ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಸರ್ ಎಂ.ವಿಶ್ವೇಶ್ವರಯ್ಯನವರ ಜಯಂತಿ ಪ್ರಯುಕ್ತ “ಇಂಜಿನಿಯರ್ಸ್ ಡೇ” ಆಚರಿಸಲಾಯಿತು. ಕಾಲೇಜಿನಲ್ಲಿರುವ ಸರ್ ಎಂ.ವಿ. ಪುತ್ಥಳಿಗೆ ಮಾಲಾರ್ಪಣೆಯನ್ನು ಪಿಇಟಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ, ಪ್ರಾಂಶುಪಾಲ ಡಾ.ಹೆಚ್.ಎಂ.ನಂಜುಂಡಸ್ವಾಮಿ , ಉಪ ಪ್ರಾಂಶುಪಾಲ ಡಾ: ವಿನಯ್ ಹಾಗೂ ಸಿವಿಲ್ ವಿಭಾಗದ ಮುಖ್ಯಸ್ಥ ಡಾಕ್ಟರ್. ಹೆಚ್. ಸಿ. ಚೌಡೇಗೌಡ ಉಪಸ್ಥಿತರಿದ್ದರು. ನಂತರ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಶಿವಪ್ರಕಾಶ್ ಹಾಗೂ ಡಾ.ರಾಮಲಿಂಗಯ್ಶ ಅವರನ್ನು ಸನ್ಮಾನಿಸಲಾಯಿತು.




