Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಬ್ಯಾಂಕಿಗೆ ಷೇರುದಾರರ ಹೆಚ್ಚಳ- ಗುರುಶಂಕರ್

ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಬ್ಯಾಂಕ್‌ಗೆ ದಿನೇ ದಿನೇ ಷೇರುದಾರರು ಹೆಚ್ಚಳವಾಗುತ್ತಿದ್ದಾರೆ ಎಂದು ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಬ್ಯಾಂಕ್‌ನ ಮಂಡ್ಯ ತಾಲೂಕು ಶಾಖಾ ಅಧ್ಯಕ್ಷ ಗುರುಶಂಕರ್ ಹೇಳಿದರು.

ಮಂಡ್ಯ ನಗರದ ಪ್ರವಾಸಿಮಂದಿರದಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಬ್ಯಾಂಕ್‌ನ ಮಂಡ್ಯ ತಾಲೂಕು ಶಾಖೆ ಆಯೋಜಿಸಿದ್ದ ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆಯ ತರಬೇತಿ ಕಟ್ಟಡ ಲೋಕಾರ್ಪಣೆ ಮತ್ತು ಸಹಕಾರ ಸಂಘದ ಸೂಪರ್ ಮಾರ್ಕೆಟ್ ಕಟ್ಟಡ ಭೂಮಿ ಪೂಜೆ ಸಮಾರಂಭದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿರುವ ಗ್ರಾಮೀಣ ವ್ಯಾಪ್ತಿಯ ಮಹಿಳಾ ಸ್ವ ಸಹಯ ಸಂಘದ ಪದಾಧಿಕಾರಿಗಳು ಷೇರುದಾರರಾಗುವ ಮೂಲಕ ಸಹಕಾರ ಬ್ಯಾಂಕ್‌ಗೆ ಆರ್ಥಿಕವಾಗಿ ಶಕ್ತಿ ನೀಡುತ್ತಿದ್ದಾರೆ, ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಬ್ಯಾಂಕ್‌ನಲ್ಲಿ ಸಿಗುವ ಹೆಚ್ಚಿನ ಬಡ್ಡಿ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ನುಡಿದರು.

ಮಂಡ್ಯ ನಗರದಲ್ಲಿರುವ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಬ್ಯಾಂಕ್‌ನ ತಾಲೂಕು ಶಾಖೆಗೆ ಸುಮಾರು 25 ಮಹಿಳಾ ಸ್ವ-ಸಹಾಯ ಸಂಘಗಳು ಷೇರುದಾರಾಗಿದ್ದಾರೆ, ಮತ್ತಷ್ಟು ಹೆಚ್ಚುಳವಾಗುವ ನಿಟ್ಟಿನಲ್ಲಿ ಪ್ರಚಾರಾಂದೋಲನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯಾದಂತ್ಯ ಇರುವ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಬ್ಯಾಂಕ್ ತನ್ನ 27 ಶಾಖೆಗಳನ್ನು ಒಳಗೊಂಡು ಸಹಕಾರ ಕ್ಷೇತ್ರದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದೆ, ಹಣಕಾಸು ವ್ಯವಹಾರದಲ್ಲಿ ಷೇರುದಾರು ಮತ್ತು ಗ್ರಾಹಕರಿಗೆ ಎಲ್ಲಾ ಸೌಲಭ್ಯಗಳನ್ನು ಹಂತ ಹಂತವಾಗಿ ನೀಡುತ್ತಿರುವುದು ಗಮನಾರ್ಹವಾಗಿದೆ ಎಂದು ತಿಳಿಸಿದರು.

ಸೆ. 23ರಂದು ಟಿ.ನರಸೀಪುರದ ತ್ರೀವೇಣಿನಗರದಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆಯ ತರಬೇತಿ ಕಟ್ಟಡ ಲೋಕಾರ್ಪಣೆ ಮತ್ತು ಸಹಕಾರ ಸಂಘದ ಸೂಪರ್ ಮಾರ್ಕೆಟ್ ಕಟ್ಟಡ ಭೂಮಿ ಪೂಜೆ ಸಮಾರಂಭ ನಡೆಯಲಿದೆ, ಈ ವಿಶೇಷ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಬ್ಯಾಂಕ್‌ನ ಆಡಳಿತ ಮಂಡಳಿ ಪದಾಧಿಕಾರಿಗಳು ಷೇರುದಾರರು, ಗ್ರಾಹಕರನ್ನು ಕರೆದೊಯ್ಯಲಾಗುವುದು ಎಂದು ತಿಳಿಸಿದರು.

ನೂತಕ ಕಟ್ಟಡ ಲೋಕರ್ಪಣೆ ಕಾರ್ಯಕ್ರಮಕ್ಕೆ ನಾಡಿನ ಖ್ಯಾತ ವಾಗ್ಮಿ ಜ್ಞಾನಪ್ರಕಾಶ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಬೌದ್ಧಧಮ್ಮ ಬಿಕ್ಕುಗಳು, ಸ್ಥಳೀಯ ಶಾಸಕರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಬ್ಯಾಂಕ್‌ನ ಷೇರುದಾರರು, ಗ್ರಾಹಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪೂರ್ವಭಾವಿ ಸಭಾ ಕಾರ್ಯಕ್ರಮದಲ್ಲಿ ಎ.ವಿ.ಎಸ್.ಎಸ್ ಮಂಡ್ಯ ತಾಲೂಕು ಶಾಖೆಯ ಸಿಇಓ ಜಯಶಂಕರ್‌ ಹೊಳಲು, ಷೇರುದಾರರಾದ  ಮುರುಗನ್, ಸೋಮಶೇಖರ್‌ ಕೆ.ಗೌಡಗೆರೆ,  ರಾಜೇಶ್ ಕೋಣನಹಳ್ಳಿ,  ಕುಮಾರ್ ಕೊಡಳ್ಳಿ, ಕುಮಾರ್‌ ಬಿಳಗುಲಿ, ಉಮೇಶ್‌ ಉಮ್ಮಡಹಳ್ಳಿ, ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳು ಹಾಗೂ ಸ್ವ ಸಹಾಯ ಸಂಘದ ಸದಸ್ಯರುಗಳು ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!