Friday, September 20, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ ದಸರಾ| ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಮಂಡ್ಯ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಜಿಲ್ಲಾ ಹಾಲು ಒಕ್ಕೂಟ ವತಿಯಿಂದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಹಾಲು ಕರೆಯುವ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಶ್ರೀರಂಗಪಟ್ಟಣ ದಸರಾ ಹಬ್ಬದ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ 17 ಮಂದಿ ರೈತರ ಹಸುಗಳು ಭಾಗವಹಿಸಿದವು. ಸ್ಪರ್ಧೆಗೆ ವಿವಿಧ ಜಾತಿಯ ಹಸುಗಳಲ್ಲಿ ಹಾಲು ಕರೆಯುವ ಮೂಲಕ ಸ್ಪರ್ಧೆ ಅನಾವರಣಗೊಂಡಿತ್ತು.

ಬಹುಮಾನ ವಿಜೇತರ ವಿವರ

ಗಿರೀಶ್ 35.910 ಗ್ರಾಂ (ಪ್ರಥಮ-25.000ರೂ), ದೊಡ್ಡೇಗೌಡ 29.96ಗ್ರಾಂ (ದ್ವಿತೀಯ-20.000ರೂ), ನಾರಾಯಣ 29.43ಗ್ರಾಂ (ತೃತೀಯ-15.000ರೂ) ಬಹುಮಾನ ಪಡೆದುಕೊಂಡರು ಮತ್ತು ನರಸಿಂಹಗೌಡ 29.04ಗ್ರಾಂ ಸಮಾಧಾನಕರ (10.000ರೂ) ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಇನ್ನುಳಿದ ಸ್ಪರ್ಧಾರ್ಥಿಗಳಿಗೆ ಶ್ರೀರಂಗಪಟ್ಟಣ ಶಾಸಕರಾದ ಎ.ಬಿ. ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ವೈಯಕ್ತಿಕವಾಗಿ 5000 ರೂಗಳನ್ನು ನೀಡಿ ರೈತರನ್ನು ಪ್ರಶಂಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!