Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬಸರಾಳು ಹೋಬಳಿ ಕೇಂದ್ರದ ಅಭಿವೃದ್ದಿಗೆ ಆಗ್ರಹ

ಮಂಡ್ಯ ತಾಲ್ಲೂಕಿನ “ಬಸರಾಳು” ಹೋಬಳಿ ಕೇಂದ್ರದ ಅಭಿವೃದ್ಧಿಗೆ ಅತ್ಯವಶ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಿ ಸಮಗ್ರವಾಗಿ ಅಭಿವೃದ್ದಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಶಾಸಕ ಪಿ.ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಇಂದು ಬಸರಾಳಿನಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ಅರ್ಪಿಸಿದ ಅವರು, ಬಸರಾಳು ಹೋಬಳಿಯಲ್ಲಿ ಬಹುತೇಕ ಗ್ರಾಮಗಳ ಜಮೀನುಗಳು ಹೇಮಾವತಿ ನಾಲಾ ಅಚ್ಚುಕಟ್ಟು ಪ್ರದೇಶವಾಗಿದ್ದು, ಕಳೆದ 30 ವರ್ಷದಲ್ಲಿ ನಿರ್ಮಾಣಗೊಂಡಿರುವ ನಾಲೆಗಳಲ್ಲಿ ನೀರು ಹರಿಸದೆ, ನಿಮಾನುಸಾರ ಅರೆಖುಷ್ಠಿ ಬೆಳೆಗೆ ನೀರು ನೀಡದೆ, ಅನ್ಯಾಯಕ್ಕೊಳಗಾಗಿರುವ ಈ ಭಾಗದ ರೈತರ ಅಭ್ಯುದಯಕ್ಕಾಗಿ ಈ ಕೂಡಲೆ ಅರೆಖುಷ್ಠಿ ಬೆಳೆಗೆ ಪ್ರತಿ ಮುಂಗಾರಿನಲ್ಲಿ ನೀರು ಹರಿಸುವ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

“ಬಸರಾಳು” ಹೋಬಳಿ ಕೇಂದ್ರವಾಗಿರುವ ಕಾರಣ ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಸ್ಮಾರಕ ಭವನದ ನಿರ್ಮಾಣಕ್ಕಾಗಿ ಕನಿಷ್ಠ 2 ಎಕರೆ ಭೂಮಿ ಮೀಸಲಿರಿಸಬೇಕು ಮತ್ತು ದೊಡ್ಡ ಪ್ರಮಾಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಸ್ಮಾರಕ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿ, ಭವನ ನಿರ್ಮಾಣ ಮಾಡುವ ಮೂಲಕ ಶೋಷಿತ ಸಮುದಾಯಗಳ ಆತ್ಮಸ್ಥೆರ್ಯ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಬಸರಾಳು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ, ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಬೇಕು. ಈ ಕೇಂದ್ರಕ್ಕೆ 5 ಜನ ವೈದ್ಯರು ಮತ್ತು ಸಬ್ಬಂದಿ ಹಾಗೂ ಆಸ್ಪತ್ರೆ ಕಟ್ಟಡದ ವಿಸ್ತರಣೆ ಸಹಿತ 50 ಹಾಸಿಗೆಯುಳ್ಳ ಅಸ್ಪತ್ರೆಯನ್ನಾಗಿಸಿ, ಈ ಭಾಗದ ಜನಸಾಮಾನ್ಯರ ಆರೋಗ್ಯ ಸೇವೆಗೆ ನೆರವಾಗಬೇಕು ಎಂದು ಕೋರಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ