Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತದ ನಿರುದ್ಯೋಗ ದರ 2 ವರ್ಷಗಳಲ್ಲೇ ಗರಿಷ್ಠ ಹೆಚ್ಚಳ: CMIE ವರದಿ

ಭಾರತದ ನಿರುದ್ಯೋಗ ದರವು ಕಳೆದ ಅಕ್ಟೋಬರ್‌ನಲ್ಲಿ ಎರಡು ವರ್ಷಗಳಲ್ಲೇ ಗರಿಷ್ಠ ಅಂದರೆ 10.09%ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಡೇಟಾ ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಅಕ್ಟೋಬರ್‌ನಲ್ಲಿ ನಿರುದ್ಯೋಗದ ದರವು 7.09% ರಷ್ಟಿತ್ತು. ಹೊಸ ಅಂಕಿಅಂಶವು ಸೆಪ್ಟೆಂಬರ್‌ಗೆ ಹೋಲಿಕೆ ಮಾಡಿದರೆ ನಿರುದ್ಯೋಗದಲ್ಲಿ ಸುಮಾರು ಮೂರು ಶೇಕಡಾವಾರು ಹೆಚ್ಚಳವನ್ನು ಸೂಚಿಸುತ್ತದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗವು 6.2% ರಿಂದ 10.82%ಕ್ಕೆ ಏರಿಕೆಯಾಗಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, 2022-2023ರ ನಿರುದ್ಯೋಗ ದರವು 3.2% ರಷ್ಟಿದೆ. ಆದರೆ ಆರ್ಥಿಕ ತಜ್ಞರು ಉತ್ತಮ ಮೌಲ್ಯಮಾಪನಕ್ಕಾಗಿ CMIE ಡೇಟಾವನ್ನು ಅವಲಂಬಿಸಿದ್ದಾರೆ. ಏಕೆಂದರೆ ಅದರ ಅಂಕಿಅಂಶಗಳು ಮಾಸಿಕ ಸಮೀಕ್ಷೆಗಳನ್ನು ಆಧರಿಸಿರುತ್ತವೆ. ಇದು ಸರ್ಕಾರಿ ದತ್ತಾಂಶಕ್ಕೆ ವಿರುದ್ಧವಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.

ಈ ವರ್ಷ ಭಾರತದ ಆರ್ಥಿಕತೆಯು 6% ದಿಂದ 6.5%ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಜನಸಂಖ್ಯೆಯು ಹೆಚ್ಚುತ್ತಿದೆ ಮತ್ತು ಏಪ್ರಿಲ್‌ನಲ್ಲಿ ಭಾರತವು ಚೀನಾವನ್ನು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಸ್ಥಾನದಿಂದ ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಈ ಬೆಳವಣಿಗೆಯ ಹೊರತಾಗಿಯೂ, ಕಳೆದ ಐದು ವರ್ಷಗಳಿಂದ ಭಾರತದ ಉದ್ಯೋಗಿಗಳ ಸಂಖ್ಯೆಯು  ನಿಶ್ಚಲವಾಗಿದೆ ಎಂದು CMIE ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಸುಮಾರು 10 ಮಿಲಿಯನ್ ಭಾರತೀಯರು ಕೆಲಸ ಹುಡುಕುವ ಭರವಸೆಯಲ್ಲಿ ಉದ್ಯೋಗದ ಮಾರುಕಟ್ಟೆಗೆ  ಪ್ರವೇಶಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ CMIE ಡೇಟಾವನ್ನು ಉಲ್ಲೇಖಿಸಿದೆ.

ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟಿ ನಡೆಸಿದ ಸಮೀಕ್ಷೆಯ ಪ್ರಕಾರ, ಈ ವರ್ಷದ ಆರಂಭದಲ್ಲಿ 15 ರಿಂದ 34 ವರ್ಷ ವಯಸ್ಸಿನ 36% ಭಾರತೀಯರು ನಿರುದ್ಯೋಗ ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದು ಭಾವಿಸಿದ್ದಾರೆ. 2016ರಲ್ಲಿ ನಡೆಸಿದ ಸಮೀಕ್ಷೆಗೆ ಹೋಲಿಸಿದರೆ, ನಿರುದ್ಯೋಗವನ್ನು ಅತಿದೊಡ್ಡ ಸಮಸ್ಯೆ ಎಂದು ಹೇಳುವ ಭಾರತೀಯರ ಪ್ರಮಾಣವು 18 ಶೇಕಡಾ ಹೆಚ್ಚಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 40% ದಷ್ಟು ವಿದ್ಯಾವಂತರು ಅಂದರೆ ಪದವೀಧರರು ಮತ್ತು ಅದಕ್ಕಿಂತ ಮೇಲ್ಪಟ್ಟವರು  ನಿರುದ್ಯೋಗವನ್ನು ದೊಡ್ಡ ಸವಾಲು ಎಂದು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!