Friday, September 20, 2024

ಪ್ರಾಯೋಗಿಕ ಆವೃತ್ತಿ

ಸಂವಿಧಾನ ಭಾರತದ ಸರ್ವಶ್ರೇಷ್ಠ ಕಾನೂನು ಗ್ರಂಥ : ಸಿದ್ದಲಿಂಗೇಶ್

ಸಂವಿಧಾನ ಭಾರತ ದೇಶದ ಸರ್ವಶ್ರೇಷ್ಠ ಕಾನೂನು ಪಾಠ ಹೇಳುವ ಗ್ರಂಥವಾಗಿದೆ ಎಂದು ಮಂಡ್ಯ ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗೇಶ್ ಹೇಳಿದರು.
ಮಂಡ್ಯನಗರದ ವಿದ್ಯಾನಗರದಲ್ಲಿರುವ ಅಂಬೇಡ್ಕರ್ ವಿದ್ಧೋದ್ದೇಶ ಸಹಕಾರ ಸಂಘದ ಶಾಖಾ ತಾಲೂಕು ಕಚೇರಿಯಲ್ಲಿ ಎವಿಎಸ್‌ಎಸ್ ಆಯೋಜಿಸಿದ್ದ ನ.26ರ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮಗೆ ರಾಮಾಯಣ ಮಹಾಭಾರತ ಇತರೆ ಗ್ರಂಥಗಳು ನೀತಿಪಾಠ ಹೇಳಬಹುದು, ಆದರೆ ಸಂವಿಧಾನ ಒಂದು ಗ್ರಂಥವು ನಮ್ಮ ಜೀವನದಲ್ಲಿ ಅಥವಾ ದೇಶಕ್ಕೆ ಕೊಟ್ಟಂತಹ ಅತ್ಯಂತ ಶ್ರೇಷ್ಠ ಗ್ರಂಥ, ಕಾನೂನಿನ ಪಾಠ ಹೇಳಿ, ಕಾನೂನಿನ ಚೌಕಟ್ಟಿನಲ್ಲಿ ಎಲ್ಲರಿಗೂ ಸಮಾನತೆಯನ್ನು ಒದಗಿಸುವ ಗ್ರಂಥವಾಗಿದೆ ಎಂದು ನುಡಿದರು.
ಭಾರತ ದೇಶದ ಸಂವಿಧಾನ ರಚಿಸಲಿಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಕರಡು ಸಮಿತಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ಹಲವು ದೇಶಗಳ ಸಂವಿಧಾನಗಳನ್ನು ಓದಿದ್ದಾರೆ, ನಮಗೆ ಎಷ್ಟೋ ಸಲ ಆಶ್ಚರ್ಯವಾಗುತ್ತದೆ, ನಾವು ಓದುವಾಗ 6 ವಿಷಯಗಳ ಪಠ್ಯವನ್ನು ಓದಲಾಗುತ್ತಿರಲಿಲ್ಲ, ಓದಿ ಅದನ್ನ ಅರ್ಥಮಾಡಿಕೊಂಡು ಬರೆಯಲಿಕ್ಕೆ ಉದಾಶಿನತೆ ಮಾಡುತ್ತೇವೆ, ಆದರೇ ವಿದೇಶಗಳ ಸಂವಿಧಾನವನ್ನು ಓದಿ ಭಾರತದೇಶಕ್ಕೆ ಸಂವಿಧಾನ ನೀಡಿರುವುದು ದೊಡ್ಡ ಸಾಧನೆಯೇ ಸರಿ ಎಂದು ವಿವರಿಸಿದರು.
ಭಾರತದೇಶದಲ್ಲಿ ಸಾಕಷ್ಟು ವೈವಿಧ್ಯತೆ ಇದೆ, 20 ಕಿಲೋಮೀಟರ್‌ಗೆ ಒಂದೊಂದು ಭಾಷೆ, ಧರ್ಮ, ಆಚರಣೆಗಳು, ಸಂಸ್ಕಾರ, ಸಂಸ್ಕೃತಿಗಳು ಜಾತಿಗಳು ಬದಲಾಗುತ್ತವೆ, ಇಷ್ಟೇಲ್ಲಾ ಇದ್ದೂ ಕೂಡ ಎಲ್ಲರೂ ಒಪ್ಪುವಂತ ಸಂವಿಧಾನ ಸಮರ್ಪಣೆ ಯಾಗುತ್ತದೆ, ಜಾರಿಯಾಗುತ್ತದೆ, ಒಂದಷ್ಟು ಸಣ್ಣ ಪುಟ್ಟು ಆಕ್ಟ್ಗಳು ಸೇರುತ್ತವೆ, ಬದಲಾದ ಕಾಲಕ್ಕೆ ತಿದ್ದುಪಡಿಯಾಗುತ್ತವೆ, ಆದರೂ ಸರ್ವಜನರ ನೆಮ್ಮದಿಗೆ ಕಾರಣವಾಗಿದೆ ಸಂವಿಧಾನ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಎವಿಎಸ್‌ಎಸ್ ಶಾಖೆಯ ತಾಲೂಕು ಅಧ್ಯಕ್ಷ ಆಟೋ ಗುರುಶಂಕರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಂವಿಧಾನದಿಂದ ಎಲ್ಲಾ ಸಮುದಾಯಕ್ಕೂ ಮೀಸಲಾತಿ ಲಭ್ಯವಾಗಿದೆ, ಉದ್ಯೋಗ ಪಡೆದು, ಜೀವನ ನಡೆಸುತ್ತಿದ್ದಾರೆ, ಆದರೂ ಸಂವಿಧಾನ ಬೇಡ ಎನ್ನುವ ಅತಿಬುದ್ದಿಗೇಡಿ, ಮನುವಾದಿಗಳು ಇನ್ನೂ ಇದ್ದಾರೆ, ಇಂತವರಿಗೆ ಸಂವಿಧಾನವೇ ರಕ್ಷಣೆ ಕೊಡುತ್ತಿದೆ, ಅದರ ಅಧಿಕಾರದ ಬಲದಲ್ಲಿ ಇರುವುದನ್ನು ಮರೆತಿದ್ದಾರೆ ಎಂದು ಎಚ್ಚರಿಸಿದರು.
ಸಂವಿಧಾನ ಎಲ್ಲರನ್ನೂ ರಕ್ಷಿಸುತ್ತಿದೆ, ಸಮಾನ ಅವಕಾಶ ನೀಡುವ ಹಕ್ಕುಗಳು ಇವೆ, ಜಾರಿ ಮಾಡುವ, ಅಧಿಕಾರ ನಡೆಸುವವರು ದುರ್ಬಳಕೆ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ, ಇದು ನಿಲ್ಲಲಿ, ಎಲ್ಲರೂ ಸಂವಿಧಾನದ ಆಶಯಗಳಿಗೆ ಬದ್ದರಾಗಿರೋಣ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಎವಿಎಸ್‌ಎಸ್ ಹಿತೈಷಿಗಳಾದ ಆಟೋ ಜಯಶಂಕರ್,ಕುಮಾರ್, ಮುರುಗನ್, ರಾಜೇಶ್, ಸೋಮಶೇಖರ್, ದಿನೇಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!