Friday, September 20, 2024

ಪ್ರಾಯೋಗಿಕ ಆವೃತ್ತಿ

ಆಸ್ಟ್ರೇಲಿಯಾ ಪ್ರಧಾನಿ ನಿವಾಸದ ಮೇಲೆ ಇಡಿ ದಾಳಿ ನಡೆಸಲಿದೆ: ಕೇಂದ್ರ ಸರ್ಕಾರಕ್ಕೆ ಮಹುವಾ ಟಾಂಗ್

ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತ ನಂತರ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಾರಿ ನಿರ್ದೇಶನಾಲಯ (ಇಡಿ) ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ನಿವಾಸದ ಮೇಲೆ ದಾಳಿ ನಡೆಸಲಿದೆ ಎಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಬ್ರೇಕಿಂಗ್ ನ್ಯೂಸ್ ‘ಆಸ್ಟ್ರೇಲಿಯಾದ ಪ್ರಧಾನಿ ನಿವಾಸದ ಮೇಲೆ ಇಡಿ ದಾಳಿ’ ಎಂದು ಮಹುವಾ ಮೊಯಿತ್ರಾ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“>

ಬಿಜೆಪಿಯು ತನ್ನ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಇ.ಡಿ.ಯಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿತ್ತು. ಅದರಂತೆ ಭಾರತ ವಿಶ್ವಕಪ್‌ನಲ್ಲಿ ಸೋತಿದೆ ಎಂದು ಅಸ್ಟ್ರೇಲಿಯಾ ಮೇಲೆ ಬಿಜೆಪಿ ಇಡಿ ದಾಳಿ ಮಾಡಿಸುತ್ತದೆ ಎಂಬರ್ಥದಲ್ಲಿ ಟೀಕಿಸಿದ್ದಾರೆ. ಇದಲ್ಲದೆ ಅಹಮದಾಬಾದ್ ಸ್ಟೇಡಿಯಂ ಅನ್ನು ಮರು ನಾಮಕರಣ ಮಾಡಲಾಗಿದೆ  ‘ಜವಾಹರ್ ಲಾಲ್ ನೆಹರು ಕ್ರಿಕೆಟ್ ಸ್ಟೇಡಿಯಂ’ನಲ್ಲಿ ಭಾರತ ವಿಶ್ವಕಪ್ ಫೈನಲ್‌ನಲ್ಲಿ ಸೋತಿದೆ ಎಂದು ಮೊಯಿತ್ರಾ ತಮ್ಮ ಪೋಸ್ಟ್‌ನಲ್ಲಿ ಪ್ರಧಾನಿಗೆ ಟಾಂಗ್‌ ಕೊಟ್ಟಿದ್ದಾರೆ.

ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡಾಂಗಣಕ್ಕೆ ಆಗಮಿಸುವ ಬಗ್ಗೆ ಮೊದಲೇ ಘೋಷಿಸಬಾರದಿತ್ತು. ಅವರು ಇಂತಹ ದೊಡ್ಡ ಸಮಾರಂಭಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಡ್ಯಾನಿಶ್ ಅಲಿ, ನಾವು ಕೂಡ ಗೆಲುವಿನ ಸಮೀಪದಲ್ಲಿದ್ದೆವು. ಆದರೆ ಅತಿಯಾದ ಮಾನಸಿಕ ಒತ್ತಡದಿಂದಾಗಿ ನಮ್ಮ ಆಟಗಾರರು ಗುರಿಯನ್ನು ಕಳೆದುಕೊಂಡರು. ಪ್ರಧಾನಿ ಮೋದಿ ಅವರು ಕ್ರೀಡಾಂಗಣಕ್ಕೆ ಆಗಮಿಸುವುದನ್ನು ಘೋಷಿಸಬಾರದು. ಇದು ದೇಶಕ್ಕೆ ಉತ್ತಮವಾಗಿದೆ. ಅಂತಹ ಸಂದರ್ಭಗಳಿಂದ ದೂರವಿರಿ ಮತ್ತು ಟಿವಿಯಲ್ಲಿ ವೀಕ್ಷಿಸಿ ಎಂದು ಹೇಳಿದ್ದಾರೆ.

ಫೈನಲ್ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧ 7ವಿಕೆಟ್‌ಗಳ ಸೋಲು ಕಂಡಿದ್ದು, 6ನೇ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟಕ್ಕೇರಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!