Friday, September 20, 2024

ಪ್ರಾಯೋಗಿಕ ಆವೃತ್ತಿ

”ಕರೆಂಟ್ ಕಳ್ಳ” ಆರೋಪಕ್ಕೆ ”ಕೆರೆ ಕಳ್ಳ” ಕೌಂಟರ್ ಕೊಟ್ಟ ಜೆಡಿಎಸ್ !

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ನಡುವಿನ ಟಾಕ್ ಫೈಟ್ ಮುಂದುವರೆದಿದ್ದು, ಕರೆಂಟ್ ಕಳ್ಳ ಎಂದು ಕುಮಾರಸ್ವಾಮಿ ಅವರನ್ನು ಹೀಗೆಳೆದ ಕಾಂಗ್ರೆಸ್ ಪಕ್ಷಕ್ಕೆ, ಜೆಡಿಎಸ್ ಪಕ್ಷವು ತಿರುಗೇಟು ನೀಡಿದ್ದು, ಸಚಿವ ಚಲುವರಾಯಸ್ವಾಮಿಗೆ ಕೆರೆ ಕಳ್ಳ ಎಂದು ಪ್ರತ್ಯಾರೋಪ ಮಾಡಿದೆ.

ಮೊನ್ನೆಯಷ್ಟೇ ಹೆಚ್ಡಿಕೆ ವಿರುದ್ಧ ಅಕ್ರಮ ಆಸ್ತಿ-ಪಾಸ್ತಿ ಬಗ್ಗೆ ಸಚಿವ ಚಲುವರಾಯಸ್ವಾಮಿ ಆರೋಪಿಸಿದ್ದರು. ಇದೀಗ ಮಾಜಿ ಸಿಎಂ ಹೆಚ್’ಡಿಕೆ, ಮಾಜಿ ಶಾಸಕ ಸುರೇಶ್‌ ಗೌಡ ಅವರು ಚಲುವರಾಯಸ್ವಾಮಿ ವಿರುದ್ಧ ಕೆರೆ ಜಾಗ ನುಂಗಿದ ಗಂಭೀರ ಆರೋಪ ಮಾಡಿದ್ದಾರೆ.

ನೇರವಾಗಿ ಹಾಗೂ ಸೋಷಿಯಲ್ ಮೀಡಿಯಾ ಮೂಲಕವೂ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್‌ ಕಾರ್ಯಕರ್ತರು  ಕೆರೆ ಕಳ್ಳ ಎಂದು ಆರೋಪ ಮಾಡಿದ್ದಾರೆ. ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೊಬಳಿಯ ಮಾಕಳಿ ಸರ್ವೇ ನಂಬರ್ 13 ರಲ್ಲಿ 3 ಎಕರೆ 12 ಗುಂಟೆ ಜಾಗ ಅತಿಕ್ರಮಣ ಮಾಡಿ, ಗೋಡೌನ್ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಗೋಡೌನ್ ಅನ್ನು ಖಾಸಗಿ ಕಂಪನಿಯೊಂದಕ್ಕೆ ಬಾಡಿಗೆಗೆ ನೀಡಿದ್ದಾರೆ ಎಂಬ ಆರೋಪವು ಕೇಳಿಬಂದಿದೆ.

ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಈ ಕುರಿತು ಮಾತನಾಡಿ, ಕೆರೆ ಕಬಳಿಸಿರುವ ಸಚಿವ ಚಲುವರಾಯಸ್ವಾಮಿ ವಿರುದ್ಧ ತನಿಖೆ ಮಾಡಲಿ. ಆಗ ಆತನ ಅಸಲಿ ತನ ಗೊತ್ತಾಗಲಿದೆ. ಕೆರೆಯನ್ನು ಯಾರಿಗಾದರೂ ಮಂಜೂರು ಮಾಡಿಕೊಡಲು ಕಾನೂನಿನಲ್ಲಿ ಅವಕಾಶ ಇದೆಯಾ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಹೇಳಿದ್ದಾರೆ  ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿ ಮಾಕಳಿ ಗ್ರಾಮದ ಸರ್ವೆ ನಂಬರ್ 13ರ 3 ಎಕರೆ 31 ಕುಂಟೆ 3 ಸಿಂಗಲ್ ನಂಬರ್ ಸಂಪೂರ್ಣ ಕೆರೆಯನ್ನು ಅತಿಕ್ರಮಣ ಮಾಡಲಾಗಿದೆ. ಇವತ್ತು ಸಹ ಸ್ಯಾಟಲೈಟ್ ನಲ್ಲಿ ತೆಗೆದು ನೋಡಿದ್ರೆ ಕೆರೆ ಅಂತ ಬರ್ತಿದೆ. ಕೆರೆ ಹೇಗೆ ಜಿಲ್ಲಾ ಮಂತ್ರಿಗಳಿಗೆ ವರ್ಗಾವಣೆಯಾಗಿದೆ? ಸ್ವಲ್ಪ ತನಿಖೆ ಮಾಡಲಿ. ಪ್ರಪಂಚದಲ್ಲಿ ಯಾವುದೇ ಕಾನೂನಲ್ಲೂ ಕೆರೆಯನ್ನು ಯಾರಿಗೂ ಕೊಡುವ ಅವಕಾಶ ಇಲ್ಲ. ಆದರೆ ಇವರು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

3 ಎಕರೆ 31 ಕುಂಟೆ ಸಿಂಗಲ್ ನಂಬರ್. 1970 ನೇ ಇಸವಿಯಿಂದ ಸಹ ಫೋರ್ಜರಿ ಡಾಕ್ಯುಮೆಂಟ್ ಕ್ರಿಯೇಟ್ ಮಾಡಿ ಅಣ್ಣತಮ್ಮಂದಿರ ಹೆಸರಿಗೆ ಮಾಡ್ಕೊಂಡಿದ್ದಾರೆ. ಇವರನ್ನ ಯಾವ ಕಳ್ಳರು ಅಂತ ಕರಿಬೇಕು? ಕೋಟ್ಯಾಂತರ ರೂಪಾಯಿ ಯ ಸರ್ಕಾರಿ ಆಸ್ತಿ ಅದಕ್ಕಿಂತ ಹೆಚ್ಚಾಗಿ ಅದು ಕೆರೆ ಜಾಗ. ಕೆರೆಯನ್ನ ಇನ್ನೊಬ್ಬರಿಗೆ ವರ್ಗಾವಣೆ ಮಾಡಲು ಯಾವುದೇ ಯಾರಿಗೂ ಅಧಿಕಾರ ಇಲ್ಲ. ಇವರು ಹೇಗೆ ಮಾಡ್ಕೊಟ್ಟಿದ್ದಾರೆ ಸ್ವಲ್ಪ ತೋರಿಸಲಿ ಎಂದು ಸವಾಲು ಹಾಕಿದರು.

ಯಾವುದೇ ಎರಡ್ಮೂರು ಸಾವಿರ ರೂಪಾಯಿ ಕರೆಂಟ್ ಎಳೆದುಕೊಂಡಿದ್ದಕ್ಕೆ ಕರೆಂಟ್ ಕಳ್ಳ ಅಂತಾರೆ. ಇವರು ನೂರಾರು ಕೋಟಿಯ ಜಮೀನನ್ನ ಒಡೆದುಕೊಂಡಿದ್ದಾರೆ ಏನು ಅನ್ನಬೇಕು ಇವರನ್ನು ? ತನಿಖೆ ಮಾಡಲಿ. ಪಾಪಾ ಕೃಷ್ಣೇಬೈರೇಗೌಡ್ರು ನಾನು ಬಹಳ ಶಿಸ್ತಿನ ಸಿಪಾಯಿ ಒಳ್ಳೆಯ ಮಂತ್ರಿ ಅನಿಸಿಕೊಳ್ಳೋ ಮನೋಭಾವ ಇದ್ರೆ  ಅವರ ಜಮೀನನ್ನ ವಾಪಸ್ ತಕೊಳ್ಳಬೇಕು ತಕ್ಷಣವೇ. ಆ ಜಮೀನಿನ ಮೇಲೆ ಎಲ್ಲೆಲ್ಲಿ ಲೋನ್ ತಕೊಂಡಿದ್ದಾರೆ ಅದಕ್ಕೆಲ್ಲಾ ಟ್ಯಾಕ್ಸ್ ಹಾಕಬೇಕು ಅಲ್ವಾ? ಎಂದು ಕಿಡಿಕಾರಿದರು.

ಗಾಜಿನ ಮನೆಯಲ್ಲಿ ಕುಳಿತು ಸೀಟ್ ಮನೆಗೆ ಕಲ್ಲು ಎಸೆಯುವುದು ಬ್ಯಾಡಾ. ಸೀಟ್ ಮನೆ ಸ್ವಲ್ಪ ತಡೆದುಕೊಳ್ಳುತ್ತೆ. ಗಾಜಿನ ಮನೆಯಲ್ಲಿ ಕುಳಿತಿರೋದು ಅವರು. ನನ್ನ ಮನೆಯನ್ನ ತನಿಖೆ ಮಾಡಿಸ್ತಿದ್ದಾರೆ ಮಾಡಿಸಲಿ. ಬರಲಿ ತನಿಖೆಗೆ ನಮ್ಮ ಅತ್ರ ಇರೋದನ್ನ ಕೊಡ್ತೇವೆ. ಇಂತದೆ ಅಧಿಕಾರಿ ತನಿಖೆ ಮಾಡಬೇಕು ಅಂತ ತನಿಖೆ ಮಾಡ್ತಿದ್ದಾರೆ. ಅವರ ಚೇಲಾ ಬಿಟ್ಟು ಕೋರ್ಟ್ ಗೆ ಹಾಕಿಸಿದ್ರು ಕೋರ್ಟ್ ಛೀಮಾರಿ ಹಾಕ್ತು. ಈಗ ಹೊಸ ತನಿಖೆ ಮಾಡಿಸ್ತಿದ್ದಾರೆ. ನಾನು ಸತ್ಯವಾಗಿದ್ದೇನೆ ಧೈರ್ಯವಾಗಿ ಹೇಳ್ತಿದ್ದಿನಿ ಎಂದು ಹೇಳಿದರು.

ಸರ್ವೆ ನಂ 13 ಮಾಕಳಿ ಗ್ರಾಮದ ಕೆರೆ ಬಗ್ಗೆ ತನಿಖೆಯಾಗಲಿ. ಕೆರೆಯನ್ನ ಯಾವ ಕಾನೂನಿನ ಮೇಲೆ ಪಡೆದುಕೊಂಡಿದ್ದಾರೆ. ಮಾನಮರ್ಯಾದೆ ಇದ್ರೆ ತಪ್ಪು ಮಾಡಿದ್ದಿನಿ ಅಂತ ಸರ್ಕಾರಕ್ಕೆ ಕೆರೆ ಬಿಟ್ಟು ಕೊಡಲಿ. ಕೆರೆಯನ್ನು ಕೆರೆ ತರ ರೀಸ್ಟೋರ್ ಮಾಡಿ ಉಳಿಸಿಕೊಳ್ಳಲಿ ಎಂದು ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!