Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಿಂದೂ- ಮುಸ್ಲಿಂ ಸೋದರತ್ವ ಮತ್ತಷ್ಟು ವೃದ್ದಿಯಾಗಲಿ- ಪುರುಷೋತ್ತಮಾನಂದನಾಥಶ್ರೀ

ಪ್ರಸ್ತುತ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸೋದರತ್ವದ ಭ್ರಾತೃತ್ವ ಮತ್ತಷ್ಟು ವೃದ್ದಿಯಾಗಲಿ ಎಂದು ಆದಿಚುಂಚನಗರಿ ಮಹಾಸಂಸ್ಥಾನ ಮಠದ ಟ್ರಸ್ಟ್ ಕಾರ್ಯದರ್ಶಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಹೇಳಿದರು.

ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ಬೆನಕ ಸಮುದಾಯಭವನದಲ್ಲಿ ಜಿಲ್ಲಾ ಹಿಂದೂ ಮುಸ್ಲಿಂ ಭಾವೈಕ್ಯತಾ ಸಮಿತಿ ಆಯೋಜಿಸಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಪ್ರಯುಕ್ತ ಟಿಪ್ಪು ನೆನೆಪು-ಟಿಪ್ಪು ಅಮರ, ಸ್ವಯಂ ಪ್ರೇರಿತ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವರು ಮಾತನಾಡಿದರು.

ಕಷ್ಟದಲ್ಲಿರುವಂತ ರೋಗಿಗಳಿಗೆ ರಕ್ತದ ಅವಶ್ಯಕತೆ ನೀಗಿಸುವಲ್ಲಿ ಯುವಜನತೆ ಮುಂದಾಗಬೇಕಿದೆ. ಭಾವೈಕ್ಯತೆ ಎಲ್ಲಡೆ ಪಸರಿಸಲಿ, ಜಗತ್ತಿನಲ್ಲಿ ಹಿಂದೂ ಮತ್ತು ಮುಸ್ಲಿಂ ಸೋದರತ್ವದ ಭ್ರಾತೃತ್ವ ಮತ್ತಷ್ಟು ವೃದ್ದಿಯಾಗಲಿ ಎಂದು ಆಶೀರ್ವಚನ ನೀಡಿದರು.

ನ

ಸೇವಾ ಹೀ ಪರಮೋಧರ್ಮ ಎಂಬಂತೆ ರಕ್ತದಾನದ ಮೂಲಕ ಸೇವಾ ಕಾರ್ಯ ಮಾಡುತ್ತಿದ್ದಾರೆ, ಶ್ರೇಷ್ಠವಾದ ಸುಕಾರ್ಯವಾಗಿದೆ, ನಮ್ಮ ಉಪನಿಷತ್ತಿನಲ್ಲಿ ಸೇವೆಯಿಂದ ಧರ್ಮ ಉಳಿಸುತ್ತದೆ ಎನ್ನುವುದಾಗಿದೆ, ಆದ್ದರಿಂದ ಹಿಂದು-ಮುಸ್ಲೀಂ ಭಾವೈಕ್ಯತೆ ಸಾರುವ ವಿವಿಧಸಂಘಟನೆಗಳು ಒಗ್ಗೂಡಿ ಟಿಪ್ಪು ಸ್ಮರಣೆ ಮತ್ತು ರಕ್ತದಾನ ಮಾಡುತ್ತಿರುದ್ದಾರೆ ಎಂದು ನುಡಿದರು.

ಮೈಸೂರು ಹುಲಿ ಎಂದು ಅಂದಿನ ಕಾಲದಲ್ಲಿ ಕರೆಸಿಕೊಂಡ ಟಿಪ್ಪುವಿನ ಸ್ಮರರ್ಣಾ ಸೇವಾ ಕಾರ್ಯ ಸಾಗುತ್ತಿವೆ, ಇದು ತುಂಬ ಆಗಬೇಕಾದ ಕೆಲಸ, ಇವರೆಲ್ಲರಿಗೂ ಭಗವಂತ ಆಯುಸ್ಸು, ಆರೋಗ್ಯ ಕೊಡಲಿ, ರಕ್ತದಾನ ಮಾಡುತ್ತಿರುವ ಶಿಬಿರಾರ್ಥಿಗಗಳು ಬಹಾಳ ಶ್ರೇಷ್ಠವಾದ ಕಾರ್ಯ ಮಾಡುತ್ತಿದ್ದಾರೆ, ಅವರಿಗೆ ಒಳಿತಾಗಲಿ, ಜಿಲ್ಲೆಯ ಜನತೆ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡಲಿ ಎಂದು ಆಶೀರ್ವಚನ ನೀಡಿದರು.

ಮುಡಾ ಮಾಜಿ ಅಧ್ಯಕ್ಷ ಮುನಾವರ್‌ ಖಾನ್ ಮಾತನಾಡಿ, ಇವತ್ತು ಟಿಪ್ಪು ಜಯಂತಿ ದಿನವಾಗಿದೆ, ಅವರು ದೇಶಕೋಸ್ಕರ ಮಹಾನ್ ತ್ಯಾಗ ಮಾಡಿದ್ದಾರೆ, ಅವರ ಸ್ಮರಣಾರ್ಥ ಅಗತ್ಯಯುಳ್ಳ ಜನತೆಗೆ ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಸಾಗುತ್ತಿದೆ, ಸೇವಾಕಾರ್ಯ ಹೀಗೆ ಮುಂದುವರಿಯುತ್ತದೆ ಎಂದರು.

ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ನಡೆಯಿತು, ಭಾವೈಕ್ಯತೆ ವೃದ್ದಿಗಾಗಿ ಸರ್ವಧರ್ಮಗಳ ಕಾರ್ಯಕ್ರಮ ನಡೆಯುತ್ತಿದೆ, ಹಿಂದೂ ಮುಸ್ಲಿಂ ನಡುವೆ ಅಣ್ಣ ತಮ್ಮಂದಿರ ಭಾವನೆ ರೀತಿ ಸಾಗುತ್ತಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಮಾನವೀಯತೆ ಮರೆದು ರಕ್ತದಾನ ಮಾಡಿದ ಯುವಕರಿಂದ ಜಿಲ್ಲಾಸ್ಪತ್ರೆಯ ರಕ್ತನಿಧಿಕೇಂದ್ರದ ಸಿಬ್ಬಂದಿಗಳು ರಕ್ತವನ್ನು ಸಂಗ್ರಹಿಸಿಕೊಂಡರು.

ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರು ಮಹಮದ್ ಸಾಜೀತ್, ಕಾಂಗ್ರೆಸ್ ಮುಖಂಡ ಡಾ.ರವೀಂದ್ರ, ಯುವ ಮುಖಂಡ ಜಬೀಉಲ್ಲಾಖಾನ್, ನಗರಸಭಾ ಸದಸ್ಯರಾದ ಶ್ರೀಧರ್, ಜಾಕೀರ್‌ಪಾಷಾ, ನಹೀಂ, ನೂರ್ ಅಹಮದ್, ನಗರಸಭೆ ಮಾಜಿ ಸದಸ್ಯ ಅನಿಲ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!