Friday, September 20, 2024

ಪ್ರಾಯೋಗಿಕ ಆವೃತ್ತಿ

ನರೇಂದ್ರಸ್ವಾಮಿ ಆರೋಪ ಸತ್ಯಕ್ಕೆ ದೂರ: ಮುನಿರಾಜು

ಸಿ.ಟಿ. ರವಿ ಅವರು ನಾವು ಹಾರಿಸಿದ್ದು ಹನುಮಧ್ವಜವೇ ಹೊರತು ತಾಲಿಬಾನ್ ಧ್ವಜವಲ್ಲ ಎಂದು ಹೇಳಿದ್ದಾರೆ. ಆದರೆ ಅದನ್ನು ತಿರುಚಿ ಶಾಸಕ ಪಿ.ಎಂ ನರೇಂದ್ರಸ್ವಾಮಿಯವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪ ಮಾಡುತ್ತಿದ್ದಾರೆಂದು ಬಿಜೆಪಿ ಮುಖಂಡ ಮುನಿರಾಜು ಸ್ವಷ್ಟಪಡಿಸಿದರು.

ಮಳವಳ್ಳಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಸಿ.ಟಿ.ರವಿ ನಾವು ಹಾರಿಸಿದ್ದ ಹನುಮ ಧ್ವಜ ಹೊರತು ತಾಲಿಬಾನ್ ಧ್ವಜವಲ್ಲ ಎಂದು ಹೇಳಿದ್ದಾರೆ. ಆದರೆ ಅದನ್ನು ನರೇಂದ್ರ ಸ್ವಾಮಿ ತಿರುಚಿದ್ದಾರೆ ಎಂದರು.

ಕೆರೆಗೋಡಿನಲ್ಲಿ ಚಂದಾ ವಸೂಲಿ ಮಾಡಿ ಧ್ವಜಸ್ತಂಭ ನಿರ್ಮಿಸಿ ಹನುಮ ಧ್ವಜವನ್ನು ಹಾರಿಸಲಾಗಿತ್ತು. ಆದರೆ ರಾತ್ರೋರಾತ್ರಿ ಹನುಮಧ್ವಜವನ್ನು ಕೆಳಗಿಳಿಸಿ ಮಧ್ಯಾಹ್ನದಲ್ಲಿ ರಾಷ್ಟ್ರಧ್ವಜ ಹಾರಿಸುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದಾಗಿದ್ದು, ಘಟನೆಯನ್ನು ಖಂಡಿಸಿ ಫೆ. 9 ರಂದು ಬಿಜೆಪಿ ಮಂಡ್ಯ ಬಂದ್ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ,ಕಾಂಗ್ರೆಸ್ ಪಕ್ಷದವರು ಜನಪರ ಸಂಘಟನೆಗಳ ಮೂಲಕ ಫೆ.7 ರಂದು ಪ್ರತಿಭಟನೆ ಮಾಡಿಸುತ್ತಿದ್ದಾರೆಂದು ದೂರಿದರು.

ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ನಾಯಕರು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ, ಅವರ ಪರ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಲ್ಲಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆಂದು ಹೇಳಿದರು.

ಬಿಜೆಪಿ ಪಕ್ಷ ಶಿಸ್ತಿನ ಪಕ್ಷವಾಗಿದ್ದು, ಅದರಡಿಯಲ್ಲಿಯೇ ನಾಯಕರು ಕೆಲಸ ನಿರ್ವಹಿಸುತ್ತಿದ್ದಾರೆ. ರಾಜಕಾರಣದಲ್ಲಿ ಯಾವ ರೀತಿ ಮಾತನಾಡಬೇಕೆಂಬುದನ್ನು ಅರಿತುಕೊಳ್ಳಬೇಕು, ರಾಜ್ಯದ ಮುಖ್ಯಮಂತ್ರಿಗಳು ರಾಷ್ಟ್ರಪತಿಗಳ ವಿರುದ್ದ ಏಕವಚನದಲ್ಲಿ ಪ್ರಯೋಗ ಮಾಡುತ್ತಾರೆ. ಮಾತನಾಡುವಾಗ ಯೋಚನೆ ಮಾಡಬೇಕು, ಅದೇ ರೀತಿ ಅವಾಚ್ಯ ಶಬ್ದಗಳನ್ನು ಬಳಸಿದರೇ ಜನರೇ ಬುದ್ದಿ ಕಲಿಸಲಿದ್ದಾರೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕುಮಾರಸ್ವಾಮಿ, ಕೃಷ್ಣ, ಯಮದೂರು ಸಿದ್ದರಾಜು, ಮಧುಗಂಗಾಧರ್, ದೇವರಾಜ್, ಹೆಬ್ಬಾಣಿ ಬಸವರಾಜು,ಚಿಕ್ಕಣ್ಣ, ಅಶೋಕ್, ಕೆ.ಸಿ ನಾಗೇಗೌಡ, ಮಹೇಶ್, ಶಶಿ, ಕಾಂತರಾಜು ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!