Thursday, September 19, 2024

ಪ್ರಾಯೋಗಿಕ ಆವೃತ್ತಿ

ಗಾಜಾ ಪಟ್ಟಿಯಾದ್ಯಂತ ನೀರಿನ ಅಭಾವ| ಸಾವು-ಬದುಕಿನ ಹೋರಾಟದಲ್ಲಿ 2 ಮಿಲಿಯನ್‌ ಜನತೆ !

ಗಾಜಾ ಪಟ್ಟಿಯಾದ್ಯಂತ ನೀರಿನ ಕೊರತೆಯಾಗಿದ್ದು 2 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಪಾಯದಲ್ಲಿದ್ದಾರೆ. ಇದು ಬದುಕು ಮತ್ತು ಸಾವಿನ ವಿಷಯವಾಗಿದೆ. 2 ಮಿಲಿಯನ್ ಜನರಿಗೆ ನೀರು ಲಭ್ಯವಾಗುವಂತೆ ಮಾಡಲು ಇಂಧನವನ್ನು ಈಗ ಗಾಜಾಕ್ಕೆ ತಲುಪಿಸಬೇಕಾಗಿದೆ ಎಂದು ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ಕೆಲಸ ಮಾಡುತ್ತಿರುವ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ (UNRWA) ಕಮಿಷನರ್-ಜನರಲ್ ಫಿಲಿಪ್ ಲಾಝಾರಿನಿ ಕಳವಳ ವ್ಯಕ್ತಪಡಿಸಿದ್ದಾರೆ.

ಒಂದು ವಾರದಿಂದ ಗಾಜಾಕ್ಕೆ ಯಾವುದೇ ಮಾನವೀಯ ನೆಲೆಯ ಸಹಕಾರಕ್ಕೆ ಅನುಮತಿಸಲಾಗಿಲ್ಲ. ಸಾರ್ವಜನಿಕ ನೀರಿನ ಜಾಲಗಳು ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ, ಗಾಜಾ ಪಟ್ಟಿಯಲ್ಲಿ ಶುದ್ಧ ನೀರು ಖಾಲಿಯಾಗುತ್ತಿದೆ. ಜನರು ಈಗ ಬಾವಿಗಳಿಂದ ಕೊಳಕು ನೀರನ್ನು ಬಳಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಇದು ನೀರಿನಿಂದ ಹರಡುವ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಕ್ಟೋಬರ್ 11 ರಿಂದ ಗಾಜಾದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಇದು ನೀರಿನ ಪೂರೈಕೆಯ ಮೇಲೆ ಅಗಾಧ ಪರಿಣಾಮ ಬೀರುತ್ತದೆ ಎಂದು ಯುಎನ್‌ಆರ್‌ಡ್ಬ್ಲೂಎ (UNRWA) ಹೇಳಿದೆ.

ಗಾಝಾ ಪಟ್ಟಿಯ ಉತ್ತರ ಭಾಗದಲ್ಲಿರುವ ಜನರು ತಮ್ಮ ಮನೆಗಳನ್ನು ತೊರೆಯುವಂತೆ ಇಸ್ರೇಲ್ ಎಚ್ಚರಿಕೆ ನೀಡಿದೆ. ಕಳೆದ 12 ಗಂಟೆಯಿಂದ ಸಾವಿರಾರು ಮಂದಿ ಮನೆಗಳನ್ನು ತೊರೆದಿದ್ದಾರೆ. ಕೇವಲ ಒಂದು ವಾರದಲ್ಲಿ ಸುಮಾರು 1 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ.

ನಾವು ಈಗ ಗಾಜಾಕ್ಕೆ ಇಂಧನವನ್ನು ತಲುಪಿಸಬೇಕಿದೆ. ಜನರು ಸುರಕ್ಷಿತ ಕುಡಿಯುವ ನೀರನ್ನು ಹೊಂದಲು ಇಂಧನವು ಅಗತ್ಯವಾಗಿದೆ. ಇಲ್ಲದಿದ್ದರೆ ಚಿಕ್ಕ ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಸೇರಿ ಜನರು ತೀವ್ರ ನಿರ್ಜಲೀಕರಣದಿಂದ ಸಾಯಲು ಪ್ರಾರಂಭಿಸುತ್ತಾರೆ. ನೀರು ಈಗ ಉಳಿದಿರುವ ಕೊನೆಯ ಜೀವನಾಡಿಯಾಗಿದೆ. ಮಾನವೀಯ ನೆರವಿನ ಮೇಲಿನ ತಡೆಯನ್ನು ಈಗ ಹಿಂತೆಗೆದುಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ ಎಂದು ಲಾಝಾರಿನಿ ಹೇಳಿದ್ದಾರೆ.

ಉತ್ತರ ಗಾಜಾ ಮತ್ತು ಗಾಜಾ ನಗರದಿಂದ ದಕ್ಷಿಣ ಗಾಜಾ ಪಟ್ಟಿಗೆ ಜನರ ಸ್ಥಳಾಂತರಕ್ಕೆ ಆದೇಶಿಸಿದ್ದರೂ, ಗರ್ಭಿಣಿಯರು, ಮಕ್ಕಳು, ವೃದ್ಧರು ಮತ್ತು ವಿಕಲಚೇತನರು ಪ್ರದೇಶದಿಂದ ಪಲಾಯನ ಮಾಡಲು ಸಾಧ್ಯವಾಗಿಲ್ಲ. ಅವರಿಗೆ ಯಾವುದೇ ಆಯ್ಕೆಯಿಲ್ಲ ಮತ್ತು ಎಲ್ಲಾ ಸಮಯದಲ್ಲೂ ಅವರನ್ನು ರಕ್ಷಿಸಬೇಕು ಎಂದು UNRWA ಹೇಳಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!