Friday, November 20, 2026

ಪ್ರಾಯೋಗಿಕ ಆವೃತ್ತಿ

ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವುದೇ ಲಯನ್ಸ್ ಧ್ಯೇಯೋದ್ದೇಶ- ಧನಂಜಯ ದರಸಗುಪ್ಪೆ

ಅಗತ್ಯವಿರುವವರನ್ನು ಗುರುತಿಸಿ, ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೇ ಕೈಲಾದ ಸೇವೆ ಮಾಡುವುದೇ ಲಯನ್ಸ್ ಧ್ಯೇಯೋದ್ದೇಶ ಎಂದು ವಲಯಾಧ್ಯಕ್ಷ ಲಯನ್ ಜಿ. ಧನಂಜಯ ದರಸಗುಪ್ಪೆ ತಿಳಿಸಿದರು.

ಮಂಡ್ಯದ ಸರಕಾರಿ ಐಟಿಐ ಕಾಲೇಜಿನಲ್ಲಿ “ಲಯನ್ ಸೇವಾ ಸಪ್ತಾಹ”ದ ಅಂಗವಾಗಿ, ಲಯನ್ಸ್ ಕ್ಲಬ್ ಗಳಾದ ನಾಲ್ವಡಿ- ಮಂಡ್ಯ ಮಧುರ -ಇಂಜಿನಿಯರ್ಸ್ -ಬಸರಾಳು -ಅಕ್ಷಯ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಐ. ಟಿ. ಐ ಕಾಲೇಜಿನ ಸಹಯೋಗದಲ್ಲಿ ನಡೆದ ‘ನೇತ್ರ ತಪಾಸಣೆ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಇರುವ ಲಯನ್ಸ್ ಕ್ಲಬ್ ಗಳ ಮುಖಾಂತರ ಗಿಡ ವಿತರಿಸುವ, ನೆಡುವ ಕಾರ್ಯಕ್ರಮ, ಶಾಲೆಗೆ ಬಿಳಿ ಹಲಗೆ, ಅರೋಗ್ಯ ಮೇಳ, ಮಧುಮೇಹ ತಪಾಸಣೆ, ನೇತ್ರ ತಪಾಸಣೆ, ಹೊಲಿಗೆ ಯಂತ್ರ ವಿತರಣೆ ಹಾಗೂ ಬೀದಿ ವ್ಯಾಪಾರಿಗಳಿಗೆ ಕೊಡೆಗಳನ್ನು ವಿತರಿಸುವ ಕಾರ್ಯಕ್ರಮಗಳನ್ನು 317-ಜಿ ರಾಜ್ಯಪಾಲ ಡಾ.ಲ. ಕೃಷ್ಣೇಗೌಡ ರವರ ಮಾರ್ಗದರ್ಶನದಂತೆ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಪ್ರಾಂಶುಪಾಲ ನಾಗಾನಂದ ಅವರು, ಈ ರೀತಿಯ ಲಯನ್ ಸೇವಾ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಈ ರೀತಿಯ ಕಾರ್ಯಕ್ರಮಗಳಿಗೆ ನಾವು ಸಹಕಾರ ನೀಡುವುದಾಗಿ ಭರವಸೆ ನೀಡಿದರು

ಈ ಸಂದರ್ಭದಲ್ಲಿ, ಜಿ ಇ ಟಿ ಕೋ ಆರ್ಡಿನೇಟರ್ ಲಯನ್ ಹನುಮಂತಯ್ಯ, ಜಿ ಎಂ ಟಿ ಕೋ ಆರ್ಡಿನೇಟರ್ ಲಯನ್ ಟಿ ನಾರಾಯಣಸ್ವಾಮಿ, ವಿಷನ್ ಡಿ ಸಿ. ಲ. ಎಂ. ಈ. ಸುಭಾಸ್, ಲಯನ್ ಡಿಸಿಗಳಾದ ಲಯನ್ ಶಿವಲಿಂಗಯ್ಯ, ಲಯನ್ ಚಿಕ್ಕಣ್ಣ, ಲಯನ್. ನಾಗರಾಜು, ಮಂಡ್ಯ ಎಂಜಿನಿಯರ್ಸ್ ಲಯನ್ಸ್ ಕ್ಲಬ್ಬಿನ ಲಯನ್ ಪುಟ್ಟಸ್ವಾಮಿ, ಮಂಡ್ಯ ಲಯನ್ಸ್ ಕ್ಲಬ್ಬಿನ ಲಯನ್ ಆನಂದ, ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ಬಿನ, ಲ. ಶಿವಲಿಂಗು, ಮಂಡ್ಯ ಬಸರಾಳಿನ ಲ. ಪ್ರದೀಪ್, ಮಂಡ್ಯ ಮಧುರ ಲಯನ್ ಕ್ಲಬ್ಬಿನ ಲ. ದೇವೇಗೌಡ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ