Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ಯಾಲೆಸ್ತೀನ್- ಇಸ್ರೇಲ್ ಸಮಸ್ಯೆ ಏನು ಎತ್ತಾ….? ನಾಗೇಗವ್ಡ ಕೀಲಾರ ಏನ್ ಹೇಳ್ತಾರೆ…..

✍️ ಕೀಲಾರ ನಾಗೇಗವ್ಡ

ಪ್ಯಾಲೆಸ್ತೀನ್- ಇಸ್ರೇಲ್ ಎರಡು ದೇಶಗಳ ಸಮಸ್ಯೆ ಏನು ಅಂತ ಸರಳವಾಗಿ ತಿಳಿಯೋಣ ಕಣ್ರಪ್ಪಾ. ಮೊದಲನೆಯದಾಗಿ ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮಕ್ಕೆ ಹೋಲಿಕೆ ಮಾಡಿ ಈ ಸಮಸ್ಯೆಯನ್ನು ನಿಮಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತೇನೆ. ಕೀಲಾರ ಗ್ರಾಮದಲ್ಲಿ ಐದು ಮುಖ್ಯ ಏರಿಯಾಗಳು ಇವೆ. ಮೇಲ್ಗಡೆ, ಮಧ್ಯದ ಮತ್ತು ಕೆಳಗಡೆ ಬಸ್ ಸ್ಟ್ಯಾಂಡ್ ಅಂತ. ಊರು ಉದ್ದಕ್ಕೂ ಮೂರು ಭಾಗ ಆಗಿದೆ. ಊರಿನ ಮಧ್ಯದಲ್ಲಿ ಮಾರಮ್ಮನ ಗುಡಿ ಇದೆ, ಊರಿನ ಒಂದು ತುದಿಗೆ ಗರೀಬಿ ಸೈಟ್ ಇದೆ.

ಊರಿನ ಸುತ್ತ ಜಮೀನು ಇದೆ. ಕೀಲಾರದಲ್ಲಿ ಕಾಲದಿಂದಲೂ ಒಕ್ಕಲಿಗರು, ದಲಿತರು, ವಡ್ಡರು, ಆಚಾರು, ಸಾಬರು ಜೊತೆಗೆ ಒಂದು ನಾಲ್ಕೈದು ಯಹೂದಿ ಕುಟುಂಬಗಳು ಇದ್ದವು ಅಂತ ಅಂದುಕೊಳ್ಳಿ. ಮಾರಮ್ಮನ ಗುಡಿ ಸುತ್ತ ಮುತ್ತಲಿನ ಜಾಗನ ಜೇರುಸೇಲೆಮ್ ಅಂದುಕೊಳ್ಳಿ. ಮಾರಮ್ಮನ ಗುಡಿ ಪಕ್ಕ ಯಹೂದಿ ಗಳ ಒಂದು ಪ್ರಾರ್ಥನ ಮಂದಿರ ಇದೆ ಅಂತ ಅಂದುಕೊಳ್ಳರಪ್ಪ. ಶತಮಾನಗಳಿಂದ ಕೀಲಾರದವರು ತಮ್ಮ ಪಾಡಿಗೆ ತಾವು ನೆಮ್ಮದಿಯಿಂದ ಬದುಕಿಕೊಂಡು ಹೋಗುತ್ತಿದ್ದರು ಕಣ್ರಪ್ಪಾ.

ಯಾವಾಗ ಯುರೋಪ್ ನಲ್ಲಿ ಮೊದಲನೇ ಮಹಾಯುದ್ಧ ಶುರುವಾಗಿ ಅನಂತರ ಎರಡನೇ ಮಹಾಯುದ್ಧ ಶುರುವಾಯಿತು ಯಹೂದಿಗಳ ಮಾರಣಹೋಮ ಶುರುವಾಯಿತು. ಅಷ್ಟರಲ್ಲಿ ಯಹೂದಿಗಳಿಗೂ ಯುರೋಪ್ ಸಹವಾಸ ಸಾಕಾಗಿತ್ತು. ಇವರಿಗೂ ಒಂದು ದೇಶ ಬೇಕಿತ್ತು. ಇವರ ಪುರಾಣದ ಪ್ರಕಾರ ಇವರ ಲಿಂಕ್ ಕೀಲಾರದ ಜೊತೆಗೆ ಇತ್ತು. ಅದಕ್ಕೆ ಇವರುಗಳು ಕೀಲಾರವೇ ನಮ್ಮ ದೇಶ ಅಂತ ಲಕ್ಷಾಂತರ ಜನರು ಯುರೋಪ್ ನಿಂದ ಕೀಲಾರ ಕ್ಕೆ ವಲಸೆ ಬಂದರು.

ಕೀಲಾರ ಬ್ರಿಟಿಷರವರ ಕಂಟ್ರೋಲ್ ನಲ್ಲಿ ಬೇರೆ ಇತ್ತಲ್ಲ ತಮ್ಮ ಪಶ್ಚಾತಾಪ ಕಮ್ಮಿ ಮಾಡಿಕೊಳ್ಳಲು ಕೀಲಾರದಲ್ಲಿ ಯಹೂದಿಗಳಿಗೆ ವಲಸೆ ಬಂದು ಉಳಿಯಲು ಅನುಕೂಲ ಮಾಡಿಕೊಟ್ಟರು. ಹಿಂಗೆ ವಲಸೆ ಬಂದ ಯಹೂದಿಗಳು ಗರೀಬಿ ಸೈಟ್, ಮಧ್ಯದ. ಕೆಳಗಡೆ ಬಸ್ ಸ್ಟ್ಯಾಂಡ್ ಏರಿಯಾ ಎಲ್ಲ ಇನ್ನು ಮುಂದೆ ಇಸ್ರೇಲ್ ಅಂತ ಅನೌನ್ಸ ಮಾಡಿ ಅಲ್ಲಿನ ಒಕ್ಕಲಿಗರು, ವಡ್ಡರು ಎಲ್ಲರನ್ನು ಮನೆ ಮಠ ಇಲ್ಲದಂಗೆ ಮಾಡಿದರು. ಇಷ್ಟೆ ಅಲ್ಲ ಕೀಲಾರದವರ ವ್ಯವಸಾಯದ ಜಮೀನು ಕಿತ್ತುಕೊಂಡರು. ಈಗ ಉಳಿದಿದ್ದು ಮೇಲ್ಗಡೆ ಬಸ್ ಸ್ಟ್ಯಾಂಡ್ ಮತ್ತು ಮಾರಮ್ಮನ ಗುಡಿ. ನೋಡ್ರಪ್ಪ ಮಾರಮ್ಮನ ಗುಡಿ ಪಕ್ಕ ಯಹೂದಿ ಗಳ ಪ್ರಾರ್ಥನ ಮಂದಿರ ಇದೆ, ನೀವಿಬ್ಬರೂ ಜಗಳ ಆಡತಿದಿರಿ ಅದಕ್ಕೆ ಈ ಏರಿಯಾನ ವಿಶ್ವಸಂಸ್ಥೆ ನೋಡಿಕೊಳ್ಳುತ್ತೆ, ನೀವು ಇಬ್ಬರೂ ಹಬ್ಬ ಹರಿದಿನ ಇಲ್ಲಿಗೆ ಬಂದು ಮಾಡಿಕೊಂಡು ಹೋಗಿ ಅಂತ ತೀರ್ಮಾನ ಮಾಡಿದರು. ಇದೇ ಜೇರುಸೇಲೆಮ್ ಕಣ್ರಪ್ಪಾ.

ಏನು ಯಹೂದಿಗಳು ಕೀಲಾರದ ಮೂರು ಏರಿಯಾ ಕಿತ್ತುಕೊಂಡರು ಆ ಏರಿಯಾದ ಮಧ್ಯೆ ಮಧ್ಯೆ ಈಗಲೂ ಕೀಲಾರದ ಒಕ್ಕಲಿಗರು, ದಲಿತರು, ಆಚಾರು, ವಡ್ಡರು ಇದ್ದಾರೆ. ಈಗ ಕೀಲಾರ ಅಂತ ಉಳಿದಿದ್ದು ಮೇಲ್ಗಡೆ ಬಸ್ ಸ್ಟ್ಯಾಂಡ್ ಮಾತ್ರ ಕಣ್ರಪ್ಪಾ. ಈ ಯಹೂದಿ ಗಳು ಮೇಲ್ಗಡೆ ಬಸ್ ಸ್ಟ್ಯಾಂಡ್ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ಕೀಲಾರದ ಜನ ದೊಡ್ಡ ಹೋರಾಟ ಮಾಡುತ್ತಿದ್ದಾರೆ ಕಣ್ರಪ್ಪಾ. ನೆನಪಿರಲಿ ಕೀಲಾರದ ಜನ ಅಂದರೆ ಒಂದಷ್ಟು ಯಹೂದಿಗಳು ಇದ್ದಾರೆ. ಇಸ್ರೇಲ್ ನ ಸಾವಿರಾರು ಜನರು ಇಸ್ರೇಲ್ ಕೀಲಾರದ ಮೇಲೆ ಮಾಡುತ್ತಿರುವ ಅನ್ಯಾಯವನ್ನು ಖಂಡಿಸುತ್ತಿದ್ದಾರೆ.

ಈಗ ನೀವೇ ಹೇಳ್ರಪ್ಪ ಕೀಲಾರ ಕ್ಕೆ ಬಂದ (ಪ್ಯಾಲಿಸ್ತೀನ್) ಪರಿಸ್ಥಿತಿ ನಿಮ್ಮ ಊರಿಗೆ ಬಂದರೆ ಸಹಿಸಿಕೊಂಡು ಕೂರುತಿರ ಅಥವಾ ರೊಚ್ಚಿಗೆದ್ದು ಹೋರಾಟ ಮಾಡ್ತಿರ. ಐ ಸ್ಟಾಂಡ್ ಐ ಸಿಟ್ ಅಂತ ಮಂಗಗಳ ತರ ಕುಣಿಯುವ ಮೊದಲು ಸರಿಯಾದ ಇತಿಹಾಸ ತಿಳಕಬೇಕು ಕಣ್ರಪ್ಪಾ. ಈಗಲೂ ಮೋದಿಯವರ ನೇತೃತ್ವದ ಒಕ್ಕೂಟ ಸರ್ಕಾರ ಪ್ಯಾಲಿಸ್ತೀನ್ ಡಿಮ್ಯಾಂಡು ಗಳು ತಪ್ಪು ಇಸ್ರೇಲ್ ಎಲ್ಲ ರೀತಿಯಲ್ಲೂ ಸರಿ ಅಂತ ಹೇಳಲೀ. ಹೇಳಲು ಸಾಧ್ಯವೇ ಇಲ್ಲ ಏಕೆಂದರೆ ಭಾರತದ ವಿದೇಶಿ ನೀತಿ ಕಾಲದಿಂದಲೂ ಪ್ಯಾಲಿಸ್ತೀನ್ ಪರವಾಗಿ ಇದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!