ಮಳವಳ್ಳಿ ತಾಲೂಕಿನ ಅಕ್ರಮ ಭೂ ಕಬಳಿಕೆ ವಿಚಾರವಾಗಿ ವಿಶೇಷ ತನಿಖೆ ತಂಡವನ್ನು ರಚಿಸಿ ಎಂದು ಮುಖ್ಯಮಂತ್ರಿ ಮನವಿ ಮಾಡುತ್ತೇನೆ ಎಂದು ಶಾಸಕ ಪಿಎಂ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ತಾಲೂಕಿನಲ್ಲಿ ಸರ್ಕಾರಿ ಜಮೀನುಗಳು ಯಾರೋ ವ್ಯಕ್ತಿಗೆ ಪರಭಾರೆ ಆಗುತ್ತಿದೆ ಎಂದು ನಾನು ಕೆಲವು ವರ್ಷಗಳಿಂದ ಧ್ವನಿ ಎತ್ತುತ್ತಿದ್ದು, ನಾನು ಶಾಸಕನಾದ ಕೂಡಲೇ ಮುಖ್ಯಮಂತ್ರಿಗಳಿಗೆ ನಮ್ಮ ತಾಲೂಕಿನಲ್ಲಿ ಸರ್ಕಾರಿ ಜಮೀನುಗಳು ಪರಭಾರೆಯಾಗುತ್ತಿದೆ, ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡ ಬೇಕೆಂದು ಮನವಿ ಮಾಡಿದೆ. ಅದರಂತೆ ಅಧಿಕಾರಿಗಳು ತನಿಖೆ ನಡೆಸಿ, ಸುಮಾರು 300 ಎಕರೆ ಜಮೀನನ್ನು ಹಿಂಪಡೆದಿತ್ತು, ಇನ್ನು ಸುಮಾರು 400 ಎಕರೆ ತನಿಖಾ ಹಂತದಲ್ಲಿದೆ, ಸರ್ಕಾರಿ ಭೂ ಕಬಳಿಕೆ ವಿಚಾರದಲ್ಲಿ ಸ್ವಂತ ಮನೆಯವರೆ ಇದ್ದರೂ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಭೂ ಕಬಳಿಕೆ ಕೇಸನ್ನು ನಿವೃತ್ತಿ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ತನಿಖಾ ತಂಡ ಮತ್ತು ಕಂದಾಯ ಅಧಿಕಾರಿಗಳ ತಂಡ ತನಿಖೆ ಮಾಡಿ ಚುರುಕು ಮಾಡಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.




