ಡಾ.ಜೀಶಂಪ ಸಾಹಿತ್ಯ ವೇದಿಕೆ ಮಂಡ್ಯ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್, ಕನ್ನಂಬಾಡಿ, ಕಾವೇರಿಪ್ರಭ ದಿನಪತ್ರಿಕೆ ಇವರ ಆಶ್ರಯದಲ್ಲಿ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಸ್ಮರಣಾರ್ಥ ಮಾ.10ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯನಗರದ ಗಾಂಧಿ ಭವನ 5ನೇ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸಾಹಿತಿ ಡಾ.ಬಿ.ಸಿ.ವಿಜಯಕುಮಾರ್ ಬಲ್ಲೇನಹಳ್ಳಿ ಸಮ್ಮೇಳಾನಾಧ್ಯಕ್ಷತೆ ವಹಿಸುವರು. ಹಲವು ಸಾಧಕರಿಗೆ ಪ್ರೇಮಕವಿ ಕೆ.ಎಸ್.ನ. ಸಾಹಿತ್ಯ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ‘ಕನ್ನಡರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.




