Friday, September 20, 2024

ಪ್ರಾಯೋಗಿಕ ಆವೃತ್ತಿ

ಚಂಡೀಗಢ ಮೇಯರ್ ಚುನಾವಣಾ ಅಕ್ರಮ ಪ್ರಕರಣ| ‘ಆಪ್’ ಅಭ್ಯರ್ಥಿಯೇ ವಿಜಯಿ ಎಂದ ಸುಪ್ರೀಂ ಕೋರ್ಟ್‌

ದೇಶಾದ್ಯಂತ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿ ನಡೆಸಿದ ಅಕ್ರಮಕ್ಕೆ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ಇಂದಿನ ವಿಚಾರಣೆಯ ವೇಳೆ ಅಸಿಂಧು ಮತಗಳನ್ನು ಸಿಂಧುವೆಂದು ಪರಿಗಣಿಸಬಹುದು. ಆದ್ದರಿಂದ ನಿಜವಾದ ವಿಜಯಿ ಅಭ್ಯರ್ಥಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂದು ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ ಚುನಾವಣಾ ಫಲಿತಾಂಶಕ್ಕೆ ತಕ್ಷಣ ತಡೆ ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಪಾಲಿಕೆ ಸದಸ್ಯ ಕುಲದೀಪ್ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯನ್ನು ಸಿಜೆಐ ಡಿವೈ ಚಂದ್ರಚೂಡ್ ಅವರಲ್ಲದೆ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠ ಕೂಡ ವಿಚಾರಣೆ ನಡೆಸಿ, ಈ ತೀರ್ಪು ಪ್ರಕಟಿಸಿದೆ.

ಚಂಡೀಗಢ ಮೇಯರ್ ಚುನಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಅನಿಲ್ ಮಾಸಿಹ್ ವಿರುದ್ಧ ಸುಪ್ರೀಂ ಕೋರ್ಟ್  ತೀವ್ರ ವಾಗ್ದಾಳಿ ನಡೆಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಬಿಜೆಪಿ ಮತ್ತು ಎಎಪಿ ನಡುವಿನ ವಿವಾದದ ಎಂಟು ‘ಅಸಿಂಧು’ ಮತಗಳನ್ನು ಪರಿಶೀಲಿಸಿತು. ‘ಮರು ಎಣಿಕೆ ಮಾಡಲಾಗುವುದು.ಮಾನ್ಯವೆಂದು ಪರಿಗಣಿಸಲಾಗುವುದು ಮತ್ತು ಈ ಫಲಿತಾಂಶಗಳ ಆಧಾರದ ಮೇಲೆ ಆಮ್ ಆದ್ಮಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ವಿಜಯಿ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

“>

ಈ ಸಿಂಧುತ್ವದೊಂದಿಗೆ ಆಪ್ ಮತ್ತು ಕಾಂಗ್ರೆಸ್ ಮೈತ್ರಿಗೆ ಸ್ಪಷ್ಟ ಜಯ ಸಿಗಲಿದೆ. ಈ ಮೂಲಕ ಬಿಜೆಪಿ ಭಾರೀ ಮಖಭಂಗದೊಂದಿಗೆ ಪ್ರಜಾಪ್ರಭುತ್ವ ಅತೀ ದೊಡ್ಡ ಅಕ್ರಮಕ್ಕೆ ಚುನಾವಣಾಧಿಕಾರಿ ಕಾರಣವಾಗಿದ್ದಾರೆ.

ಚುನಾವಣಾಧಿಕಾರಿ ಅನಿಲ್ ಮಾಸಿಹ್‌ ವಿರುದ್ಧ ತನಿಖೆ 

ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್‌ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಮತಪತ್ರವನ್ನು ವಿರೂಪಗೊಳಿಸಿದ ಚುನಾವಣಾಧಿಕಾರಿ (ರಿಟರ್ನಿಂಗ್‌ ಆಫೀಸರ್‌) ಅನಿಲ್ ಮಾಸಿಹ್ ಅವರನ್ನು ತೀರ್ಪಿನಲ್ಲೂ ತೀವ್ರ ತರಾಟೆಗೆ ತೆಗೆದುಕೊಂಡ ಸಿಜೆಐ ಡಿವೈ ಚಂದ್ರಚೂಡ್ ಅವರ ನೇತೃತ್ವದ ಪೀಠ, ತಮ್ಮ ಸಹಿ ಹಾಕುವ ಕರ್ತವ್ಯ ಮಾತ್ರ ನಿರ್ವಹಿಸುವುದರ ಬದಲು ಟಿಕ್ ಮಾರ್ಕ್ ಮಾಡುವ ಮೂಲಕ ವಿರೂಪಗೊಳಿಸಿದ್ದಾರೆ. ಉದ್ದೇಶಪೂರ್ವಕವಾಗಿ ಟಿಕ್ ಮಾಡುವ ಮೂಲಕ ಚುನಾವಣಾಧಿಕಾರಿ ತಪ್ಪೆಸಗಿದ್ದಾರೆ. ಆ ಮೂಲಕ ಚುನಾವನಾ ಪ್ರಜಾಪ್ರಭುತ್ವಕ್ಕೆ ಅವಮಾನ ಎಸಗಿದ್ದಾರೆ” ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ಅನಿಲ್ ಮಾಸಿಹ್ ವಿರುದ್ಧ ಸೆಕ್ಷನ್ 340 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮಾಡಬೇಕು. ಸೆಕ್ಷನ್ 340 ಸಿಆರ್‌ಪಿಸಿ ಅಡಿಯಲ್ಲಿ ಅವರ ವಿರುದ್ಧ ಏಕೆ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬ ಕಾರಣ ಕೇಳಿ ಅನಿಲ್ ಮಸಿಹ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ರಿಜಿಸ್ಟ್ರಾರ್ ಜುಡಿಷಿಯಲ್ ಅವರಿಗೆ ನಿರ್ದೇಶನ ನೀಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!