Friday, November 20, 2026

ಪ್ರಾಯೋಗಿಕ ಆವೃತ್ತಿ

”ನಾನೇನಾದ್ರೂ ದೇವೇಗೌಡರ ಮಗನಾಗಿದ್ರೆ, ಅವರಿಗೆ ನೋವು ಕೊಟ್ಟು ರಾಜಕೀಯ ಮಾಡುತ್ತಿರಲಿಲ್ಲ”- ಚಲುವರಾಯಸ್ವಾಮಿ

ನಾನೇನಾದ್ರೂ ದೇವೇಗೌಡರ ಮಗನಾಗಿದ್ರೆ, ಅವರಿಗೆ ನೋವು ಕೊಟ್ಟು ರಾಜಕೀಯ ಮಾಡುತ್ತಿರಲಿಲ್ಲ
ಇವತ್ತೇ ನನ್ನ ರಾಜಕೀಯ ಭವಿಷ್ಯ ಕೊನೆಗೆ ಆಗುತ್ತೆ ಅಂದಿದ್ರೂ ದೇವೇಗೌಡರಿಗೆ ನೋವು ಕೊಡುತ್ತಿರಲಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು,  ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಜೊತೆ ಸೇರಲ್ಲ ಅಂತ ದೇವೇಗೌಡರು ಅನೇಕ ಬಾರಿ ಹೇಳಿದ್ರು, ಆದರೂ ಮೈತ್ರಿಗೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಕುಮಾರಸ್ವಾಮಿ ಎರಡು ಭಾರಿ ಮುಖ್ಯಮಂತ್ರಿ ಆಗಿದ್ದಾರೆ. ದೇವೇಗೌಡರನ್ನು ಹೊರತುಪಡಿಸಿದರೆ ಕುಮಾರಸ್ವಾಮಿಯ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿದರು.

ಬೇರೆ ಯಾರಾದರೂ ತಂದೆ ಬದುಕಿಗಿದ್ದಾಗ ಎರಡು ಬಾರಿ ಮಗ ಸಿಎಂ ಆದ ಇತಿಹಾಸ ಇದಿಯಾ?
ಅಂತಹ ತಂದೆಗೆ ನೋವು ಮಾಡಿ ಅಮಿತ್ ಷಾ ಜೊತೆ ಸೇರಿದ್ದಾರೆ. ಇದನ್ನ ನೋಡಿದ್ರೆ ಬಿಜೆಪಿ, ಜೆಡಿಎಸ್ ಪರಿಸ್ಥಿತಿ ಏನಾಗಿದೆ ಅಂತ ಅರ್ಥ ಮಾಡಿಕೊಳ್ಳಬೇಕು. ಅವರ ಹೀನಾಯ ಪರಿಸ್ಥಿತಿಯಿಂದ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದನ್ನ ಹೇಳಿಕೆ ನೀಡೋದು ಹಾಗೂ ಪ್ರಚೋದನೆ ಮಾಡುತ್ತಿದ್ದಾರೆ ಎಂದರು.

ಐದು ವರ್ಷ ಸರ್ಕಾರ ಇರಲಿದೆ

ನಮ್ಮ ಸರ್ಕಾರ ಐದು ವರ್ಷ ಇದ್ದೇ ಇರಲಿದೆ. ಒಂದು ಸಣ್ಣ ವ್ಯತ್ಯಾಸ ಆದ್ರೆ ನನ್ನನ್ನ ಪ್ರಶ್ನೆ ಮಾಡಿ,
ಬಿಜೆಪಿ, ಜೆಡಿಎಸ್ ಶಕ್ತಿ ಹೀನವಾಗಿವೆ, ಅವರ ಕೈಯಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಆಗುತ್ತಿಲ್ಲ.
ಅವರನ್ನು ಕಂಡರೆ ನನಗೂ ಅಯ್ಯೋ ಎನಿಸುತ್ತದೆ. ಅವರೇನು ನನಗೆ ವೈರಿನೇ ಎಂದು ವ್ಯಂಗ್ಯವಾಡಿದರು.

ಮೈ ಪರೆಚಿಕೊಳ್ಳುತ್ತಿದ್ದಾರೆ

ಬಿಜೆಪಿಯವರಿಗೆ ಸುಮ್ನೆ ಕೂರೋದಕ್ಕಾಗದೆ ಕೈ ಪರೆಚಿಕೊಳ್ಳುತ್ತಿದ್ದಾರೆ. ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ಇದ್ದಾರೆ. ರಾಜ್ಯದ ಮುಖಂಡರನ್ನ ಬಿಜೆಪಿ ಕೇಂದ್ರ ನಾಯಕರು ಸೌಜನ್ಯಕ್ಕೂ ಮಾತನಾಡಿಸೋದಕ್ಕೆ ರೆಡಿ ಇಲ್ಲ. 66 ಸ್ಥಾನಕ್ಕೆ ಬಿಜೆಪಿ ಸೀಟು ಕುಸಿದಿರೋದು ಮೋದಿ, ಅಮಿತ್ ಷಾಗೆ ಜೀರ್ಣಿಸಿಕೊಳ್ಳಲು ಆಗಿಲ್ಲ. ಇಲ್ಲಿಯವರೆಗೆ ಬರಗಾಲ ಇದೆ, ಕಾವೇರಿ ಸಮಸ್ಯೆ ಇದೆ. ಸರ್ಕಾರದ ಜೊತೆ ಫೈಟ್ ಮಾಡೋದಕ್ಕೆ ವಿರೋಧ ಪಕ್ಷದ ನಾಯಕ ಇಲ್ಲ. ರಾಜ್ಯದ ಬಿಜೆಪಿ ನಾಯಕರ ಮೇಲೆ ರಾಷ್ಟ್ರ ನಾಯಕರಿಗೆ ವಿಶ್ವಾಸ ಇಲ್ಲವಾಗಿದೆ ಎಂದು ತಿರುಗೇಟು ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ