Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 75 ದಿನಕ್ಕೆ ಕಾವೇರಿ ಹೋರಾಟ: ವಿವಿಧ ಗ್ರಾಮಸ್ಥರ ಬೆಂಬಲ

ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟ 75ನೇ ದಿನದ ತಲುಪಿತ್ತು, ಶುಕ್ರವಾರ ವಿವಿಧ ಸಂಘ-ಸಂಸ್ಥೆಗಳು, ಗ್ರಾಮಸ್ಥರು ಪಾಲ್ಗೊಂಡು ಹೋರಾಟ ಬೆಂಬಲಿಸಿದರು.

ಮಂಡ್ಯ ತಾಲ್ಲೂಕಿನ ಸೂನಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮಿಗೆ, ಸೂನಗಹಳ್ಳಿ, ಭೂತನ ಹೊಸೂರು, ಕಬ್ಬನಹಳ್ಳಿ ಗ್ರಾಮಸ್ಥರು ಹಾಗೂ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಎಸ್ ವೀರಯ್ಯ, ಮಂಡ್ಯ ನಗರದ ಶ್ರೀ ವಿದ್ಯಾ ಗಣಪತಿ ದೇವಾಲಯ ಬಳಿಯ ಕನ್ನಂಬಾಡಿ ಬಳಗ, ಸುಶೀಲಮ್ಮ ಉದ್ಯಾನವನ ಬಳಿಯ ಮಹಿಳಾ ಮತ್ತು ಪುರುಷರ ಬಳಗ, ಶಿವನಂಜಪ್ಪ ಪಾರ್ಕ್ ನ ದೇವರ ಕಾಡು ಬಳಗ ಕಾವೇರಿ ಹೋರಾಟವನ್ನು ಬೆಂಬಲಿಸಿತು.

ಮಂಡ್ಯನಗರದ ಸಂಜಯ ವೃತ್ತದಿಂದ ಮೆರವಣಿಗೆ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಕೇಂದ್ರ – ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್’ಎಸ್ ನಿಂದ 3000ಕ್ಕೂ ಹೆಚ್ಚು ಕ್ಯೂ ಸೆಕ್ ನೀರನ್ನು ಹೊರಬಿಡಲಾಗಿದೆ. ರಾಜ್ಯ ಸರ್ಕಾರ ನೀರು ಬಿಡುಗಡೆ ಮಾಡುವುದಿಲ್ಲ ಎಂದೇಳಿ ನೆರೆರಾಜ್ಯಕ್ಕೆ ನೀರು ಹರಿಸುತ್ತಿದೆ, ಕನ್ನಡ ನಾಡಿನ ಹಿತ ಕಾಪಾಡುವ ಬದಲು ತಮಿಳುನಾಡು ರೈತರ ಹಿತ ಕಾಪಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೂನಗಹಳ್ಳಿ ಗ್ರಾಪಂ ಅಧ್ಯಕ್ಷ ಶಿವು, ಡಿಸಿಸಿ ಬ್ಯಾಂಕ್ ನ ಕಾಳೇಗೌಡ, ಸುರೇಶ್, ಪ್ರಶಾಂತ್, ಕಿರಣ್ ಕುಮಾರ್, ರಾಜೇಗೌಡ, ಪುಟ್ಟೇಗೌಡ, ಕೃಷ್ಣ, ಚಂದ್ರು, ಸೋಮಣ್ಣನೇತೃತ್ವ ವಹಿಸಿದ್ದರು. ಸುಶೀಲಮ್ಮ ಪಾರ್ಕ್ ಮಹಿಳಾ ಮತ್ತು ಪ ಪುರುಷರ ಬಳಗದ ಲಕ್ಷ್ಮಿ, ಹೇಮಾ, ಗೌರಮ್ಮ, ಪ್ರಭ, ಗೀತಾ,  ಸುಧಾ, ದೇವರ ಕಾಡು ಬಳಗದ ಕೃಷ್ಣೇಗೌಡ, ಬೋರೇಗೌಡ, ಪಾಪೇಗೌಡ, ಲೋಕೇಶ್, ಸಿ ಕೆ ರಾಜಣ್ಣ, ಶಿವರಾಮು ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!