Thursday, September 19, 2024

ಪ್ರಾಯೋಗಿಕ ಆವೃತ್ತಿ

ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ| ಜೆರುಸಲೇಂನಲ್ಲಿ ಸಿಲುಕಿಕೊಂಡ ಭಾರತದ ಯಾತ್ರಿಕರು

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧ ಪರಿಸ್ಥಿತಿ ಹಿನ್ನೆಲೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ಜೆರುಸಲೇಂನಲ್ಲಿ ಸಿಲುಕಿರುವ ರಾಜ್ಯದ 27 ಜನರನ್ನು ರಕ್ಷಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯವನ್ನು ಕೋರಿದ್ದಾರೆ.

ರಾಜ್ಯದ ಜನರನ್ನು ಮರಳಿ ರಾಜ್ಯಕ್ಕೆ ಕರೆತರಲು ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಸಂಗ್ಮಾ ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿದ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ, ಪವಿತ್ರ ತೀರ್ಥಯಾತ್ರೆಗಾಗಿ ಜೆರುಸಲೆಂಗೆ ಪ್ರಯಾಣಿಸಿದ ಮೇಘಾಲಯದ 27 ನಾಗರಿಕರು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಪ್ರಸ್ತುತ ಉದ್ವಿಗ್ನತೆಯಿಂದಾಗಿ ಬೆಥ್ ಲೆಹೆಮ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ನಾನು ವಿದೇಶಾಂಗ ಸಚಿವಾಲಯದ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.

ಗಾಜಾ ಪಟ್ಟಿಯಲ್ಲಿರುವ ಆಡಳಿತಾರೂಢ ಹಮಾಸ್ ಗುಂಪು ಶನಿವಾರ ಬೆಳಗಿನ ಜಾವ ಇಸ್ರೇಲ್ ಮೇಲೆ ದಾಳಿಯನ್ನು ನಡೆಸಿದೆ. ಡಜನ್ ಗಟ್ಟಲೆ ಯೋಧರು ಭಾರಿ ಭದ್ರಪಡಿಸಿದ ಗಡಿಯನ್ನು ನುಸುಳಿ ಸಾವಿರಾರು ರಾಕೆಟ್‌ಗಳನ್ನು ಹಾರಿಸಿದ್ದಾರೆ.

ಹಮಾಸ್‌ ಹೋರಾಟಗಾರರು ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ನಡೆಸಿದ ಬಳಿಕ ಇಸ್ರೇಲ್‌ ಯುದ್ಧ ಘೋಷಿಸಿದ್ದು, ಶತ್ರುಗಳು ಇದಕ್ಕಾಗಿ ತಕ್ಕ ಬೆಲೆ ತೆರಲಿದ್ದಾರೆ ಎಂದು ಇಸ್ರೇಲ್‌ ಪ್ರಧಾನಿ ಹೇಳಿದ್ದರು.

ಹಮಾಸ್ ಗುಂಪು ಶನಿವಾರ ಬೆಳಗಿನ ಜಾವ ಇಸ್ರೇಲ್ ಮೇಲೆ ನಡೆಸಿದ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಯುದ್ಧ ಘೋಷಿಸಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಎರಡೂ ದೇಶಗಳ 500ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಮತ್ತು ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!