ಪ್ರಸ್ತುತ್ತ ದಿನಗಳಲ್ಲಿ ಬರಗಾಲ ಉಂಟಾಗಿರುವ ಕಾರಣದಿಂದ ಬರಗಾಲಕ್ಕೆ ಸಂಬಂಧಿಸಿದ ಕೆರೆ-ಕಟ್ಟೆ, ಕಂದಕ ಬದು ಇನ್ನಿತರ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ಕ್ರಮವಹಿಸಬೇಕೆಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮತ್ತು ವಿವಿಧ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ಶೌಚಾಲಯ, ಅಂಗನವಾಡಿ , ಎನ್ ಆರ್ ಎಲ್ ಎಂ ಶೆಡ್ , ಗೋಮಾಳ ಅಭಿವೃದ್ಧಿ ಹಾಗೂ ಬರಗಾಲಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚಿನ ಕ್ರಮವಹಿಸಬೇಕೆಂದು ತಿಳಿಸಿದರು.
ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಅನುಷ್ಠಾನ ಮಾಡಬೇಕಿರುವ ಕಾಮಗಾರಿಗಳ ಹೆಚ್ಚುವರಿ ಕ್ರಿಯಾಯೋಜನೆಯನ್ನು ಅನುಮೋದನೆ ನೀಡಲಾಗಿದ್ದು ಕಾಮಗಾರಿ ಆರಂಭ ಮಾಡುವಂತೆ ಕ್ರಮವಹಿಸಬೇಕು ಹಾಗೂ ವಸತಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳನ್ನು ಪೂರ್ಣಗೊಳಿಸುವಂತೆ ಹೇಳಿದರು. ಇನ್ನೀತರ ಯೋಜನೆಯ ಕುರಿತು ಪ್ರಗತಿ ಕುರಿತು ಚರ್ಚಿಸಿ ನರೇಗಾ ಯೋಜನೆಯ ಕೂಲಿಕಾರರಿಗೆ ಸಕಾಲದಲ್ಲಿ ಕೂಲಿ ಪಾವತಿಸುಲು ಕ್ರಮವಹಿಸಬೇಕೆಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಮಾನ್ಯ ಉಪ ಕಾರ್ಯದರ್ಶಿ (ಅಭಿವೃದ್ಧಿ) ಆನಂದ್ ಕುಮಾರ್, ಯೋಜನಾ ನಿರ್ದೇಶಕ ಸಂಜೀವಪ್ಪ, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಮೋಹನ್, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮತ್ತು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ). ಗ್ರಾಮ ಪಂಚಾಯತಿ ಪಿಡಿಓ, ನರೇಗಾ ಯೋಜನೆಯ ಜಿಲ್ಲಾ ಮತ್ತು ತಾಲ್ಲೂಕು ಸಿಬ್ಬಂದಿರವರು ಹಾಜರಿದ್ದರು.




