Thursday, November 19, 2026

ಪ್ರಾಯೋಗಿಕ ಆವೃತ್ತಿ

ಅಮರಣಾಂತ ಉಪವಾಸನಿರತ ಇಬ್ಬರು ರೈತರು ತೀವ್ರ ಅಸ್ವಸ್ಥ

ಟನ್ ಕಬ್ಬಿಗೆ 4500 ರೂ. ನಿಗದಿ, ಹಾಲಿನ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಡ್ಯ ನಗರದ ಸರ್ ಎಂ.ವಿ. ಪ್ರತಿಮೆ ಎದುರು ಕಳೆದ 3 ದಿನಗಳಿಂದ  ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಇಬ್ಬರು ರೈತ ಮುಖಂಡರು ಶುಕ್ರವಾರ ತೀವ್ರ  ಅಸ್ವಸ್ಥರಾಗಿದ್ದಾರೆ.

nudikarntaka.com

ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಐವರು ರೈತ ಮುಖಂಡರ ಪೈಕಿ ವಿನೋದ್‌ಬಾಬು, ಸಣ್ಣಯ್ಯ ಜಿ.ಮಲ್ಲಿಗೆರೆ ಅವರು ತೀವ್ರ ಅಸ್ವಸ್ಥರಾಗಿದ್ದು, ಇಂದು ಇವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಉಳಿದ ಮೂವರು ಉಪವಾಸ ನಿರತ ರೈತರಾದ ಮಲ್ಲನಾಯಕನಕಟ್ಟೆ ವಿಜಯ ಕುಮಾರ್, ಬೂತನ ಹೊಸೂರು ಸಂತೋಷ್, ಗೂಳೂರು ರಾಮಕೃಷ್ಣ ಅವರ ಆರೋಗ್ಯಸ್ಥಿತಿಯೂ ಇವರಿಂತ ಭಿನ್ನವಾಗಿಲ್ಲ ಎನ್ನುವಂತಾಗಿದೆ.

nudikarnataka.com

ಹೋರಾಟದ ಸ್ಥಳಕ್ಕೆ ತಹಶೀಲ್ದಾರ್ ಮಹಮದ್ ಕುಂಞ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ್ ಅವರು ಭೇಟಿ ನೀಡಿ, ಹೋರಾಟಗಾರರನ್ನು ಆಸ್ಪತ್ರೆಗೆ ದಾಖಲಾಗುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಸೊಪ್ಪು ಹಾಕದ ಹೋರಾಟಗಾರರರು, ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವರೆಗೆ ಉಪವಾಸ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕಳೆದ 100 ದಿನಗಳಿಂದ ರೈತರು ಅನಿರ್ದಿಷ್ಟ ಅಹೋರಾತ್ರಿ ಹೋರಾಟ ನಡೆಸಿದರೂ ಬಿಜೆಪಿ ಸರ್ಕಾರ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಐವರು ರೈತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇಂದಿಗೆ ರೈತ ಹೋರಾಟಕ್ಕೆ 103 ದಿನಗಳು ತುಂಬಿದ್ದು, ಸರ್ಕಾರ ಇನ್ನೂ ಮುಂದಾದರೂ ರೈತ ಪರ ನಿರ್ಧಾರ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ