Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಭಕ್ತರ ಸಮ್ಮುಖದಲ್ಲಿ ಜರುಗಿದ ದಂಡಿನಮಾರಮ್ಮ ಹಬ್ಬ

ಮಳವಳ್ಳಿ ಪಟ್ಟಣ ಹೊರವಲಯದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧಿ ಪಡೆದಿರುವ ಶಕ್ತಿ ದೇವತೆ ದಂಡಿನಮಾರಮ್ಮ ಹಬ್ಬವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮ ಅಕ್ಕ ತಂಗಿಯರು ಆಗಿದ್ದು, ಅಕ್ಕ ದಂಡಿನ ಮಾರಮ್ಮನವರಿಗೆ ಮೊದಲ ಹಬ್ಬ ಆದ ನಂತರ ಮೂರು ದಿನಕ್ಕೆ ಪಟ್ಟಲದಮ್ಮ ಸಿಡಿಹಬ್ಬದ ಸಡಗರ ಸಂಭ್ರಮದಿಂದ ನಡೆಯಲಿದೆ.

ಮಳವಳ್ಳಿ ಜನತೆಗೆಯನ್ನು ವಿವಿಧ ಪ್ರಾಂತ್ಯದ ಜನರು ದಂಡೆತ್ತಿ ಬಂದು ತೀವ್ರವಾಗಿ ಹಿಂಸಿಸುತ್ತಿದ್ದರು. ನಾಡಿನ ಜನತೆಯನ್ನ ಕಾಪಾಡುವಂತೆ ಪ್ರಾಥಿ೯ಸಿಕೊಂಡ ಹಿನ್ನೆಲೆಯಲ್ಲಿ ದಂಡೆತ್ತಿ ಬಂದವರಿಂದ ಜನತೆಯನ್ನು ಕಾಪಾಡಿ ದಂಡಿನಮಾರಮ್ಮ ರಾಗಿ ಪಟ್ಟಣದ ನೆಲೆಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ದಂಡಿನಮಾರಮ್ಮ ದೇವಸ್ಥಾನವನ್ನು ವಿವಿಧ ಹೂವು ಮತ್ತು ವಿದ್ಯುತ್ ದೀಪಗಳಿಂದ ಆಂಲಕರಿಸಲಾಗುತ್ತು.
ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ಹೊಸ ವಸ್ತ್ರತೊಟ್ಟ ಮಹಿಳೆಯರು ತಂಬಿಟ್ಟಿನ ಅರತಿಯೊಂದಿಗೆ ಕುಟುಂಬ ಸಮೇತ ಆಗಮಿಸಿ ದೇವರ ದಶ೯ನ ಪಡೆದು ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಹಬ್ಬದ ಹಿನ್ನೆಲ್ಲೆಯಲ್ಲಿ ದೇವರಿಗೆ ಮುಂಜಾನೆಯಿಂದಲೇ ವಿವಿಧ ರೀತಿಯ ಅಭೀಷೇಕ ಹಾಗೂ ಪೂಜಾ ಕೈಂಕಯ೯ಗಳು ನಡೆದವು.ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸಾರದಿ ಸಾಲಿನಲ್ಲಿ ನಿಂತು ದೇವಿ ದಶ೯ನ ಪಡೆದರು.

ದೇವಸ್ಥಾನಕ್ಕೆ ಆಗಮಿಸಿ ದೇವರ ದಶ೯ನ ಪಡೆದು ನಂತರ ಮಾತನಾಡಿದ ಪಿ.ಎಂ ನರೇಂದ್ರಸ್ವಾಮಿ, ಸಮಸ್ತ ಜನತೆಗೆ ದಂಡಿನಮಾರಮ್ಮ ಪಟ್ಟಲದಮ್ಮ ಸಿಡಿ ಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಮಳೆ ಬೆಳೆಯಾಗಿ ನಾಡಿನ ಜನ ಜನ ಸಮೃದ್ಧಿಯಿಂದ ಬದುಕುವಂತೆ ದಂಡಿನ ಮಾರಮ್ಮ ಕಾಪಾಡಲಿ. ಶಾಂತಿ ಸೌಹಾರ್ದತೆಯಿಂದ ಸಾವ೯ಜನಿಕರು ಸಿಡಿ ಹಬ್ಬವನ್ನು ಆಚರಿಸಬೇಕು, ಹಬ್ಬವನ್ನು ವಿಜೃಂಭಣೆಯಿಂದ ಆಚರಿಲು ತಾಲ್ಲೂಕು ಆಡಳಿತ ವತಿಯಿಂದ ಪೂರ್ವ ಸಿದ್ದತೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್ ಎನ್ ವಿಶ್ವಾಸ್, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಕಾಯಾ೯ಧ್ಯಕ್ಷ ಮಲ್ಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ್, ಟಿಎಪಿಸಿಎಂಎಸ್ ನಿರ್ದೇಶಕ ಲಿಂಗರಾಜು, ಮುಖಂಡರಾದ ಕಿರಣ್ ಶಂಕರ್, ನಂಜುಂಡಸ್ವಾಮಿ, ವಿಶ್ವ, ಶಾಂತರಾಜು ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!