Friday, September 20, 2024

ಪ್ರಾಯೋಗಿಕ ಆವೃತ್ತಿ

ಜಾತಿ ವಿನಾಶಕ್ಕಾಗಿ ಅಂತರ್ಜಾತಿ ಮದುವೆಗಳು ಅಗತ್ಯ- ಶ್ರೀನಿಜಗುಣಾನಂದ ಸ್ವಾಮೀಜಿ

ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆ ನಾಶವಾಗಬೇಕಾದರೆ ಹೆಚ್ಚು ಹೆಚ್ಚು ಅಂತರ್ಜಾತಿಯ ಮದುವೆಗಳು ಹೆಚ್ಚು ಹೆಚ್ಚಾಗಿ ನಡೆಯಬೇಕೆಂದು ಬೆಳಗಾವಿಯ ಬೈಲೂರು ನಿಷ್ಕಲ ಮಂಟಪದ ಶ್ರೀನಿಜಗುಣಾನಂದ ಸ್ವಾಮೀಜಿ ತಿಳಿಸಿದರು.

ಮಂಡ್ಯನಗರದ ಡಾ.ಅಂಬೇಡ್ಕರ್ ಭವನದಲ್ಲಿ ಭಾನುವಾರ ಪುಷ್ಪಲತಾ ವೈ ಹಾಗೂ ರಜನಿಕಾಂತ್ ಅವರ ಒಲವಿನ ಮದುವೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ, ಇದರ ವಿರುದ್ದ ಹಿಂದಿನಿಂದ ಬುದ್ದ, ಬಸವ, ಅಂಬೇಡ್ಕರ್ ಸೇರಿದಂತೆ ಕುವೆಂಪು ಅವರ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಅವರ ವಿಚಾರಧಾರೆಗಳನ್ನ ಮೈಗೂಡಿಸಿಕೊಂಡು ಇಂದು ವಿವಾಹವಾಗುತ್ತಿರುವ ವಧು-ವರರು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು.

ಇಂತಹ ಬೆಳವಣಿಗೆಯಿಂದ ಸ್ವತಃ ದೇವರು ಸಂತೋಷಗೊಂಡಿದ್ದಾನೆ.. ಏಕೆಂದರೆ ಪ್ರಥಮವಾಗಿ ಲವ್ ಮಾಡಿದ ವ್ಯಕ್ತಿಯೆಂದರೆ ಅದು ಶಿವ ಎಂದು ಬಣ್ಣಿಸಿದ್ದಾರೆ. ಜಾತಿ ಕಾರಣದಿಂದಾಗಿ ತಮ್ಮ ಹೆತ್ತ ಮಕ್ಕಳನ್ನೆ ಬಲಿ ತೆಗೆದುಕೊಳ್ಳುತ್ತಿರುವ ಈಗಿನ ಸಂದರ್ಭದಲ್ಲಿ ರಜನಿಕಾಂತ್ ಅವರ ತಂದೆ-ತಾಯಿಗಳಾದ ಜಯಶೀಲ- ಶಿವಲಿಂಗಯ್ಯ ಹಾಗೂ ಪುಷ್ಪಲತಾ ಅವರ ತಾಯಿ ಗಂಗಾಬಿಕೆ ಅವರು ತಮ್ಮ ಮಕ್ಕಳಿಗೆ ಒಪ್ಪಿದವರನ್ನೇ ವಿವಾಹ ಮಾಡಿಕೊಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಬಣ್ಣಿಸಿದರು.

ನಿಜಗುಣಾನಂದ ಸ್ವಾಮೀಜಿ ಅವರು ಒಲವಿನ ವಿವಾಹವನ್ನು ವಧು-ವರರಿಗೆ ಪರಸ್ಪರ ರುದ್ರಾಕ್ಷಿಸಿ ಕಟ್ಟಿಸಿ, ನಂತರ ವರನಿಂದ ವಧುವಿನ ತಾಳಿ ಕಟ್ಟಿಸುವ ಮೂಲಕ ನೆರವೇರಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಮಾತನಾಡಿ, ಬುದ್ದ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಅವರ ಆಶಯದಂತೆ ವಿವಾಹವಾಗಲೂ ಅಪರವಾದ ವೈಚಾರಿಕ ಪ್ರಜ್ಞೆಬೇಕು ಅಂತಹ ದಾರಿಯಲ್ಲಿ ನಡೆಯತ್ತಿರುವ ಪುಷ್ಪಲತಾ-ರಜಿನಿಕಾಂತ್ ಅವರ ಜೀವನ ಸುಖಮಯವಾಗಿರಲಿ ಎಂದು ಶುಭಕೋರಿದರು.

ವೇದಿಕೆಯಲ್ಲಿ ಜಯಶೀಲ- ಶಿವಲಿಂಗಯ್ಯ, ಗಂಗಾಬಿಕೆ ಅವರು  ಉಪಸ್ಥಿತರಿದ್ದರು. ನೂತನ ವಧುವರರಿಗೆ ಹಿರಿಯ ಪತ್ರಕರ್ತರಾದ ಉಮಾಪತಿ, ಈದಿನ.ಕಾಂ ಮುಖ್ಯಸ್ಥ ಡಾ.ವಾಸು, ಕರ್ನಾಟಕ ಜನಶಕ್ತಿ ಮುಖಂಡರಾದ ಮಲ್ಲಿಗೆ ಸಿರಿಮನೆ, ಪೂರ್ಣಿಮಾ, ಮುತ್ತುರಾಜ್, ಪ್ರಗತಿಪರ ಮುಖಂಡರಾದ ಎಂ.ವಿ.ಕೃಷ್ಣ, ಸುನಂದ ಜಯರಾಂ, ಕೃಷ್ಣಪ್ರಕಾಶ್ , ವಕೀಲರಾದ ಬಿ.ಟಿ.ವಿಶ್ವನಾಥ್, ಅರ್.ಜಗನ್ನಾಥ್, ನುಡಿಕರ್ನಾಟಕ.ಕಾಂ ನ ಎನ್.ನಾಗೇಶ್, ಸಂತೋಷ್ ಜಿ., ಸುಬ್ರಮಣ್ಯ, ಮಂಗಲ ಲಂಕೇಶ್, ಜಗದೀಶ್ ಸೇರಿದಂತೆ ಹಲವರು ಶುಭ ಹಾರೈಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!