-
ನಿಖಿಲ್ ಗೆ ನೀಟ್ ಪರೀಕ್ಷೆಯಲ್ಲಿ 585 ಅಂಕ. ಸರ್ಕಾರಿ ಮೆಡಿಕಲ್ ಸೀಟು
- ಎಸ್ ಎಸ್ ಎಲ್ ಸಿ ಯಲ್ಲಿ 600 ಅಂಕಗಳಿಸಿದ್ದ ನಿಖಿಲ್
- ಎಸ್ ಟಿ ಜಿ ಸಂಸ್ಥೆಯಲ್ಲಿ ಪಿಯುಸಿಗೆ ಉಚಿತ ಸೀಟು
- ಪಿಯುಸಿಯಲ್ಲಿ 600 ಕ್ಕೆ 600 ಅಂಕ
ಮಂಡ್ಯದ ಕೆ.ಆರ್. ಪೇಟೆ ತಾಲ್ಲೂಕಿನ ಕತ್ತರಘಟ್ಟ ಬಾಲಕ ಕೆ. ಆರ್. ನಿಖಿಲ್, ನಿಂಗರಾಜಣ್ಣರವರ ದಿವಂಗತ ರವಿರವರ ಮುರಾರ್ಜಿ ಶಾಲೆಯೊಂದರಲ್ಲಿ ತಾತ್ಕಾಲಿಕವಾಗಿ ಅಡುಗೆ ಕೆಲಸ ನಿರ್ವಹಿಸುತ್ತಿರುವ ಲೀಲಾವತಿರವರ ಮಗ ನೀಟ್ ಪರೀಕ್ಷೆಯಲ್ಲಿ 585 ಅಂಕಗಳಿಸಿ 28155 ನೇ ರಾಂಕ್ ಪಡೆಯುವ ಮೂಲಕ ಸರ್ಕಾರಿ ಮೆಡಿಕಲ್ ಸೀಟು ಪಡೆಯಲು ಅರ್ಹನಾಗಿ ಅದ್ಭುತ ಸಾಧನೆ ಮಾಡಿದ್ದಾನೆ.
ಈಗ ಓದುತ್ತಿರುವ ಮಕ್ಕಳಿಗೆ ಇವನು ಸ್ಪೂರ್ತಿ ಆಗಬೇಕು. ತನ್ನ 2 ನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ಇಡೀ ಮನೆಯೇ ಹೀನಾಯ ಸ್ಥಿತಿ ತಲುಪಿದಾಗ, ಅಂಭಿಗರಹಳ್ಳಿಯ ತನ್ನ ದೊಡ್ಡಮ್ಮ ಕಲ್ಪನ-ದೊಡ್ಡಪ್ಪ, ಸೋಮಶೇಖರಗಳ ಆಶ್ರಯದಲ್ಲಿ ಬೆಳೆದು ನಂತರ ಅಂಬಿಗರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ತದನಂತರ ಓದಲೇಬೇಕೆಂಬ ಹುಚ್ಚು ಹತ್ತಿಸಿಕೊಂಡು, ಗವಿಮಠದ ಮೊರಾರ್ಜಿ ಶಾಲೆಯಲ್ಲಿ 6 ರಿಂದ 10 ನೇ ತರಗತಿವರೆಗೆ ಓದಿ ಎಸ್ ಎಸ್ ಎಲ್ ಸಿ ಯಲ್ಲಿ 600 ಅಂಕಗಳಿಸಿ ನಂತರ ಚಿನಕುರಳಿಯ ಎಸ್ ಟಿ ಜಿ ಸಂಸ್ಥೆಯಲ್ಲಿ ಪಿಯುಸಿಗೆ ಉಚಿತ ಸೀಟು ಗಿಟ್ಟಿಸಿ ಪಿಯುಸಿಯಲ್ಲಿ 600 ಕ್ಕೆ 600 ಅಂಕಗಳಿಸಿ ಅಚ್ಚರಿ ಮೂಡಿಸಿದ್ದ.
ಕಷ್ಟಪಟ್ಟು ಓದಿದರೆ ಖಂಡಿತವಾಗಿಯೂ ಮೆಡಿಕಲ್ ಸೀಟ್ ಪಡೆಯಬಹುದು. ಆದರೆ ಹೆಚ್ಚು ಹೆಚ್ಚು ಪ್ರಶ್ನೆ ಪತ್ರಿಕೆಗಳನ್ನು ರಿವೈಸ್ ಮಾಡುತ್ತಿರಬೇಕು. ನಾನು ಅತಿ ಹೆಚ್ಚು ಪ್ರಶ್ನೆಪತ್ರಿಕೆಗಳನ್ನು ರಿವೈಸ್ ಮಾಡಿದ್ದೇನೆ, ಬಹಳ ಕಷ್ಟವಾಯಿತು. ಓದುವಾಗ ಎಲ್ಲೂ ತಬ್ಬಿಬ್ಬಾಗದೆ, ನಮ್ಮ ಗುರಿಯನ್ನು ಬದಲಿಸದೆ ಓದಬೇಕು. ಆಗ ಖಂಡಿತವಾಗಿಯೂ ಮೆಡಿಕಲ್ ಸೀಟು ಪಡೆಯಬಹುದು ಎಂದು ನಿಖಿಲ್ ತಿಳಿಸಿದರು.
ನಾನು 1-5 ತರಗತಿಯವರೆಗೂ ಓದಿದ್ದೇನಾದ್ದರಿಂದ ನನಗೆ ಇಂಗ್ಲೀಷ್ ಬಹಳ ಕಷ್ಟವಾಗುತ್ತಿತ್ತು. ನನಗೆ ಮೊದಲ ಪ್ರಯತ್ನದಲ್ಲಿ ಮೆಡಿಕಲ್ ಸೀಟ್ ಪಡೆಯಲು ಸಾಧ್ಯವಾಗಲಿಲ್ಲ. ನಂತರ ಬೆಂಗಳೂರಿನ ಮೆಡಿ ಆಗ್ರಹಾರ ಯಲಹಂಕದ ಬಳಿ ಇರುವ ಎಕ್ಸಲ್ ಆಕಾಡೆಮಿಯಲ್ಲಿ ತರಬೇತಿ ಪಡೆದೆ. ಪ್ರತಿದಿನ ನಮಗೆ ಟೆಸ್ಟ್ ಗಳನ್ನು ಕೊಟ್ಟು, ಕ್ಲಿಷ್ಟಕರವಾದ ಪ್ರಶ್ನೆಗಳನ್ನು ಕೊಟ್ಟು ಉತ್ತರ ಬರೆಯಲು ಹೇಳುತ್ತಿದ್ದರು. ಆ ರೀತಿ ಮಾಡಿದ್ದು, ನನಗೆ ಮೆಡಿಕಲ್ ಸೀಟ್ ಪಡೆಯಲು ಸಾಧ್ಯವಾಯಿತು ಎಂದು ನುಡಿ ಕರ್ನಾಟಕ.ಕಾಂ ನೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಸಾಮಾನ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಹೆಚ್ಚು ಕಷ್ಟವಿರುತ್ತದೆ. ಆದರ ಮೇಲೆ ಹೆಚ್ಚು ಗಮನ ಹರಿಸಲೇಬೇಕು ಮತ್ತು ಜೀವಶಾಸ್ತ್ರ ಸುಲಭವೆನಿಸಿದರೂ ಆಗಾಗ್ಗೆ ಮರೆತು ಹೋಗುತ್ತದೆ. ಓದಿನ ಆರಂಭದ ದಿನಗಳಿಂದಲೆ ಈ ಬಗೆಗೆ ಹೆಚ್ಚು ಗಮನ ಕೊಟ್ಟರೆ, ಪರೀಕ್ಷೆಯ ಹತ್ತಿರದ ದಿನಗಳಲ್ಲಿ ಬಹಳ ಸುಲಭವಾಗಿ ನೀಟ್ ಪರೀಕ್ಷೆಯನ್ನು ಎದುರಿಸಬಹುದು ಎಂದರು.
ಬಹಳ ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ನಂತರ ಹಾಸ್ಟೆಲ್ ಒಂದರಲ್ಲಿ ತಾತ್ಕಾಲಿಕವಾಗಿ ಅಡುಗೆ ಕೆಲಸ ಮಾಡಿಕೊಂಡು ಕುಟುಂಬದ ಬಂಡಿ ನೆಡೆಸಿಕೊಂಡು ಇವನ ಓದಿಗೆ ಪ್ರೇರಣೆ ನೀಡಿದ ಇವನ ತಾಯಿರವರಾದ ಲೀಲಾವತಿರವರನ್ನು ಮೆಚ್ಚಲೇಬೇಕು! ಈಗ ಉಚಿತವಾಗಿ ಮೆಡಿಕಲ್ ಸೀಟು ಪಡೆಯಲು ಅರ್ಹನಾಗಿ ನಮಗೆಲ್ಲ ಹೆಮ್ಮೆ ಮೂಡಿಸಿದ್ದಾನೆ.
ಎನಿವೇ ಅಭಿನಂದನೆಗಳು ನಿಖಿಲ್!
ನಾವೆಲ್ಲರೂ ಸೇರಿ ಇವನ ಮೆಡಿಕಲ್ ಅದ್ಯಯನಕ್ಕೆ ತಗಲುವ ವೆಚ್ಚವನ್ನು ಭರಿಸಿ ಇವನನ್ನು ಅತ್ಯುತ್ತಮ ಡಾಕ್ಟರ್ ಆಗಲು ಪ್ರೋತ್ಸಾಹಿಸೋಣ ಬನ್ನಿ!
ಹಣ ಪ್ರೋತ್ಸಾಹ ಮಾಡುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಹಾಯ ಮಾಡಿ.
Mr Nikhil K R
AC number:75860100014530
BANK OF BARODA
IFSC CODE:BARB0VJHOSA
Google pay No. 9019591789

Mr Nikhil K R
S/o RAVI K N
KATHHARAGATTA HARIHARAPURA POST
HOSAHOLALU
MANDYA.




