Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ವಿಶ್ವೇಶ್ವರಯ್ಯ ನಾಡಿನ ಹಿತಕ್ಕೆ ಶ್ರಮಿಸಿದ್ದಾರೆ- ಕೆಂಪಯ್ಯ

ಸರ್.ಎಂ.ವಿಶ್ವೇಶ್ವರಯ್ಯ ಅವರು ನಾಡಿನ ಹಿತಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ, ಅಂತಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ನಾವು ಸಾಗಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಹೆಚ್. ಕೆಂಪಯ್ಯ ಅಭಿಪ್ರಾಯಪಟ್ಟರು.

ಮಳವಳ್ಳಿ ಪಟ್ಟಣದ ಟೋಲ್ ಗೇಟ್‌ನ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸರ್.ಎಂ.ವಿಶ್ವೇಶ್ವರಯ್ಯ ಯುವಕರ ಸಂಘದ ಸದಸ್ಯರು ಹಮ್ಮಿಕೊಂಡಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ 163ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ಇದ್ದು ಸತ್ತವರು ಹಲವರು ಇನ್ನೂ ಕೆಲವರು, ಸತ್ತು ಬದುಕಿದ್ದಾರೆ. ಅವರಲ್ಲಿ ಪ್ರಮುಖವಾಗಿ ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸೇರಿದ್ದಾರೆ. ಇಲ್ಲಿ ಮಂಟಪ ನಿರ್ಮಾಣ ಮಾಡಿಕೊಟ್ಟ ಮಾಜಿ ಸಚಿವ ಕೆ.ಎಸ್.ನಾಗೇಗೌಡರನ್ನು ಈ ಸಂದರ್ಭದಲ್ಲಿ ನಾವುಗಳು ಸ್ಮರಿಸಬೇಕು. ಹಲವು ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶ್ವೇಶ್ವರಯ್ಯ ಅವರ ಹಾದಿಯಲ್ಲಿಯೇ ಸಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕರಾಜು ವಿಶ್ವೇಶ್ವರಯ್ಯ ಅವರು ತಮ್ಮ ಕೆಲಸದ ಮೂಲಕ ಗುರುತಿಸಿಕೊಂಡು ದೇಶ, ವಿದೇಶದಲ್ಲಿ ಹೆಸರುಗಳಿಸಿದ್ದಾರೆ. ಅಂತಹ ಮಹಾನ್ ಪುರುಷರು ಹಾಕಿದ ಮಾರ್ಗದಲ್ಲಿ ಇಂದಿನ ಪೀಳಿಗೆ ಯುವಕರು ಸಾಗಬೇಕಿದೆ. ಹೊಸ ಹೊಸ ತಂತ್ರಜ್ಞಾನಗಳಿಗೆ ಅವರ ಪರಿಶ್ರಮದಿಂದ ಬುನಾದಿ ಹಾಕಿದ್ದಾರೆ. ಅವರು ದೂರದೃಷ್ಟಿ ಮತ್ತು ಸಮಾಜಮುಖಿ ಚಿಂತನೆ ನಡೆಸಿ ಹಲವು ಹೊಸ ಯೋÃಜನೆಗಳನ್ನು ರೂಪಿಸಿ ಆಧುನಿಕ ಮೈಸೂರಿನ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದು ಹೇಳಿದರು.

ವಿಶ್ವೇಶ್ವರಯ್ಯ ಯುವಕರ ಸಂಘದ ಅಧ್ಯಕ್ಷ ಚಿಕ್ಕಮರಿ ಮಾತನಾಡಿ, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ಹಲವು ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ದೇಶದಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದು, ಇಂತಹ ಮಹಾನ್ ವ್ಯಕ್ತಿಯ ಜನ್ಮದಿನಾಚರಣೆ ಆಚರಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ತಿಳಿಸಿದರು.

ಇದೇ ವೇಳೆಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಯುವಕರ ಸಂಘದ ಸದಸ್ಯರು ಶಾಲಾ ಮಕ್ಕಳಿಗೆ ಪೆನ್ನು ಮತ್ತು ಪುಸ್ತಕ ನೀಡಿದರು.

ಮುಖಂಡರಾದ ಮಹದೇವು, ನಂಜುಂಡ, ವೀರೇಶ್, ಮುಖ್ಯ ಶಿಕ್ಷಕಿ ಮರಮ್ಮ, ಶಿಕ್ಷಕರಾದ ಪುಟ್ಟಸ್ವಾಮಿ, ಶಿವಕುಮಾರ್ ಸೇರಿದಂತೆ ಹಲವರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!