Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ‘ನನ್ನ ಭಾರತ-ವಿಕಸಿತ ಭಾರತ’ ಭಾಷಣ ಸ್ಪರ್ಧೆ

ಮಂಡ್ಯ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ವತಿಯಿಂದ ನಗರದ ನೆಹರು ಯುವ ಕೇಂದ್ರದ ಸಭಾಂಗಣದಲ್ಲಿ ನಡೆದ ‘ನನ್ನ ಭಾರತ-ವಿಕಸಿತ ಭಾರತ’ ಎಂಬ ವಿಷಯದ ಬಗ್ಗೆ ನಡೆದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯ ಕಾರ್ಯಕ್ರಮವನ್ನು ಪ್ರಾಧ್ಯಾಪಕ ಪ್ರೊ. ಡಿ. ದೇವರಾಜೇಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವಿಕಸಿತ ಭಾರತ ಅಭಿವೃದ್ಧಿಯ ಸುತ್ತಮುತ್ತಲ ಚರ್ಚೆ ಬಹುಮುಖ್ಯವಾಗಿದೆ. ಆರ್ಥಿಕ ಬೆಳವಣಿಗೆಗೆ ಭಾರತ ಸ್ಥಿರ ಆರ್ಥಿಕ ಮತ್ತು ಜಾಗತಿಕವಾಗಿ ಹೇಗೆಲ್ಲಾ ಸಾಧನೆ ಮಾಡಿ ಹೊರ ಹೊಮ್ಮುತ್ತಿದೆ. ಈ ಸ್ಥಾನಮಾನ ಅತಿದೊಡ್ಡ ಆರ್ಥಿಕತೆಯಲ್ಲಿ ಒಂದಾಗುತ್ತಿರುವ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

ಮೂಲ ಸೌಕರ‍್ಯ ಅಭಿವೃದ್ಧಿ ಪಥದಲ್ಲೂ ಭಾರತ ಅದ್ವಿತೀಯ ಸಾಧನೆ ಮಾಡಿದೆ. ಜೊತೆಗೆ ತಾಂತ್ರಿಕ ಪ್ರಗತಿಗಳು ಸಹ ಮುಂಚೂಣಿಯಲ್ಲಿವೆ, ಆ ತಾಂತ್ರಿಕ ಪ್ರಗತಿಯಲ್ಲಿ ತಂತ್ರಜ್ಞಾನ, ನಾವಿನ್ಯತೆಯಲ್ಲಿ ತಂತ್ರಜ್ಞಾನ, ಐಟಿಯಲ್ಲಿ ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಧನೆ ಮಾಡಿದ್ದೇವೆ ಎಂದು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಐ.ಆರ್. ಮೂರ್ತಿ, ಕಾರ್ಮೆಲ್ ಕಾನ್ವೆಂಟ್ ಶಾಲೆಯ ಹಿಂದಿ ಶಿಕ್ಷಕ ಕೆ.ಎಂ. ಕುಮಾರ್, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಕಚೇರಿಯ ಅಧೀಕ್ಷಕ ನಾಗಭೂಷಣ್ ಮತ್ತಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!