Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಣೆ

ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಕ್ರಾಂತಿ ಜ್ಯೋತಿ ಅಕ್ಷರದತ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಕೇಕ್ ಕತ್ತರಿಸಿಸುವ ಮೂಲಕ ಜನ್ಮದಿನಾಚರಣೆಗೆ ಚಾಲನೆ ನೀಡಿದ  ಜನವಾದಿ ಸಂಘಟನೆಯ  ಜಿಲ್ಲಾ ಕಾರ್ಯದರ್ಶಿ ಸುಶೀಲ ಮಾತನಾಡಿ, ಮಹಾರಾಷ್ಟ್ರದಲ್ಲಿ ಜನಿಸಿದ ಸಾವಿತ್ರಿ ಬಾಯಿ ಫುಲೆ ಅವರು ದಲಿತರು ಹಾಗೂ ಶೂದ್ರ ಕುಟುಂಬದಲ್ಲಿ ಹುಟ್ಟಿರುವ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸುವುದರಲ್ಲಿ ಯಶಸ್ವಿಯಾಗಿ ದೇಶದ ಮೊದಲ ಶಿಕ್ಷಕಿ ಎಂಬ ಹೆಸರನ್ನು ಪಡೆದಿದ್ದಾರೆ. ಮಹಿಳಾ ಶಿಕ್ಷಣ ಮತ್ತು ವಿಮೋಚನೆಗೆ ಅವರ ಕೊಡುಗೆಗಳು ಶ್ಲಾಘನೀಯ ಮತ್ತು ಇಂದಿಗೂ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಖಜಾಂಚಿ ಜಯಶೀಲ. ತಾಲೂಕು ಸಮಿತಿ ಸದಸ್ಯರಾದ ಸುವರ್ಣ, ನಾಗರತ್ನ, ರತ್ನಮ್ಮ, ಶಿಕ್ಷಕರಾದ ಬಿ.ಟಿ ರಾಮಲಿಂಗಯ್ಯ, ಗೋವಿಂದ, ಸುಧಾ ಹೆಗಡೆ, ಪಾಯಿಮಾ ಬೇಗಂ, ನಾಗರಾಜು,  ದಿವ್ಯಶ್ರೀ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!