Thursday, September 19, 2024

ಪ್ರಾಯೋಗಿಕ ಆವೃತ್ತಿ

KRS ಇಲ್ಲದೇ ಬೆಂಗಳೂರು ಜನ ಬದುಕಲು ಸಾಧ್ಯವಿಲ್ಲ: ಆರ್.ಅಶೋಕ್

ಕೃಷ್ಣರಾಜಸಾಗರ ಇಲ್ಲದೇ ಬೆಂಗಳೂರು ಜನ ಬದುಕಲು ಸಾಧ್ಯವಿಲ್ಲ.ಕಾವೇರಿ ಹೋರಾಟಕ್ಕೆ ಬೆಂಗಳೂರಿಗರು ಕೈ ಜೋಡಿಸಬೇಕೆಂದು ಮಾಜಿ ಸಚಿವ ಆರ್.ಅಶೋಕ್ ತಿಳಿಸಿದರು.

ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನಡೆಯುತ್ತಿರುವ ರೈತ ಹಿತರಕ್ಷಣಾ ಸಮಿತಿಯ ಹೋರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾವೇರಿ ಉಳಿವಿಗಾಗಿ ರೈತರ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಕಾವೇರಿ ನೀರು ಬಳಸುವುದು ಬೆಂಗಳೂರಿಗರೇ ಹೆಚ್ಚು. ಒಂದು ದಿನ ನೀರು ಹೆಚ್ಚು- ಕಮ್ಮಿ ಆದರೂ 50 ಕರೆಗಳು ಬರುತ್ತದೆ.ಮಂಡ್ಯ ಜನರು ವಿರೋಧ ಮಾಡದಿದ್ರೆ ಇನ್ನು ಅದೆಷ್ಟು ನೀರು ಹೋಗ್ತಿತ್ತೊ. ರೈತರ ಹೋರಾಟಕ್ಕೆ ಹೆದರಿ ಕದ್ದು ಮುಚ್ಚಿ ನೀರು ಬಿಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರದ ಮೇಲೆ ಒತ್ತಡ ಹಾಕಲು ನಾವು ಸಿದ್ದರಿದ್ದೇವೆ.ಆದರೆ ನೀರು ಬಿಟ್ಟ ಮೇಲೆ ಸರ್ಕಾರ ಸಭೆ ಕರೆಯುತ್ತದೆ.ರಾತ್ರೋರಾತ್ರಿ ನೀರು ಬಿಟ್ಟು ಲೀಕೇಜ್ ಹೋಗ್ತಿದೆ ಅಂತಾರೆ. ಈ ಹಿಂದೆ ಲೀಕೇಜ್ ಹೋಗ್ತಿತ್ತು. ಬಸವರಾಜ ಬೊಮ್ಮಾಯಿ ಮಂತ್ರಿ ಆಗಿದ್ದಾಗ ಸರಿ ಪಡಿಸಿದ್ದಾರೆ. ಈಗ ಇವರೇ ಲೀಕೇಜ್ ಹರಿಸುತ್ತಿದ್ದಾರೆ.ಇಲ್ಲಿ ವಾಟರ್‌ಮನ್ ತಮಿಳುನಾಡಿನವರ ಅಥವಾ ಕರ್ನಾಟಕದವರ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ತಮಿಳುನಾಡಿಗೆ ನೀರು ಬಿಟ್ಟು ಸಬೂಬು ಹೇಳ್ತಿದ್ದಾರೆ.ಕಾವೇರಿ ನಮ್ಮದಲ್ಲ ದಕ್ಷಿಣ ಭಾರತದ್ದು ಎಂದು ಮಂತ್ರಿಗಳೇ ಹೇಳ್ತಾರೆ. ಮತ್ಯಾಕೆ ಕಾವೇರಿ ಎಂಬ ಹೆಸರು, ಸ್ಟಾಲಿನ್, ಪಳನಿ ಅಂತ ಹೆಸರಿಟ್ಟು ಬಿಡಿ ಎಂದು ಕಿಡಿಕಾರಿದರು.

ಕಾವೇರಿ ನದಿ ಜೊತೆ ನಮಗೆ ಭಾವನಾತ್ಮಕ ಸಂಬಂಧ ಇದೆ.ಕಾವೇರಿ ನಮ್ಮದು ಎಂದು ಹೋರಾಟ ಮಾಡಿದ್ದೇವೆ.ಎಲ್ಲೆಡೆಯೂ ಕಾವೇರಿಗಾಗಿ ಹೋರಾಟ ನಡೆಯುತ್ತಿದೆ. ಬೆಂಗಳೂರಿನವರು ಕಾವೇರಿ ಹೋರಾಟಕ್ಕೆ ಬರಬೇಕು. ಕುಡಿಯುವ ನೀರು ಇಲ್ಲ ಅಂದ್ರೆ ಸಾಫ್ಟ್‌ವೇರ್, ಹಾರ್ಡ್‌ವೇರ್ ಕೆಲಸಕ್ಕೆ ಬರಲ್ಲ. ಜನವರಿ ನಂತರ ಇದೆ ಪರಿಸ್ಥಿತಿ ಇದ್ರೆ ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ ಎಂದರು.

ಮಂಡ್ಯ ರೈತರ ಹೋರಾಟಕ್ಕೆ ಬೆಂಗಳೂರಿಗರೂ ಸಾಥ್ ಕೊಡಬೇಕು.ನೀರು ಯಾವ ಪಕ್ಷದ್ದು ಅಲ್ಲ.ಕಾವೇರಿ ವಿಚಾರದಲ್ಲಿ ಸರಿಯಾದ ವಾದ ನಡೆದಿಲ್ಲ. ತಮಿಳುನಾಡು ಅರ್ಜಿ ಹಾಕಿದ ಮೇಲೆ ನಮ್ಮವರು ಅರ್ಜಿ ಹಾಕ್ತಾರೆ.ತಮಿಳುನಾಡಿನವರು ಅಷ್ಟು ಆಕ್ಟೀವ್. ನಮ್ಮವರು ನೀರು ಬಿಟ್ಟು ಆಮೇಲೆ ದಾಖಲೆ ಹುಡುಕುತ್ತಿದ್ದಾರೆ.
ತಮಿಳುನಾಡು ಕೇಳುವ ಮುಂಚೆ ನೀರು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಶಾಸಕ ರವಿ ಸುಬ್ರಹ್ಮಣ್ಯ, ರೈತನಾಯಕಿ ಸುನಂದಾ ಜಯರಾಮ್,ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್, ಮುಖಂಡರಾದ ಅಶ್ವಥ್ ನಾರಾಯಣ್,ಅಶೋಕ್ ಜಯರಾಮ್, ವಿವೇಕ್,ಚೇತನ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!