Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಚಿರತೆ ದಾಳಿಗೆ ಹಸುವಿನ ಕರು ಸಾವು

ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಹೊತೋಯ್ದು ತಿಂದು ಹಾಕಿರುವ ಘಟನೆ ತಾಲೂಕಿನ ಮಾದಾಪುರ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಭಿ ಎಂಬುವವರಿಗೆ ಸೇರಿದ ಹಸುವಿನ ಕರುವನ್ನ ತಡರಾತ್ರಿ ಚಿರತೆ ತಿಂದು ಹಾಕಿದೆ.

ಪ್ರತಿನಿತ್ಯ ಕೊಟ್ಟಿಗೆಯಲ್ಲಿ ಹಸು ಮತ್ತು ಕರು ವನ್ನು ಕಟ್ಟಿ ಹಾಕಲಾಗುತ್ತಿತ್ತು. ಚಿರತೆ ರಾತ್ರಿ ವೇಳೆ ದಾಳಿ ಮಾಡಿ ಕರುವನ್ನ ಅನತಿ ದೂರ ಎಳೆದೊಯ್ದು ಅರ್ಧ ಭಾಗ ತಿಂದು ಹಾಕಿದೆ.
ಚಿರತೆ ದಾಳಿ ಮಾಡಿರುವ ಬೆನ್ನೆಲ್ಲೇ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು,ಜಮೀನಿಗೆ ತೆರಳಲು ರೈತರು ಆತಂಕ ಪಡುತ್ತಿದ್ದು, ಚಿರತೆ ಪ್ರತ್ಯಕ್ಷದಿಂದ ಗ್ರಾಮದಲ್ಲಿ ಭೀತಿ ಸೃಷ್ಟಿಸಿದೆ.
ಕರು ಕಳೆದುಕೊಂಡ ರೈತನ ಕುಟುಂಬ ಕಂಗಾಲಾಗಿದ್ದು ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದು, ಇದೇ ವೇಳೆ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ