ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗುವ ದೃಷ್ಟಿ ಯಿಂದ ರೈತರು ಬೆಳೆದಂತಹ ತೋಟಗಾರಿಕೆ ಬೆಳೆಗಳನ್ನು ದಲ್ಲಾಳಿಗಳ ಹಾವಳಿಯಿಂದ ತಪ್ಪಿಸಿ, ನೇರವಾಗಿ ಹಾಪ್ ಕಾಮ್ಸ್ ಸಂಸ್ಥೆ ವತಿಯಿಂದ ಖರೀದಿಸಿ, ಗ್ರಾಹಕರಗಳಿಗೆ ತಾಜಾತನದಲ್ಲಿ ನಿಖರ ಬೆಲೆ ಹಾಗೂ ಕರಾರುವಕ್ಕಾದ ತೂಕದಲ್ಲಿ ಮಾರಾಟ ಮಾಡುವ ಸಲುವಾಗಿ ಮದ್ದೂರು ತಾಲೂಕಿನ ಹೋಬಳಿ ಕೇಂದ್ರಗಳಲ್ಲಿಯೂ ಮತ್ತಷ್ಟು ಹಾಪ್ ಕಾಮ್ಸ್ ಮಾರಾಟ ಮಳಿಗೆಗಳನ್ನು ತೆರೆಯಲು ಸಹಕರಿಸುವುದಾಗಿ ಮದ್ದೂರು ಶಾಸಕ ಕೆ. ಎಂ.ಉದಯ ತಿಳಿಸಿದರು.
ಮದ್ದೂರು ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ, ಮೈಸೂರು ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ,ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕೆ ಮಾರಾಟ ಮಹಾಮಂಡಳ ನಿಯಮಿತ, ಬೆಂಗಳೂರು ರವರು ನೀಡಿರುವ ಅನುದಾನದಲ್ಲಿ ನಿರ್ಮಿಸಿರುವ ನೂತನ “ಮಾರಾಟ ಮಳಿಗೆ”ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಅನುಕೂಲಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ರೈತರು ಇದರ ಪ್ರಯೋಜನವನ್ನು ಪಡೆಯಬೇಕೆಂದು ರೈತ ಬಾಂಧವರಲ್ಲಿ ಮನವಿ ಮಾಡಿದರು.ಜೊತೆಗೆ ಹಾಪ್ ಕಾಮ್ಸ್ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಡಿ. ಕೃಷ್ಣೇಗೌಡ, ಉಪಾಧ್ಯಕ್ಷ ಕಾಳಯ್ಯ, ಬೆಂಗಳೂರು ಕೆ. ಹೆಚ್. ಎಫ್ ಹಾಗೂ ಮಂಡ್ಯ ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕರಾದ ಯು. ಸಿ. ಶೇಖರ್, ಜಿಲ್ಲಾ ಸಹಕಾರ ಸಂಘಗಳ ಉಪ -ನಿರ್ದೇಶಕರಾದ ಶ್ರೀಮತಿ. ರೇಖಾ, ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರಾದ ಶ್ರೀಮತಿ ಕೆ. ಎನ್. ರೂಪಶ್ರೀ ಹಾಗೂ ಹಾಪ್ ಕಾಮ್ಸ್ ನ ನಿರ್ದೇಶಕರಾದ ಎಸ್.ನಾಗೇಂದ್ರ, ಕೆ. ಜಿ. ತಮ್ಮಣ್ಣ,ಬಿ. ಎಸ್.. ರಾಮಚಂದ್ರ,ಎಸ್. ಬಿ. ಸಿದ್ದರಾಮೇಗೌಡ,ಕೆ. ಮಹೇಶ್, ಪುಟ್ಟಬಸವೇಗೌಡ, ಭೋಜನಾಯಕ,ಹಾಗೂ ಸಂಘದ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಪ್ರದೀಪ್ ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.




