Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ನಮ್ಮೆಲ್ಲರ ಕರ್ತವ್ಯ: ಡಾ.ಭಾಗ್ಯವತಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದರಿಂದ ಅವರಿಗೆ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮನೋ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ.ಭಾಗ್ಯವತಿ ತಿಳಿಸಿದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಮಿಮ್ಸ್ ನ ಉಪನ್ಯಾಸ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಾಗಾರದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮಾಡಿಸಲು ಅನೇಕ ಬೀದಿ ನಾಟಕಗಳನ್ನು ಈಗಾಗಲೇ ಪ್ರದರ್ಶಿಸಿದ್ದು ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಿಮ್ಸ್ ನಿರ್ದೇಶಕರ ಹಾಗೂ ಡೀನ್ ಡಾ.ಮಹೇಂದ್ರ ಬಿ.ಜೆ ಕಿಮ್ಸ್ ಸೈಕಾಟ್ರಿಕ್ ವಿಭಾಗದ ನಿವೃತ್ತ ಹೆಚ್.ಒ.ಡಿ ಡಾ. ರಘುರಾಮ್, ನಿಮಾನ್ಸ್ ನ ಮಾಜಿ ನಿರ್ದೇಶಕ ಡಾ. ಸತೀಶ್‌ಚಂದ್ರ ಗಿರಿಮಾಜಿ, ಮಿಮ್ಸ್ ನ ಪ್ರಾಧ್ಯಾಪಕ ಡಾ.ತಮ್ಮಣ್ಣ ಪಿ.ಎಸ್, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಪಿ.ವಿ ಹಾಗೂ ಮನೋವೈದ್ಯಕೀಯ ವಿಭಾಗದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!