Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ್ದು ಡಾ.ಬಿ.ಆರ್.ಅಂಬೇಡ್ಕರ್: ಕೃಷ್ಣಮೂರ್ತಿ

ಸಂವಿಧಾನದ ಮೂಲಕ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ನಾಂದಿಹಾಡಿ ಕೀರ್ತಿ ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತಿದೆ ಎಂದು ಮಹಾಚೇತನ ಟ್ರಸ್ಟ್ ಗೌರವಾಧ್ಯಕ್ಷ ಎಂ. ಕೃಷ್ಣಮೂರ್ತಿ ಹೇಳಿದರು.

ಮಂಡ್ಯ ತಾಲೂಕಿನ ಮುತ್ತೇಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾಚೇತನ ಟ್ರಸ್ಟ್ ಆಯೋಜಿಸಿದ್ದ 75ನೇ ವರ್ಷದ ಸಂವಿಧಾನ ಸಮರ್ಪಣಾ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಬಾಸಾಹೇಬ ಅಂಬೇಡ್ಕರ್ ಅವರು ಅನೇಕ ಸವಾಲುಗಳನ್ನು ಎದುರಿಸಿ ಸಾವಿರಾರು ವರ್ಷಗಳಿಂದ ರಾಜಪ್ರಭುತ್ವಕ್ಕೆ ಬಲಿಯಾದ ಭಾರತವನ್ನು ಸಂವಿಧಾನ ರಚಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕಟ್ಟಿಕೊಡುವ ಮೂಲಕ ಈ ದೇಶದ ಜನರನ್ನು ಸ್ವಾಭಿಮಾನಿಗನ್ನಾಗಿ, ಸ್ವತಂತ್ರರನ್ನಾಗಿ ಮಾಡಿದ ದಿನ ಇದಾಗಿದೆ ಎಂದು ನುಡಿದರು.

ಸಂವಿಧಾನದ ಪೀಠಿಕೆಯಲ್ಲಿ ನಾವು, ಭಾರತದ ಜನರು ಭಾರತವನ್ನು ಸಾರ್ವಭೌಮ ಸಮಾಜವಾದಿ ಸೆಕ್ಯುಲರ್ ಡೆಮಾಕ್ರಟಿಕ್ ರಿಪಬ್ಲಿಕ್ ಆಗಿ ರೂಪಿಸಲು ಮತ್ತು ಅದರ ಎಲ್ಲಾ ನಾಗರಿಕರಿಗೆ ಸುರಕ್ಷಿತವಾಗಿರಲು ನಿರ್ಧರಿಸಿದ್ದೇವೆ, ನ್ಯಾಯ , ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ಚಿಂತನೆ, ಅಭಿವ್ಯಕ್ತಿ, ನಂಬಿಕೆ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ‍್ಯ, ಸ್ಥಾನಮಾನ ಮತ್ತು ಅವಕಾಶದ ಸಮಾನತೆ ಮತ್ತು ಅವರೆಲ್ಲರ ನಡುವೆ ಪ್ರಚಾರ ಮಾಡಲು ಭ್ರಾತೃತ್ವವು ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ ಎಂದು ವಿವರಿಸಿದರು.

ನ. 26ನೇ 1949ರ ನಮ್ಮ ಸಂವಿಧಾನದ ಅಸೆಂಬ್ಲಿಯಲ್ಲಿ, ಈ ಮೂಲಕ ಈ ಸಂವಿಧಾನವನ್ನು ಅಳವಡಿಸಿ, ಜಾರಿಗೊಳಿಸಿ ಮತ್ತು ನಮಗೇ ನಾವೇ ಸಮರ್ಪಿಸಿಕೊಂಡಿದೇವೆ, ಆದ್ದರಿಂದ ಭಾರತದೇಶವು ಸಮಾನತೆಯಲ್ಲಿ ಸಾಗಲು ಸಾಧ್ಯವಾಗುತ್ತಿದೆ, ಅಲ್ಲಲ್ಲಿ ಒಂದಷ್ಟು ದೌರ್ಜಬ್ಯ, ವರ್ಗಬೇಧ, ಜಾತಿಬೇಧ, ಅಸಮಾನತೆ ತಲೆದೊರುತ್ತಿವೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷ ಶಿವಶಂಕರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್, ಎಸ್.ಟಿ.ಎಂ.ಸಿ ಅಧ್ಯಕ್ಷ ರಮೇಶ್, ಬೋರೇಗೌಡ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಜಮ್ಮಲ್ ತನ್ವೀರ್ ಪಾಷಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೈಕುಂಠ ಹಾಗೂ ಶಾಲಾ ಸಿಬ್ಬಂದಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!