Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆರಗೋಡು ಧ್ವಜ ವಿವಾದ| ಕೋಮುವಾದಿಗಳ ಜತೆ ಜೆಡಿಎಸ್ ಸೇರಿರುವುದು ದುರಂತ: ಕೃಷ್ಣೇಗೌಡ

ಬರೆದುಕೊಟ್ಟ ಮುಚ್ಚಳಿಕೆ ಮತ್ತು ಗ್ರಾಮ ಪಂಚಾಯತಿ ಹಾಕಿರುವ ಷರತ್ತುಗಳನ್ನು ಉಲ್ಲಂಘಿಸಿ ಅನ್ಯ ಧ್ವಜ ಹಾರಿಸುವ ಮೂಲಕ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ಕೋಮುವಾದಿ ಶಕ್ತಿಗಳ ಜೊತೆ ಜೆಡಿಎಸ್ ಪಕ್ಷ ಸೇರಿರುವುದು ನಾಡಿನ ದುರಂತವಾಗಿದೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ

ರಾಷ್ಟ್ರಧ್ವಜ ಮತ್ತು ನಾಡ ಧ್ವಜಹಾರಿಸಲು ಅನುಮತಿ ಪಡೆದು ಈಗ ಅನ್ಯ ಧ್ವಜ ಹಾರಿಸುವ ಮೂಲಕ ಗಲಭೆ ಉಂಟುಮಾಡುತ್ತಿರುವ ಕಿಡಿಗೇಡಿಗಳ ಕುತಂತ್ರಕ್ಕೆ ಬಲಿಯಾಗದೇ  ಸಹಕರಿಸದೆ ಶಾಂತಿ ಕಾಪಾಡಿಕೊಳ್ಳಬೇಕೆಂದು ಕೆರಗೋಡು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಅವರು ಮನವಿ ಮಾಡಿದ್ದಾರೆ.

ರಾಷ್ಟ್ರ ಧ್ವಜ ಮತ್ತು ನಾಡ ಧ್ವಜ ಹಾರಿಸಲು ಧ್ವಜ ಸ್ಥಂಭ ನಿರ್ಮಿಸಲು ಅನುಮತಿ ಪಡೆದು ಈಗ ಕೇಸರಿ ಬಾವುಟ ಹಾರಿಸುವ ಮೂಲಕ ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿರುವ ಕೋಮುವಾದಿಗಳ ಸಂಚಿಗೆ ಕೆರಗೋಡು ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆ ಬಲಿಯಾಗಬಾರದು, ಕೋಮುವಾದಿಗಳ ಈ ಹುನ್ನಾರವನ್ನು ಸೋಲಿಸಬೇಕೆಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ರಾಷ್ಟ್ರಧ್ವಜ ಮತ್ತು ನಾಡಧ್ವಜ ಹಾರಿಸಲು ಸ್ಥಾಪಿಸಿರುವ ಸ್ಥಂಭದಲ್ಲಿ ಬೇರಾವುದೇ ಧ್ವಜ ಹಾರಿಸುವುದು ದೇಶ ದ್ರೋಹದ ಮತ್ತು ಕನ್ನಡ ದ್ರೋಹದ ಕೆಲಸವಾಗಿದೆ. ಇಂತಹ ಶಕ್ತಿಗಳ ಆಟಾಟೋಪಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ನಿಗ್ರಹಿಸಬೇಕು.  ಹುಬ್ಬಳ್ಳಿ ಈದ್ಗಾ ವಿವಾದ, ಕಾಶ್ಮೀರ ಸಮಸ್ಯೆಗಳ ವಿಚಾರದಲ್ಲಿ ರಚನಾತ್ಮಕ ಮತ್ತು ಜಾತ್ಯಾತೀತ ಪಾತ್ರ ವಹಿಸಿದ್ದ ಜೆಡಿಎಸ್ ಪಕ್ಷ, ಅಲ್ಪ ರಾಜಕೀಯ ಲಾಭಕ್ಕಾಗಿ ಕೋಮುವಾದಿಗಳ ಜೊತೆ ಸೇರಿರುವುದ ಖಂಡನೀಯ ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!