Thursday, September 19, 2024

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆ| ಐವನ್ ಡಿಸೋಜಾ ಅಧ್ಯಕ್ಷತೆಯಲ್ಲಿ ಮಂಡ್ಯ ಕಾಂಗ್ರೆಸ್ ಸಭೆ

ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಮೈಸೂರು ವಿಭಾಗದ ಉಸ್ತುವಾರಿ ಐವನ್ ಡಿಸೋಜಾ ಅಧ್ಯಕ್ಷತೆಯಲ್ಲಿ ಪಕ್ಷದ ಜವಾಬ್ದಾರಿ ಹಂಚುವ ಸಂಬಂಧ ಬೂತ್ ಮಟ್ಟದ ಮುಖಂಡರುಗಳ ಸಭೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಮೈಸೂರು ವಿಭಾಗದ BLA2 ಉಸ್ತುವಾರಿಗಳಾದ ಐವಾನ್ ಡಿಸೋಜಾ ಮಾತನಾಡಿ. ಲೋಕಸಭಾ ಚುನಾವಣೆ ಯನ್ನು ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನೂರಕ್ಕೆ ನೂರರಷ್ಟು ಗೆಲ್ಲಿಸುವ ಉದ್ದೇಶದಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹೀಗಾಗಿ ಸಭೆಯನ್ನು ನಡೆಸಿ ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ಒಟ್ಟುಗೂಡಿಸುವ ಕೆಲಸವನ್ನು ಹಾಗೂ ಗ್ಯಾರಂಟಿ ಯೋಜನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಮಾಡಲಾಗುತ್ತಿದೆ ಎಂದರು.

ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಮಂಡ್ಯ ವಿಭಾಗದ BLA2 ಉಸ್ತುವಾರಿಗಳಾದ ಎಂ.ಎಸ್.ಚಿದಂಬರ್ ಮಾತನಾಡಿ. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್‌ರವರ ಆದೇಶದಂತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ BLA2 ನ್ನು ನೇಮಿಸಿ ಚುನಾವಣಾ ಮುಗಿಯುವ ವರೆಗೂ ಅವರರ ಬೂತ್‌ನ ನಿಗಾ ವಹಿಸಿ ಜವಾಬ್ದಾರಿಯುತವಾಗಿ ಕೆಲಸವನ್ನು ಮಾಡಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಗಣ್ಯರನ್ನು ಕಾಂಗ್ರೆಸ್ ಮುಖಂಡರು ಆತ್ಮೀಯವಾಗಿ ಅಭಿನಂದಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ ಡಿ ಗಂಗಾಧರ್, ಕೆಪಿಸಿಸಿ ಸದಸ್ಯರಾದ ತ್ಯಾಗರಾಜು, ಹನುಮಂತು ನಗರಸಭಾ ಸದಸ್ಯ ಶ್ರೀಧರ್, ಮುಖಂಡರಾದ ಸೋಮಶೇಖರ್, ರಾಮಕೃಷ್ಣ, ವೀಣಾ ಶಂಕರ್, ಶಕುಂತಲಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ನಂತರ ಇಂದಿನ ಕೇಂದ್ರಸರ್ಕಾರದ ಬಜೆಟ್ ಬಗ್ಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಮೈಸೂರು ವಿಭಾಗದ BLA2 ಉಸ್ತುವಾರಿ ಐವಾನ್ ಡಿಸೋಜಾ ಅವರು, ಬಜೆಟ್ ರೈತಪರ, ಯುವಕರು, ಕಾರ್ಮಿಕರು, ಬಡವರ ಹಾಗೂ ಮಧ್ಯಮವರ್ಗದ ಪರ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ರಾಜ್ಯ ಸರ್ಕಾರದ ಈಡೇರಿಸಿದೆ, ಆದರೆ ಕೇಂದ್ರ ಸರ್ಕಾರ ನೀಡಿರುವ ಯಾವ ಮಾತನ್ನು ಜಾರಿಗೆ ತಂದಿಲ್ಲ ಪೊಳ್ಳು ಭರವಸೆಯನ್ನು ನೀಡಿದ ಬಿಜೆಪಿ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ, ಇದು ಜಾರಿಯಾಗದ ಬಜೆಟ್ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!