, ಚಿಕಿತ್ಸೆ ಹಾಗೂ ಉಚಿತ ಮ್ಯಾಮೊಗ್ರಫಿ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ವೈದ್ಯರಾದ ಡಾ.ಮೀರಾ ಪ್ರಸಾದ್, ಡಾ.ಭಗವಾನ್, ಡಾ.ಸೋಮಶೇಖರ್ ಹಾಗೂ ಡಾ.ಚಂಪಕ ಮಾಲಿನಿ ಉಪಸ್ಥಿತರಿದ್ದರು.




